

ಭಟ್ಕಳದ ಪ್ರಸಿದ್ಧ ಚಿನ್ನದ ಪಳ್ಳಿಯಲ್ಲಿ ಇಂದು ಸಾಮರಸ್ಯದ ಮಸೀದಿ ದರ್ಶನ ನಡೆಯಿತು. ಮುಸ್ಲಿಂ ಪುರುಷರನ್ನು ಬಿಟ್ಟು ಇತರರಿಗೆ ಪ್ರವೇಶವಿರದ ಮಸೀದಿ ಎನ್ನುವ ಆರೋಪವಿದ್ದ ಚಿನ್ನದ ಪಳ್ಳಿಯಲ್ಲಿ ಇಂದು ಇಸ್ಲಾಂ ಮತಾನುಯಾಯಿಗಳ ಜೊತೆಗೆ ಇತರ ಧರ್ಮದವರೂ ಸೇರಿ ಚಿನ್ನದ ಪಳ್ಳಿಯಲ್ಲಿ ಸೌಹಾರ್ದತೆಯ ಕಾರ್ಯಕ್ರಮ ಮಾಡುವ ಮೂಲಕ ಎಲ್ಲಾ ಧರ್ಮದವರೂ ಸೌಹಾರ್ದ,ಸಾಮರಸ್ಯದಿಂದರಬೇಕೆಂಬ ಸಂದೇಶ ಸಾರಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ ಮಂದಿರ ಮಸೀದಿಗಳ ಬಗ್ಗೆ ಪರಸ್ಫರರಲ್ಲಿ ಅಪನಂಬಿಕೆ ಹೋಗಲಾಡಿಸಲು ಎಲ್ಲಾ ಧರ್ಮದವರೂ ಮಸೀದಿ,ಮಂದಿರ, ಚರ್ಚ್ ಸೇರಿದಂತೆ ಎಲ್ಲಾ ಧರ್ಮಗಳ ಶೃದ್ಧಾಕೇಂದ್ರ ಭೇಟಿಮಾಡುವುದು ಸಾಮರಸ್ಯಕ್ಕೆ ಸಹಾಯಕ ಎಂದರು.

