

ಹೀಗೆಂದು ಉದ್ಘರಿಸುವಂತೆ ಮಾಡಿದ್ದು ನೀನಾಸಂ ಮರುತಿರುಗಾಟದ ನಾಟಕ ಅಂತರಂಗದ ಪ್ರದರ್ಶನ.
ಸಿದ್ಧಾಪುರ ಶಂಕರಮಠ, ಸಂಸ್ಕøತಿ ಸಂಪದ ಮತ್ತು ಒಡ್ಡೋಲಗ ಹಿತ್ಲಕೈ ಸಹಕಾರ, ಸಂಯೋಜನೆಯಲ್ಲಿ ಶುಕ್ರವಾರ ಶಂಕರಮಠದಲ್ಲಿ ಪ್ರದರ್ಶನಗೊಂಡ ನಾಟಕ ಅಂತರಂಗ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯಿತು. ಸ್ಲೋಮೋಶನ್ ನಿಂದ ನಿಧಾನವಾಗಿ ಪ್ರಾರಂಭವಾಗುವ ಈ ಒಂದುಕಾಲು ತಾಸಿನ ನಾಟಕ ಹೆಚ್ಚು ಮಾತು ಶಬ್ಧಗಳಿಲ್ಲದೆ ನಿಶ್ಯಬ್ಧದಲ್ಲಿ ಪುಟ್ಟ ಹೊಳೆ ದಾಟುವ ಹೊಸ ದೋಣಿಪ್ರಯಾಣಿಕನ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.
ಮನೆಯೊಂದರ ಪ್ರಪಂಚ, ಹೊರಗಿನ ಲೌಕಿಕತೆ ಇವುಗಳ ನಡುವಿನ ಪರಸ್ಪರತೆಯ ತಾಕಲಾಟ ಈ ಕತೆಯನ್ನು ಇಷ್ಟು ವಿಭಿನ್ನವಾಗಿ, ವಿಶಿಷ್ಟವಾಗಿ ಕಟ್ಟಿಕೊಡಲು ಅಭಿನಯಿಸಲು ನೀನಾಸಂ ಮತ್ತು ಅಲ್ಲಿನ ಕಲಾವಿದರಿಂದ ಮಾತ್ರ ಸಾಧ್ಯವೇನೋ ಎನ್ನುವಷ್ಟು ರಸಸ್ವಾದಕ್ಕೆ ಶ್ರಮಿಸಿದನೀನಾಸಂ ತಂಡ ಈ ನಾಟಕದ ಕೇಂದ್ರಬಿಂದು.
ಹೊರದೇಶದ ಕೃತಿ, ಹೊರರಾಜ್ಯ ಕೇರಳದ ನಿರ್ಧೇಶಕ ಶಂಕರ್ ವೆಂಕಟೇಶ್ವರನ್ ನಿರ್ಧೇಶನ ಕನ್ನಡದ ಮಾಧವ ಚಿಪ್ಳಿ ಕನ್ನಡೀಕರಣ ಎಲ್ಲವೂ ಸೇರಿ ಪ್ರತಿಯೊಬ್ಬರ ಅಂತರಂಗವನ್ನು ಬಡಿದೆಬ್ಬಿಸಿ ಅಂತರಂಗದಾ ಮೃದಂಗ ತೋಮ್ ತನನನಾನ ಎನ್ನಿಸುವಷ್ಟು ಅಧ್ಬುತ ಪ್ರಯೋಗ ಪ್ರದರ್ಶಿಸಲು ಶ್ರಮಿಸಿದ ಸಂಘಟಕರು ಕೂಡಾ ಪ್ರೇಕ್ಷಕರ ಮನ ಗೆದ್ದಿದ್ದು ವಿಶೇಶ.
ಚಿನ್ನದ ಪಳ್ಳಿಯಲ್ಲಿ ನಡೆದ ಮಸೀದಿ ದರ್ಶನ
ಭಟ್ಕಳದ ಪ್ರಸಿದ್ಧ ಚಿನ್ನದ ಪಳ್ಳಿಯಲ್ಲಿ ಇಂದು ಸಾಮರಸ್ಯದ ಮಸೀದಿ ದರ್ಶನ ನಡೆಯಿತು. ಮುಸ್ಲಿಂ ಪುರುಷರನ್ನು ಬಿಟ್ಟು ಇತರರಿಗೆ ಪ್ರವೇಶವಿರದ ಮಸೀದಿ ಎನ್ನುವ ಆರೋಪವಿದ್ದ ಚಿನ್ನದ ಪಳ್ಳಿಯಲ್ಲಿ ಇಂದು ಇಸ್ಲಾಂ ಮತಾನುಯಾಯಿಗಳ ಜೊತೆಗೆ ಇತರ ಧರ್ಮದವರೂ ಸೇರಿ ಚಿನ್ನದ ಪಳ್ಳಿಯಲ್ಲಿ ಸೌಹಾರ್ದತೆಯ ಕಾರ್ಯಕ್ರಮ ಮಾಡುವ ಮೂಲಕ ಎಲ್ಲಾ ಧರ್ಮದವರೂ ಸೌಹಾರ್ದ,ಸಾಮರಸ್ಯದಿಂದರಬೇಕೆಂಬ ಸಂದೇಶ ಸಾರಲಾಯಿತು.

