

ಕೆರೆ ಹೊಂಡದ ಜಿ.ಎಂ.ಭಟ್ ಕಾಯಿ ವ್ಯಾಪಾರ ಮಾಡುತ್ತಾ ನಗರದ ತರಕಾರಿ ಕಸವನ್ನು ರಸವನ್ನಾಗಿಸುತ್ತಾರೆ!
ಈ ಭಟ್ ಹಸು,ನಾಯಿ ಸಾಕುವುದರಲ್ಲಿ ಎತ್ತಿದ ಕೈ ಎಂದರೆ ಇವರ ಪರಿಚಯ ಸ್ಥಳಿಯರಿಗೆ ಸುಮಾರಾಗಿ ಆದಂತೆ ಆದರೆ, ಈ ಭಟ್ ರ ಆಸಕ್ತಿ, ಅಭಿರುಚಿಗಳಿವೆಯಲ್ಲಾ ಅವೆಲ್ಲಾ ಸಮಾಜಮುಖಿಯಾಗಿವೆ.
ಜಿ.ಎಂ.ಭಟ್ ಅವರ ಹವ್ಯಾಸ, ಉದ್ಯಮವಾಗಿ ಜಾನುವಾರುಗಳನ್ನು ಸಾಕುತ್ತಾರೆ. ಅವುಗಳಿಗೆ ಮೇವಾಗಿ ನಗರದ ತರಕಾರಿ ಕಸವನ್ನು ಬಳಸುತ್ತಾರೆ. ಈ ನಗರದ ಕಾಯಿಪಲ್ಲೆ ಕಸವಿದೆಯಲ್ಲ ಇದು ದನಗಳಿಗೆ ಉತ್ತಮ ಆಹಾರ ಜೊತೆಗೆ ಸಾವಯವ ಗೊಬ್ಬರಕ್ಕೂ ಇದು ಅನುಕೂಲಕರ ಎನ್ನುವ ಭಟ್ ನಗರದ ಎರಡು ಕಡೆ ತಮ್ಮ ವಾಹನಗಳನ್ನು ಇಡುತ್ತಾರೆ.
ಈ ವಾಹನಗಳಿಗೆ ತರಕಾರಿ ವ್ಯಾಪಾರಸ್ಥರು ತಮ್ಮ ಕಸವಾದ ತರಕಾರಿಗಳನ್ನು ಹಾಕಬೇಕು. ಈ ತರಕಾರಿ ಕಸವನ್ನು ದೂರದ ತಮ್ಮ ಜಮೀನಿಗೆ ಕೊಂಡೊಯ್ಯುವ ಅವರು ರಾಸುಗಳಿಗೆ ಮೇವಾಗಿ ಬಳಸಿ ಉಳಿದದ್ದರಿಂದ ಗೊಬ್ಬರ ತಯಾರಿಸುತ್ತಾರೆ.
ಹೀಗೆ ಮಾಡುವುದರಿಂದ ನಗರದ ಕಸ, ಕಸದ ಕೊಳೆತ ದುರ್ವಾಸನೆ ತಪ್ಪಿಸುವ ಮೂಲಕ ಸ್ವಚ್ಛಭಾರತದ ಕೆಲಸಮಾಡುತ್ತೇನೆ ಎನ್ನುತ್ತಾರೆ.
ಹೀಗೆ ನಗರದ ತರಕಾರಿ ಕಸವನ್ನು ದೂರ ಹೊತ್ತೊಯ್ದು ನಗರದ ಸ್ವಚ್ಛತೆಗೆ ಸಹಕರಿಸುವ ಭಟ್ ಉತ್ತಮ ಕೃಷಿಕರು. ಕೃಷಿ,ಕೃಷಿ ಸಂಬಂಧಿ ಸಣ್ಣ ಉದ್ದಿಮೆಗಳಿಂದ ಲಾಭ ಮಾಡಬಹುದೆನ್ನುವ ಜಿ.ಎಂ.ಭಟ್ ತಮ್ಮ ಕೃಷಿ ಕೆಲಸದ ಜೊತೆಗೆ ನೀರಿಂಗಿಸುವ ಪರಿಸರ ಪೂರಕ ಕೆಲಸವನ್ನೂ ಮಾಡುತ್ತಾರೆ. ಉತ್ತಮ ತಳಿಯ ನಾಯಿಗಳನ್ನು ಸಾಕುವ ಹವ್ಯಾಸದ ಭಟ್ ಶ್ವಾನ ಪ್ರದರ್ಶನಕ್ಕಾಗಿ ಜಿಲ್ಲೆ,ರಾಜ್ಯಾದ್ಯಂತ ತಿರುಗಾಡುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಚಪ್ಪರಮನೆಯ ಗಣಪತಿ ಭಟ್ ಮುಂಜಾನೆ ತಮ್ಮ ವಾಹನದೊಂದಿಗೆ ಹೊರಟರೆಂದರೆ ನಗರದ ಕಸ ಹೊರಸಾಗಿಸಿದರೆಂದೇ ಅರ್ಥ. ಇವರ ಈ ಹವ್ಯಾಸದಿಂದಾಗಿ ಸ್ಥಳಿಯರಿಗೆ, ಪೌರಕಾರ್ಮಿಕರಿಗೂ ಅನುಕೂಲವಾಗಿದೆ.ಸಹೋದರ, ಕುಟುಂಬದ ಜೊತೆಗೆ ಕೃಷಿಯೊಂದಿಗೆ ತೆಂಗಿನಕಾಯಿ ವ್ಯಾಪಾರ ಮಾಡುತ್ತಾ ಸ್ವಚ್ಛಭಾರತ ಕಲ್ಫನೆಗೆ ಕೈಜೋಡಿಸಿರುವ ಇವರ ಪತ್ನಿ ತೆಂಗಿನಕಾಯಿ ವ್ಯಾಪಾರಕ್ಕೆ ಸಹಕರಿಸಿದರೆ, ಸಹೋದರ ಮತ್ತು ಅವರ ಪತ್ನಿ ಕೃಷಿ ಮತ್ತು ಪಶುಸಂಗೋಪನೆಗೆ ನೆರವಾಗುತ್ತಾರೆ.
ಇಂಥ ಅವಿಭಕ್ತಕುಟುಂಬದ ಜಿ.ಎಂ. ಭಟ್ ರ ಮಗಳು ಕೃಷಿ ವಿಜ್ಞಾನ ಪದವಿಯಲ್ಲಿ ಬಂಗಾರದ ಪದಕಗಳನ್ನು ಬೇಟೆಯಾಡಿದ ಯುವತಿ. ಕೃಷಿ ಶಿಕ್ಷಣ, ಕೃಷಿ ಬದುಕುಗಳೊಂದಿಗೆ ಸಮಾಜೋಪಯೋಗಿಯಾಗಿ ಬದುಕುತ್ತಿರುವ ಭಟ್ ಕೃಷಿಯೊಂದಿಗೆ ಸ್ಥಳಿಯರಾಗಿ ದೇಶಿ ಬದುಕು ಬಾಳುವ ಖುಷಿಮುಂದೆ ಬೇರೆ ಎಲ್ಲಾ ಲೆಕ್ಕಕ್ಕಿಲ್ಲ ಎಂದು ನಂಬಿ ನಡೆಯುತಿದ್ದಾರೆ. ಫಲಾಪೇಕ್ಷೆ,ಪ್ರಚಾರ ಆಡಂಬರಗಳಿಂದ ದೂರ ಇರುವ ಇವರ ಸಮಾಜಮುಖಿ ಬದುಕು ಇತರರಿಗೂ ಮಾದರಿ.
ದೇವಿಯ ದೀವಿಗೆ ಪ್ರದರ್ಶನ
ಗಾಂಧಿ ಮಹತ್ವ ಪ್ರತಿಪಾದನೆ
ಗಾಂಧಿ ಕರೆಗೆ ಒಗೊಟ್ಟು ಸ್ವಾತಂತ್ರ್ಯ ಹೋರಾಟ,ಕರಾನಿರಾಕರಣೆ ಚಳವಳಿ,ಅಸ್ಪøಶ್ಯತೆ ನಿವಾರಣೆ, ಸಾರಾಯಿ ನಿಷೇಧವನ್ನು ಬೆಂಬಲಿಸಿದ ಸಿದ್ಧಾಪುರದ ಜನತೆ ಗಾಂಧಿ ಮಹತ್ವವನ್ನು ಅರಿತಿದ್ದರಿಂದ ಅಹಿಂಸಾತ್ಮಕ ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಕೆಗೆ ತಮ್ಮ ಅಳಿಲುಸೇವೆ ಸಲ್ಲಿಸಿದ್ದಾರೆ ಎಂದು ಸಾಹಿತಿ ಎಸ್.ವಿ.ಹೆಗಡೆ ಹೇಳಿದರು.
ಅವರು ರಂಗಸೌಗಂಧ ಮತ್ತಿತರ ಸಂಘಟನೆಗಳ ಸಹಯೋಗದ ದೇವಿಯದೀವಿಗೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.




