

ಸಿದ್ಧಾಪುರ ಪ.ಪಂ. ವ್ಯಾಪ್ತಿ ಮತ್ತು ತಾಲೂಕಿನ ಕೆಲವೆಡೆ ಅಪೂರ್ಣ ಮತ್ತು ವಿಳಂಬ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಪಟ್ಟಣ ಪಂಚಾಯತ್ ಕೆಲವೆಡೆ ಹಳೆ ರಸ್ತೆ ಕಿತ್ತು ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಜಲ್ಲಿ ತುಂಬಿ ಡಾಂಬರು ಹಾಕದಿರದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕೆಲವೆಡೆ ಹೀಗೆ ಜಲ್ಲಿ ಹಾಕಿದ ಕಡೆ ಡಾಂಬರು ಹಾಕಿಲ್ಲ,ರಸ್ತೆ ಕಿತ್ತಕಡೆ ರಸ್ತೆ ಪೂರ್ಣ ಮಾಡಿಲ್ಲ ಇಂಥ ಅಪೂರ್ಣಕೆಲಸ, ಕಾಮಗಾರಿ ವಿಳಂಬ ಯಾಕೆ ಎಂದು ಅಧಿಕಾರಿಗಳನ್ನು ಕೇಳಿದರೆ ಕಚ್ಚಾ ಸಾಮಗ್ರಿ ಬಂದಿಲ್ಲ, ಡಾಂಬರು ಸಿಕ್ಕಿಲ್ಲ ಎನ್ನುತ್ತಾರೆ. ಕೊರತೆ,ತೊಂದರೆ,
ಪೂರೈಕೆ ಇಲ್ಲ ಎನ್ನುವ ಅಧಿಕಾರಿಗಳು ಗುತ್ತಿಗೆದಾರರು ಪೂರ್ವ ತಯಾರಿ ಮಾಡಿಕೊಳ್ಳದೆ ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸುತಿದ್ದಾರೆ.
ಇಂಥ ವಿಳಂಬ, ಅಪೂರ್ಣ ಕಾಮಗಾರಿಗಳಿಂದಾಗಿ ದ್ವಿಚಕ್ರವಾಹನ ಚಾಲಕರು ಮೈ ಕೈ ಪೆಟ್ಟುಮಾಡಿಕೊಂಡಿದ್ದರೆ ಲಘುವಾಹನಗಳು ಈ ವಿಳಂಬದ ಕಾಮಗಾರಿಗಳಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸ್ಥಳಿಯರು ಆಕ್ಷೇಪಿಸಿದ್ದಾರೆ. ಇಂಥ ವಿಳಂಬ ಮತ್ತು ಅಪೂರ್ಣ ಕಾಮಗಾರಿಗಳನ್ನು ಪೂರೈಸಿ ಇವುಗಳಿಂದ ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಸ್ವಚ್ಛಭಾರತಕ್ಕೆ ಕೈ ಜೋಡಿಸಿದ ಭಟ್ಟರ ಖುಷಿಯ ಕೃಷಿ ಬದುಕು
ಕೆರೆ ಹೊಂಡದ ಜಿ.ಎಂ.ಭಟ್ ಕಾಯಿ ವ್ಯಾಪಾರ ಮಾಡುತ್ತಾ ನಗರದ ತರಕಾರಿ ಕಸವನ್ನು ರಸವನ್ನಾಗಿಸುತ್ತಾರೆ!
ಈ ಭಟ್ ಹಸು,ನಾಯಿ ಸಾಕುವುದರಲ್ಲಿ ಎತ್ತಿದ ಕೈ ಎಂದರೆ ಇವರ ಪರಿಚಯ sಸ್ಥಳಿಯರಿಗೆ ಸುಮಾರಾಗಿ ಆದಂತೆ ಆದರೆ, ಈ ಭಟ್ ರ ಆಸಕ್ತಿ, ಅಭಿರುಚಿಗಳಿವೆಯಲ್ಲಾ ಅವೆಲ್ಲಾ ಸಮಾಜಮುಖಿಯಾಗಿವೆ.
ಜಿ.ಎಂ.ಭಟ್ ಅವರ ಹವ್ಯಾಸ, ಉದ್ಯಮವಾಗಿ ಜಾನುವಾರುಗಳನ್ನು ಸಾಕುತ್ತಾರೆ. ಅವುಗಳಿಗೆ ಮೇವಾಗಿ ನಗರದ ತರಕಾರಿ ಕಸವನ್ನು ಬಳಸುತ್ತಾರೆ. ಈ ನಗರದ ಕಾಯಿಪಲ್ಲೆ ಕಸವಿದೆಯಲ್ಲ ಇದು ದನಗಳಿಗೆ ಉತ್ತಮ ಆಹಾರ ಜೊತೆಗೆ ಸಾವಯವ ಗೊಬ್ಬರಕ್ಕೂ ಇದು ಅನುಕೂಲಕರ ಎನ್ನುವ ಭಟ್ ನಗರದ ಎರಡು ಕಡೆ ತಮ್ಮ ವಾಹನಗಳನ್ನು ಇಡುತ್ತಾರೆ.



