
ಸಿದ್ದಾಪುರದ
ಶ್ರೀ ಸಂಸ್ಥಾನ ತರಳಿಮಠದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ 1008 ಸತ್ಯನಾರಾಯಣ ವೃತ ಕಳಸ ಪೂಜೆ, ತರಳಿಶ್ರೀ ಪ್ರಶಸ್ತಿ ಪ್ರದಾನ, ಹಾಗೂ ಸತ್ಯ ಪ್ರತಿಪಾದನೆ ಉಪನ್ಯಾಸ ಕಾರ್ಯಕ್ರಮಗಳು ಫೆ.21 ಹಾಗೂ 22ರಂದು ಜರುಗಲಿವೆ ಎಂದು ಶ್ರೀ ಸಂಸ್ಥಾನ ತರಳಿಮಠದ ಆಡಳಿತ ಸಮಿತಿ ಅಧ್ಯಕ್ಷ ಎನ್.ಡಿ.ನಾಯ್ಕ ಐಸೂರು ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಕಳೆದ 32 ವರ್ಷಗಳಿಂದ ನಿರಂತರವಾಗಿ ಸತ್ಯನಾರಾಯಣ ವೃತ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಫೆ.21ರ ಬೆಳಿಗ್ಗೆ ತರಳಿಮಠದ ಶ್ರೀ ಬಾಲಕೃಷ್ಣ ಸ್ವಾಮಿಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಬೆಳಿಗ್ಗೆ 8ರಿಂದ ಕಂಚಿ ಕಾಮಕೋಟಿ ಪೀಠಂ ಆಸ್ಥಾನ ವಿದ್ವಾನ್ ಶ್ರೀಧರ ಸಾಗರ್ ಹಾಗೂ ತಂಡದವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಲಿದೆ. 12.30ರಿಂದ ತರಳೀಶ್ರೀ ಪ್ರಶಸ್ತಿ ಹಾಗೂ ನಾರಾಯಣ ಗುರು ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನಿತಾ,ಹಿರಿಯ ಐ.ಎಫ್.ಎಸ್. ಅಧಿಕಾರಿ ಎ.ಟಿ.ದಾಮೋದರ ಉಪಸ್ಥಿತರಿರುವರು.
ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಪ್ರಹ್ಲಾದ ಟಿ.ಕಟ್ಟೀಮನಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ಎಂ.ಕೆ.ನಾಯ್ಕ, ಅಪರ ಜಿಲ್ಲಾಧಿಕಾರಿ ಮಂಜುನಾಥ ಜಿ.ಎನ್., ಖ್ಯಾತ ನಾಟಿ ವೈದ್ಯ ಹೆಚ್.ಸಿ.ಈಶ್ವರನಾಯ್ಕ, ವಿಜಯಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕಿ ನಾಗವೇಣಿ ಅಶೋಕ ಕುಳಗದ್ ಅವರಿಗೆ ತರಳಿಶ್ರೀ-2020 ಪ್ರಶಸ್ತಿ ಪ್ರದಾನ ಮಾಡಲಾಗುವದು.
ಉದ್ಯಮಿ ಭೀಮಣ್ಣ ನಾಯ್ಕ, ಜಿಪಂ ಸದಸ್ಯ ನಾಗರಾಜ ನಾಯ್ಕ, ಜಿಪಂ ಸದಸ್ಯೆ ಸುಮಂಗಲಾ ವಿ.ನಾಯ್ಕ, ಉದ್ಯಮಿ ಮಂಜುನಾಥ ಟಿ.ನಾಯ್ಕ, ನಿಭಾ ಪೌಂಡೇಶನ್ ಅಧ್ಯಕ್ಷ ಪ್ರಕಾಶ್ ಉಪಸ್ಥಿತರಿರುವರು.
ಸಂಜೆ 6ರಿಂದ ಸ್ಥಳೀಯ ಶಾಲಾ ಮಕ್ಕಳಿಂದ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ, ರಾತ್ರಿ 9ಕ್ಕೆ ಅಂತರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯುವುದು.
ಫೆ.22ರಂದು ಮಧ್ಯಾಹ್ನ 4ಕ್ಕೆ ಸಾಮಾಜಿಕ ಪರಿವರ್ತಕ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಅರಿವಿನ ಗುರು ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಅವರಿಂದ ಸತ್ಯ ಪ್ರತಿಪಾದನೆ ಉಪನ್ಯಾಸ ನಡೆಯಲಿದೆ.
ಶಾಸಕ, ವಿಧಾನ ಸಭೆ ಮುಖ್ಯ ಸಚೇತಕ ಸುನಿಲ್‍ಕುಮಾರ್, ನಿವೃತ್ತ ಪೊಲೀಸ್ ಕಮಾಂಡೆಂಟ್ ಎಚ್.ಎಸ್.ನಾಯ್ಕ, ಅಂಡಗಿ ಕ್ಯಾದಗಿಕೊಪ್ಪ ಮಠದ ಧರ್ಮದರ್ಶಿ ಸಿ.ಎಫ್.ನಾಯ್ಕ, ಕಾರ್ಮಿಕ ಮತ್ತು ಸಕ್ಕರೆ ಸಚಿವರ ಆಪ್ತ ಸಹಾಯಕ ಕಮಲಾಕರ ನಾಯ್ಕ, ಸಿದ್ದಾಪುರ ಪ.ಪಂ.ನ ಪೌರ ಶ್ರಮಿಕರು ಉಪಸ್ಥಿತರಿರುವರು ಎಂದರು.
ಫೆ.21ರಂದು ನಡೆಯುವ ಅನ್ನಸಂತರ್ಪಣೆಗೆ ದೇಣಿಗೆಯನ್ನು ತರಳಿಯ ವಿಷ್ಣುವರ್ಧನ ನಾಯ್ಕ ಉತ್ಸವಕ್ಕೆ ಹೂವುಗಳ ಖರ್ಚುವೆಚ್ಚವನ್ನು ಮಾಗಣಿಯ ಶ್ರೀಧರ ನಾಯ್ಕ ವಹಿಸಿಕೊಂಡಿದ್ದಾರೆ.
ಇಲ್ಲಿನ ದೇವಾಲಯವನ್ನು ನೂತನವಾಗಿ ನಿರ್ಮಿಸಲು ಯೋಜಿಸಿದ್ದು ಸುಮಾರು 2 ಕೋಟಿ ರೂ.ವೆಚ್ಚ ಬರಬಹುದೆಂದು ಅಂದಾಜಿಸಲಾಗಿದೆ. ಹಲವರಿಂದ ಸಹಾಯ ನೀಡುವ ಭರವಸೆಯೂ ದೊರಕಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ತಿರುಪತಿಯ ರೀತಿಯಲ್ಲಿ ರಥೋತ್ಸವ ಮಾಡುವ ಉದ್ದೇಶವೂ ಇದೆ ಎಂದು ಎನ್.ಡಿ.ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೃತ ಕಮಿಟಿ ಅಧ್ಯಕ್ಷ ತಿಮ್ಮಪ್ಪ ಜೆ.ನಾಯ್ಕ ಬೂದಗಿತ್ತಿ, ಆಡಳಿತ ಸಮಿತಿ ಕಾರ್ಯದರ್ಶಿ ದೀಪಕೆಂ.ನಾಯ್ಕ, ವೃತ ಸಮಿತಿ ಕಾರ್ಯದರ್ಶಿ ಯದುಪತಿ ನಾಯ್ಕ, ಸದಸ್ಯರಾದ ನಾರಾಯಣ ನಾಯ್ಕ ಅವರಗುಪ್ಪ, ಜಿ.ಆಯ್.ನಾಯ್ಕ ಅರಿಶಿನಗೋಡ,ಬಿ.ಕೆ.ನಾಯ್ಕ ಬಿಕ್ಕಳಸೆ ಮುಂತಾದವರಿದ್ದರು.
ವಿಜಯಬ್ಯಾಂಕ್‍ಒಳಗೆ ಕಳ್ಳತನ ಅನುಮಾನಾಸ್ಫದವಾಗಿ ವರ್ತಿಸುತ್ತಿರುವ ಸಿಬ್ಬಂದಿಗಳು
ಸಿದ್ದಾಪುರ ವಿಜಯ ಬ್ಯಾಂಕ್ ಒಳಗೆ ಗ್ರಾಹಕರೊಬ್ಬರ ಹತ್ತು ಸಾವಿರ ರೂಪಾಯಿ ಕಳ್ಳತನವಾಗಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಾದ ಮಾಹಿತಿ ಸಮಾಜಮುಖಿಗೆ ಲಭಿಸಿದೆ. ತಾಲೂಕಿನ ಬಳ್ಳಟ್ಟೆಯ ರಾಮ ನಾಯ್ಕ ತಮ್ಮ ಮಗಳ ಖಾತೆಯಲ್ಲಿದ್ದ ಹತ್ತು ಸಾವಿರ ಹಣ ಪಡೆದು ಬ್ಯಾಂಕಿನಿಂದ ಹೊರನಡೆಯುವ ಮೊದಲೇ ಕಳ್ಳರು ಹತ್ತು ಸಾವಿರ ರೂಪಾಯಿ ದೋಚಿದ್ದಾರೆ.
