
ಸಿದ್ದಾಪುರ ವಿಜಯ ಬ್ಯಾಂಕ್ ಒಳಗೆ ಗ್ರಾಹಕರೊಬ್ಬರ ಹತ್ತು ಸಾವಿರ ರೂಪಾಯಿ ಕಳ್ಳತನವಾಗಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಾದ ಮಾಹಿತಿ ಸಮಾಜಮುಖಿಗೆ ಲಭಿಸಿದೆ. ತಾಲೂಕಿನ ಬಳ್ಳಟ್ಟೆಯ ರಾಮ ನಾಯ್ಕ ತಮ್ಮ ಮಗಳ ಖಾತೆಯಲ್ಲಿದ್ದ ಹತ್ತು ಸಾವಿರ ಹಣ ಪಡೆದು ಬ್ಯಾಂಕಿನಿಂದ ಹೊರನಡೆಯುವ ಮೊದಲೇ ಕಳ್ಳರು ಹತ್ತು ಸಾವಿರ ರೂಪಾಯಿ ದೋಚಿದ್ದಾರೆ.
ಬ್ಯಾಂಕಿನಲ್ಲಿ ಸಿ.ಸಿ.ಕೆಮರಾ ಇದ್ದರೂ ಜನರ ನಡುವೆ ಹಣ ಲಪಟಾಯಿಸಿರುವ ಕಳ್ಳರು ಮುಸುಕುಧಾರಿಗಳಾಗಿದ್ದರು ಎಂದು ಬ್ಯಾಂಕ್ ಸಿಬ್ಬಂದಿಗಳು ಹೇಳಿರುವ ಬಗ್ಗೆ ರಾಮ ನಾಯ್ಕ ತಿಳಿಸಿದ್ದಾರೆ. ನಗರದ ವಿಜಯ ಬ್ಯಾಂಕ್ ಈಗ ಬ್ಯಾಂಕ್ ಆಫ್ ಬರೋಡಾ ಆಗಿದ್ದು ಈಗಿನ ಹೊಸ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರ ದೂರುಗಳಿವೆ. ಗ್ರಾಮೀಣ ಜನರ ಬ್ಯಾಂಕ್ ಆಗಿದ್ದ ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಆಗುತ್ತಲೇ ಗ್ರಾಹಕರಿಗೆ ಕಿರಿಕಿರಿ ಉಂಟುಮಾಡುತ್ತಿರುವ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಒಳಗೆ ಮುಸುಕುಧಾರಿಗಳು ಬಂದಿದ್ದು ಅವರ ಗುರುತು ಸಿ.ಸಿ. ಕೆಮರಾದಲ್ಲೂ ದಾಖಲಾಗಿಲ್ಲ ಎನ್ನುತ್ತಿರುವ ಸಿಬ್ಭಂದಿ ಈ ಅವ್ಯಸ್ಥೆಗಳ ಬಗ್ಗೆ ಆಕ್ಷೇಪಿಸಿರುವ ಸ್ಥಳಿಯರು ಬ್ಯಾಂಕ್ ಆಫ್ ಬರೋಡಾದ ಅವ್ಯವಸ್ಥೆ, ಕಿರುಕುಳ, ಅನಾದರಗಳ ಬಗ್ಗೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಸಂತಾನಭಾಗ್ಯದ
ತರಳಿಯಲ್ಲಿ ತಲೆಎತ್ತಲಿದೆ ಬೃಹತ್ ದೇವಾಲಯ
ತರಳಿ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಸರ್ವರನ್ನೂ ಸ್ವಾಗತಿಸುತ್ತಾ ನಾಡಿನ ಸಮಸ್ತರಿಗೆ ಮಹಾಶಿವರಾತ್ರಿ ಶುಭಾಶಯ ಕೋರುವವರು
ಸುಮಂಗಲಾ ವಸಂತ (ಜಿ.ಪಂ. ಸದಸ್ಯರು) ವಸಂತ ನಾಯ್ಕ ಮಳಲವಳ್ಳಿ
(ತಾ.ಪಂ. ಮಾಜಿ ಸ್ಥಾಯಿಸಮೀತಿಅಧ್ಯಕ್ಷರು)
ಹಾಗೂ ಕುಟುಂಬವರ್ಗ
ಮತ್ತು ಅಭಿಮಾನಿ ಬಳಗ,
ಸಿದ್ಧಾಪುರ (ಉ.ಕ.)
ಸಿದ್ದಾಪುರ ತಾಲೂಕಿನ ತರಳಿ ಕ್ಷೇತ್ರ ಈಗ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತಿದೆ.
ಸುಮಾರ 30 ವರ್ಷಗಳಿಗಿಂತ ಹಿಂದಿನಿಂದ ಪ್ರತಿವರ್ಷ ಇಲ್ಲಿ ಶಿವರಾತ್ರಿಯಂದು ಆಚರಿಸುವ ಶಿವರಾತ್ರಿ ಜಾತ್ರೆ ಈಗ ಸಾಂಸ್ಕøತಿಕ ಉತ್ಸವವಾಗಿಯೂ ಗಮನ ಸೆಳೆಯುತ್ತಿದೆ. ಬಿಳಗಿ ಅರಸರ ಕಾಲಕ್ಕಿಂತ ಹಿಂದಿನಿಂದಲೂ ಈ ಪ್ರದೇಶದಲ್ಲಿ ಜೈನ ಮತಾವಲಂಬಿಗಳ ವಾಸ್ತವ್ಯ, ಆರಾಧನೆಗಳ ಕೇಂದ್ರವಾಗಿದ್ದ ಈ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ದೀವರ ಶೃದ್ಧಾ ಕೇಂದ್ರವಾಗಿ ಬದಲಾಗಿದೆ.
ಪದ್ಮಾವತಿ, ವೆಂಕಟ್ರಮಣ, ಗಣಪತಿ ದೇವರುಗಳಿರುವ ಈ ಪ್ರದೇಶದಲ್ಲೇ ನಾಗಚೌಡೇಶ್ವರಿ ದೇವರನ್ನೂ ಕಾಣಬಹುದು. ಸಂತಾನ ಹೀನತೆಗೆ ಇಲ್ಲಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗುವ ಈ ಪ್ರದೇಶ ಇತ್ತೀಚಿನ 40 ವರ್ಷಗಳಿಂದೀಚೆ ತೆರೆದುಕೊಂಡಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
