

ಮನುಷ್ಯ ನಿರ್ಮಿತ ಜಾತಿ,ಧರ್ಮಗಳ ಅಸಮಾನತೆಯ ಸಂಕೋಲೆ ಕಳಚಿ ಎಲ್ಲರಲ್ಲೂ ಸಮಾನತೆ,ಸೌಹಾರ್ದತೆ ತರಲು ಧಾರ್ಮಿಕ ಕಾರ್ಯಕ್ರಮಗಳು ನೆರವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಆಶಿಸಿದ್ದಾರೆ.
ಅವರು (ಸಿದ್ಧಾಪುರ) ತಾಲೂಕಿನ ತರಳಿ ಸಂಸ್ಥಾನದ ವಾರ್ಷಿಕ ಶಿವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ನಾರಾಯಣಗುರು ಪ್ರತಿಭಾ ಪುರಸ್ಕಾರ ಮತ್ತು ತರಳಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಸವ,ಬುದ್ಧ, ನಾರಾಯಣಗುರುಗಳು ಲೋಕದ ಡೊಂಕನ್ನು ತಿದ್ದುವ ಕೆಲಸಮಾಡಿದ್ದಾರೆ.ಅವರ ಸ್ಮರಣೆಯಲ್ಲಿ ನಾವು ಅಸಮಾನತೆ,
ಅಸ್ಪೃಶ್ಯತೆ ತೊಲಗಿಸುವ ಸಾಂವಿಧಾನಿಕ ಕರ್ತವ್ಯ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಸಂದೇಶ ಜಿ.ನಾಯ್ಕ ಗೋಳಗೋಡು ಮತ್ತು ರಜನಿ ಈಶ್ವರ ನಾಯ್ಕ ಕಾನಗೋಡು ರಿಗೆ ನಾರಾಯಣಗುರು ಪ್ರತಿಭಾ ಪುರಸ್ಕಾರ ನೀಡಲಾಯಿತು.
1008 ಸತ್ಯನಾರಾಯಣ ವೃತದೊಂದಿಗೆ ಪ್ರಾರಂಭವಾದ ಧಾರ್ಮಿಕ ಕೆಲಸ ವೇದಿಕೆಯಲ್ಲಿ ಶ್ರೀಧರ್ ಸಾಗರ ಅವರ ಸೆಕ್ಸೋಫೋನ್ ವಾದನದೊಂದಿಗೆ ಸೇರಿದ ಜನರನ್ನು ಖುಷಿಪಡಿಸಿತು. ನಂತರ ಸಭಾಕಾರ್ಯಕ್ರಮದಲ್ಲಿ ನಾಲ್ವರಿಗೆ ತರಳಿಶ್ರೀ ಪ್ರಶಸ್ತಿಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮಾತನಾಡಿ ಶುಭಕೋರಿದರು.
ಶಿಕ್ಷಕ ಶಾಮಸುಂದರ್ ಈಜಿನಲ್ಲಿ ರಾಷ್ಟ್ರಕ್ಕೇ ತೃತೀಯ
ರಾಷ್ಟ್ರಮಟ್ಟದ ಮೂರನೆ ಮುಕ್ತ ಈಜಿ(ಪಂದ್ಯಾಟ)ನಲ್ಲಿ ಸಿದ್ಧಾಪುರ ತಾಲೂಕಿನ ಇಳಿಮನೆ ಶಾಲೆಯ ಶಾಮಸುಂದರ್ ತೃತಿಯ ಸ್ಥಾನ ಗಳಿಸಿದ್ದಾರೆ.
ಈ ಹಿಂದೆ ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಈಜುಸ್ಫರ್ಧೆಯಲ್ಲಿ ಸ್ಥಾನಗಳಿಸಿದ್ದರು. 32 ನಿಮಿಷದಲ್ಲಿ 2.5ಕಿ.ಮೀ ಕ್ರಮಿಸುವ ಮೂಲಕ ಕರ್ನಾಟಕ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರೀಸ್ಟೈಲ್ ವಿಭಾಗದ ಈಜಿನಲ್ಲಿ ರಾಷ್ಟ್ರಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.
ನಾಳೆ ಮಧ್ಯಾಹ್ನ ನಾಮಧಾರಿ ನೌಕರರ ಸಂಘದ ವಾರ್ಷಿಕೋತ್ಸವ-ಫೆ,23 ರ ಶನಿವಾರ ಮಧ್ಯಾಹ್ನ ಸಿದ್ಧಾಪುರ ರಾಘವೇಂದ್ರಮಠದ ಸಭಾಂಗಣದಲ್ಲಿ ಈಡಿಗ,ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನೌಕರರ ಮತ್ತು ಸ್ಥಳಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಆಯ್. ನಾಯ್ಕ ಗೋಳಗೋಡ್ ತಿಳಿಸಿದ್ದಾರೆ.






