

ರಾಷ್ಟ್ರಮಟ್ಟದ ಮೂರನೆ ಮುಕ್ತ ಈಜಿ(ಪಂದ್ಯಾಟ)ನಲ್ಲಿ ಸಿದ್ಧಾಪುರ ತಾಲೂಕಿನ ಇಳಿಮನೆ ಶಾಲೆಯ ಶಾಮಸುಂದರ್ ತೃತಿಯ ಸ್ಥಾನ ಗಳಿಸಿದ್ದಾರೆ.
ಈ ಹಿಂದೆ ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಈಜುಸ್ಫರ್ಧೆಯಲ್ಲಿ ಸ್ಥಾನಗಳಿಸಿದ್ದರು. 32 ನಿಮಿಷದಲ್ಲಿ 2.5ಕಿ.ಮೀ ಕ್ರಮಿಸುವ ಮೂಲಕ ಕರ್ನಾಟಕ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರೀಸ್ಟೈಲ್ ವಿಭಾಗದ ಈಜಿನಲ್ಲಿ ರಾಷ್ಟ್ರಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.
ನಾಳೆ ಮಧ್ಯಾಹ್ನ ನಾಮಧಾರಿ ನೌಕರರ ಸಂಘದ ವಾರ್ಷಿಕೋತ್ಸವ-
ಫೆ,23 ರ ಶನಿವಾರ ಮಧ್ಯಾಹ್ನ ಸಿದ್ಧಾಪುರ ರಾಘವೇಂದ್ರಮಠದ ಸಭಾಂಗಣದಲ್ಲಿ ಈಡಿಗ,ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನೌಕರರ ಮತ್ತು ಸ್ಥಳಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಆಯ್. ನಾಯ್ಕ ಗೋಳಗೋಡ್ ತಿಳಿಸಿದ್ದಾರೆ.
ಮುಕುಂದ ಜೋಡಿ ಸೂಪರ್ ದಂಪತಿಗಳು,
ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ಮುಕುಂದ ಜೋಡಿ
ಸೂಪರ್ ದಂಪತಿಗಳು
ಸಿದ್ಧಾಪುರದಲ್ಲಿ ಸದ್ದಿಲ್ಲದೆ ನಡೆದ ಕಲರ್ ಸೂಪರ್ ವಾಹಿನಿಯ ಸೂಪರ್ ದಂಪತಿಗಳ ಆಯ್ಕೆಯಲ್ಲಿ ನಗರದ ಹಾಡುಗಾರ ಮುಕುಂದ ಪೈ ದಂಪತಿಗಳು ಆಯ್ಕೆಯಾಗಿದ್ದಾರೆ.
ನಗರದ ಹೊಸಪೇಟೆಯ ಮುಕುಂದ ಖಾಸಗಿ ಉದ್ಯೋಗಿ ಮತ್ತು ಹವ್ಯಾಸಿ ಹಾಡುಗಾರ. ಅವರ ಪತ್ನಿ ಶಾಲಾ ಶಿಕ್ಷಕಿ ಮಾತು-ಹಾಡು, ರಗಳೆ,ತಮಾಸೆಗಳ ಈ ದಂಪತಿಗಳು ತಮ್ಮ ವಿಶೇಶ ಅರ್ಹತೆಗಳಿಂದ ಸೂಪರ್ ದಂಪತಿಗಳಾಗಿಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಟೆಂಪೋಕ್ಕೆ ಬಿತ್ತು 50ಸಾವಿರ ದಂಡ!
ಸಿದ್ಧಾಪುರ ತಾಲೂಕಿನ ಟೆಂಪೋ ಡ್ರೈವರ್ ರೊಬ್ಬರಿಗೆ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ಬರೋಬ್ಬರಿ 51 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಸಿದ್ಧಾಪುರದಿಂದ ಪರ ಊರಿಗೆ ಹೋಗುವ ವಾಹನ ಚಾಲಕರು, ಮಾಲಕರು ಸಾರಿಗೆ ನಿಯಮ ಕಟ್ಟುನಿಟ್ಟಾಗಿ ಅನುಸರಿಸುವುದು ದುಸ್ಥರ. ಇಂಥ ಸ್ಥಿತಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯುತಿದ್ದ ಆರೋಪದ ಮೇಲೆ ಟೆಂಪೋ ಚಾಲಕನಿಗೆ 51 ಸಾವಿರ ದಂಡ ವಿಧಿಸಿದ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ದಾಖಲೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ದೇಶದ ಯಾವ ಮೂಲೆಯಲ್ಲಿ ಈ ರೀತಿ ದುಬಾರಿ ದಂಡ ವಿಧಿಸಿದರೂ ಅಲ್ಲಿನ ಜನಪ್ರತಿನಿಧಿಗಳು ಬಾಧಿತರ ನೆರವಿಗೆ ಬಂದು ಅಧಿಕಾರಿಗಳಿಗೆ ಹಣ್ಣುಗಾಯಿ, ನೀರುಗಾಯಿ ಮಾಡುತಿದ್ದರು ಆದರೆ ನಮ್ಮ ಮೈಕ್ ಮತ್ತು ಸ್ಫೀಕರ್ 5 ವರ್ಷಕ್ಕೊಮ್ಮೆ ಹಿಂದೂ,ಹಿಂದುತ್ವದ ಮುವಾಡದ ವೈದಿಕನೀಚತನಗಳಿಂದ ಸೌಂಡುಮಾಡುವುದು ಬಿಟ್ಟರೆ ಜನ ಸಾಯುತಿದ್ದರೂ ಅಧಿಕಾರಿಗಳೇ ಅವರನ್ನು ಕಾನೂನಿನ ಪ್ರಕಾರ ಬದುಕಿಸಲು ಬಂದರೆ ಬದುಕಿಸಿ ಇಲ್ಲವಾದರೆ ಜನಿವಾರ ನೋಡಿ ಕತೆಮುಗಿಸಿ ಎನ್ನುತ್ತಾರಾದ್ದರಿಂದ ಇವರನ್ನು ಹಿಂದುತ್ವದ ಕಾರಣಕ್ಕೆ ಆಯ್ಕೆಮಾಡಿದ್ದಕ್ಕೆ ನಾವು ಜೀವ ಬಿಡಬೇಕಾಗಿದೆ ಎಂದು ಜನಸಾಮಾನ್ಯ ಚಾಲಕ,ಮಾಲಕರು ಗೊಣಗಿದರು ಎನ್ನಲಾಗಿದೆ.




Weld on really great achivment.