ವ್ಯಕ್ತಿ, ವ್ಯಕ್ತಿತ್ವವಾಗಿ ಬದಲಾಗಲು ತಾಳ್ಮೆ,,ಶ್ರಮ,ತ್ಯಾಗಬೇಕು. ಸಾಧಕನನ್ನು ಸಮಯ,ಕಾಲ,ಪರಿಸ್ಥಿತಿ ಎಲ್ಲವೂ ಪರೀಕ್ಷೆಗೆ ಒಳಪಡಿಸುತ್ತವೆ ಎಂದು ಸಹಾಯಕಕೃಷಿ ನಿರ್ಧೇಶಕ ದೇವರಾಜ್ ಆರ್. ಹೇಳಿದರು.
ಸಿದ್ಧಾಪುರ ಈಡಗ,ದೀವರು,ಬಿಲ್ಲವ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ವಾರ್ಷಿಕ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವ್ಯಕ್ತಿ ಸಾಧನೆಯಿಂದ ಗುರುತಿಸಲ್ಫಡುತ್ತಾನೆ.ವ್ಯಕ್ತಿ-ವ್ಯಕ್ತಿತ್ವವಾಗಿ ಬದಲಾಗಬೇಕಾದರೆ ಕಾಲನ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪರಿಶ್ರಮವಿಲ್ಲದೆ ವ್ಯಕ್ತಿ-ವ್ಯಕ್ತಿತ್ವಗಳು ಬೆಳೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಸಂಘಟನೆಗಳು,ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನ ನೆಪ ಹೇಳಿ ಸಾಧನೆಯಿಂದ ವಿಮುಖರಾಗುವುದು ನಾಚಿಕೆಗೇಡಿನ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಸಮೂದಾಯದ ವಿದ್ಯಾರ್ಥಿಗಳು,ಸಾಧಕರನ್ನು ಸನ್ಮಾನಿಸಿ,ಅಭಿನಂದಿಸಲಾಯಿತು.ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ಜಿ.ಆಯ್.ನಾಯ್ಕ ಗೋಳಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಷಮಕಾಲದಲ್ಲಿ ಬೇಕು,ಬೇಡಗಳ ಆಯ್ಕೆ ಬಗ್ಗೆ ಜಾಗೃತರಾಗಲು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ.ಕರೆ
ತ್ಯಾಗ,ಶ್ರಮ,ಆತ್ಮವಿಶ್ವಾಸದಿಂದ ಇಷ್ಟಪಟ್ಟು ಓದುವವರು ಸಾಧಿಸಬಲ್ಲರೆ ಹೊರತು ಕಷ್ಟಪಟ್ಟು ಓದಿದವರು ಯಾರೂ ಗುರಿಮುಟ್ಟಲಾರರು, ಜನಸಾಮಾನ್ಯರ ಕಷ್ಟ ಅರಿತವರು ಉತ್ತಮ ಆಡಳಿತಗಾರರಾಗಬಲ್ಲರೆ ಹೊರತು ಸುಖದ ಸುಪ್ಪತ್ತಿಗೆಯಲ್ಲಿದ್ದವರು ಉತ್ತಮ ಆಡಳಿತಗಾರರು,ಪ್ರಭುಗಳು ಆದ ದೃಷ್ಟಾಂತಗಳಿಲ್ಲ.
-ಚನ್ನಬಸಪ್ಪ ಕೆ.
ನಿಜ ಒಳ್ಳೆಯ ನುಡಿ.