

ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳ ಕತ್ತು ಹಿಸುಕಿ ಮತಾಂಧತೆ, ಧರ್ಮಾಧಾರಿತ ಸರ್ವಾಧಿಕಾರವನ್ನು ಜಾರಿಮಾಡುವ ಹುನ್ನಾರ ಪಟ್ಟಭದ್ರರ ಗುರಿಯಾಗಿದ್ದು ಇಂಥವರಿಂದ ದೇಶವನ್ನು ರಕ್ಷಿಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಮುಕುಂದರಾಜ್ ಹೇಳಿದರು. ಶಿರಸಿಯಲ್ಲಿ ಸೌಹಾರ್ದ ವೇದಿಕೆಯಿಂದ ನಡೆದ ನಾವು ಮತ್ತು ನಮ್ಮ ಸಂವಿಧಾನ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಬೌದ್ಧಧರ್ಮ,ಲಿಂಗಾಯತ ಧರ್ಮ,ವಿಶ್ವಧರ್ಮವನ್ನು ಕೊಟ್ಟ ಕನ್ನಡ ಸಾಹಿತ್ಯ ರಾಷ್ಟ್ರದ ಶ್ರೇಷ್ಠ ಸಾಹಿತ್ಯ, ಇಂಥ ಸಾಹಿತ್ಯ ರಚಿಸಿದಸಾಹಿತಿಗಳು, ಬುದ್ಧಿಜೀವಿಗಳನ್ನು ಬುದ್ಧಿಜೀವಿಗಳು, ಲದ್ದಿಜೀವಿಗಳು,ಗಂಜಿಗಿರಾಕಿಗಳೆಂದು ಲೇವಡಿಮಾಡುವ ಬೌದ್ಧಿಕ ದಾರಿದ್ರ್ಯದ ಮತಾಂಧರನ್ನು ಬೆಂಬಲಿಸಿ, ಚುನಾಯಿಸುವ ಮೂಲಕ ನಾವು ನಮ್ಮ ನಾಡು,ನುಡಿ,ಸಾಹಿತ್ಯಕ್ಕೆ ಅಪಮಾನಮಾಡುತಿದ್ದೇವೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ್ ಮೊರಳ್ಳಿ ಮಾತನಾಡಿ ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎಲ್ಲರಿಗಾಗಿ ಎಲ್ಲರನ್ನೂಒಳಗೊಳ್ಳುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯಿದೆ, ಎನ್.ಆರ್.ಸಿ. ಎನ್.ಆರ್.ಪಿ.ಗುಮ್ಮಗಳನ್ನು ತೋರಿಸುತ್ತಿರುವ ಸರ್ಕಾರ ತನ್ನ ವಿಫಲತೆ, ಅರಾಜಕತೆಯ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯಿದೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.
ವೈದಿಕತೆಯ ಮೂಲಕ ಭಾರತೀಯ ಬಹುಸಂಖ್ಯಾತರನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಭಾರತೀಯ ಮೂಲನಿವಾಸಿಗಳು ಕೋಮುವಾದಿಗಳಿಂದ ದೇಶಪ್ರೇಮದ ಪಾಠ ಕಲಿಯುವ ದುಸ್ಥಿತಿ ನಮಗಿಲ್ಲ ಎಂದು ವಿವರಿಸಿದ ನಮ್ಮ ಧ್ವನಿ ಸಂಸ್ಥಾಪಕ ಮಹೇಂದ್ರಕುಮಾರ ಕೊಪ್ಪ ನಮ್ಮದು ದೇಶ,ಸಮಾಜದ ಪರವಾದ ಶಕ್ತಿ-ಹೋರಾಟ ಎಂದರು.
ದಲಿತರು,ಹಿಂದುಳಿದವರ ಅವಿವೇಕದಿಂದಲೇ ಉತ್ತರಕನ್ನಡದಲ್ಲಿ ಕೋಮುವಾದಿಗಳ ಅಟ್ಟಹಾಸ ನಡೆಯುತ್ತಿದೆ. ಇಂಥ ಷಡ್ಯಂತ್ರಗಳ ಮೂಲಕವೇ ದೇಶವನ್ನು ಭಯಾನಕಗೊಳಿಸಿ ಸರ್ವಾಧಿಕಾರದ ಮೂಲಕ ಬಹುತ್ವ ಹಾಳುಮಾಡುವ ಮತೀಯವಾದಿಗಳ ಕುತಂತ್ರ ದೇಶಕ್ಕೆ ಮಾರಕ
-ಮಹೇಂದ್ರಕುಮಾರ
ಉತ್ತರಕನ್ನಡದಲ್ಲಿಜಾತಿ-ಧರ್ಮ,ಹಿಂದುತ್ವದ ಹೆಸರಲ್ಲಿ 25 ವರ್ಷಗಳಿಂದ ಆಡಳಿತದಲ್ಲಿರುವ ಹೆಗಡೆಗಳು ತಮ್ಮ ಜವಾಬ್ಧಾರಿ ನಿರ್ವಹಿಸಿಲ್ಲ. ಅಪದ್ಧಮಾತನಾಡುವ ಅನಂತಕುಮಾರ ಹೆಗಡೆ, ಅಪ್ರಬುದ್ಧ ನಡವಳಿಕೆಗಳ ಮೂಲಕ ವಿಧಾನಸಭಾಧ್ಯಕ್ಷತೆಯ ಘನತೆಗೆ ಕುಂದು ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲಕ್ಕೆ ಅವಮಾನ ಮಾಡುತಿದ್ದಾರೆ.
-ಸುಧೀರ್ ಕುಮಾರ ಮೊರಳ್ಳಿ
ಮೇಲ್ವರ್ಗದ ಐತಿಹಾಸಿಕ ಪ್ರಮಾದಗಳಿಂದ ನಮಗೆ ವಿಸ್ಮೃತಿ ಆವರಿಸಿದೆ. ಧೀವರ ಯೋಧರು, ಕೃಷಿಕರನ್ನು ಕಟ್ಟಿಕೊಂಡು ಕದಂಬಸಾಂಮ್ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮ ದೀವರ ಕುಲದವನು. ಕದಂಬವೃಕ್ಷವೆಂದರೆ ಈಚಲುಮರ, ಆದರೆ ದೀವರು, ಈಡಿಗರ ಸಾಹಸ, ಕನ್ನಡಸಾಂಮ್ರಾಜ್ಯದ ಹಿರಿಮೆಯನ್ನು ಮರೆಮಾಚಿ ಸಾಹಿತ್ಯ, ಇತಿಹಾಸಕ್ಕೆ ವೈದಿಕತೆಯನ್ನು ಲೇಪಿಸಿದ ಮೇರ್ಲಗ್ವದ ಇತಿಹಾಸಕಾರರು ಭಾರತದ ಇತಿಹಾಸವನ್ನೇ ಕಲುಷಿತಗೊಳಿಸಿದ್ದಾರೆ.
-ಮುಕುಂದರಾಜ್, ಸಾಹಿತಿ.




