ದೇವಿಯದೀವಿಗೆ ಎತ್ತಿದ ಪ್ರಶ್ನೆಗಳು & ರಂಗಸಾಧ್ಯತೆ

ಕಳೆದ ವಾರ ಸಿದ್ಧಾಪುರದಲ್ಲಿ ದೇವಿಯ ದೀವಿಗೆ ನಾಟಕ ಪ್ರದರ್ಶನ ನಡೆಯಿತು. ನಾಟಕ ಬರೆದ ಎಸ್.ವಿ.ಹೆಗಡೆ ಸ್ವಾತಂತ್ರ್ಯ ಚಳವಳಿ, ಮಾನವೀಯತೆಯಲ್ಲಿ ಹಸ್ಲರ್ ದೇವಿಯ ಕೊಡುಗೆ ಬಗ್ಗೆ ಅದ್ಭುತ ಚಿತ್ರಣ ಕಟ್ಟಿಕೊಟ್ಟಿದ್ದಾರೆ.
ಹಸ್ಲರ್ ಸಮೂದಾಯ ಉತ್ತರ ಕನ್ನಡದ ಮೂಲನಿವಾಸಿ ಸಮೂದಾಯವಲ್ಲ. ಅವರು ಶಿವಮೊಗ್ಗ ಜಿಲ್ಲೆಯಿಂದ ಉತ್ತರಕನ್ನಡಕ್ಕೆ ಆಗಾಗ, ಅಲ್ಲಲ್ಲಿ
ಮೇಲ್ವರ್ಗದವರೊಂದಿಗೆ
ಅವರ ಕೂಲಿ ಕೆಲಸಕ್ಕಾಗಿ ವಲಸೆ ಬಂದವರು.
ಇಂಥ ಹಸ್ಲರ್ ಸಮೂದಾಯದ ದೇವಿ ಗಂಡನ ಕುಡಿತದ ವಿರುದ್ಧ, ಒಡೆಯರಿಗೆ ಅವರ ಕುಟುಂಬಕ್ಕೆ ನೆರವಾಗುವ ಮೂಲಕ ಪರತಂತ್ರ, ಅತಂತ್ರತೆಯ ವಿರುದ್ಧ ಹೋರಾಡಿದ್ದಾರೆ. ಆದರೆ ಆಕೆ ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಮಟ್ಟದ ತಿಳುವಳಿಕೆಯವಳಾಗಿರಲಿಲ್ಲ ಎಂದುಕೊಳ್ಳೋಣ ಅಥವಾ ಈ ನಾಟಕ ಅಸ್ಪೃಶ್ಯತೆಯ ವಿಷಯವನ್ನು ಬಿಟ್ಟು ಹೊರಪ್ರಪಂಚಕ್ಕೆ ಸೀಮಿತವಾದ ವಿಷಯವಸ್ತು ಅಂದುಕೊಳ್ಳೋಣ.
ಆದರೆ ಸ್ವಾತಂತ್ರ್ಯ ಹೋರಾಟದ 75 ವರ್ಷಗಳು ನಂತರದ ಆಧುನಿಕ ಭಾರತದ 75 ವರ್ಷಗಳಲ್ಲಿ ಪರಿಶಿಷ್ಟ ಪಂಗಡ,ಪರಿಶಿಷ್ಟ ಜಾತಿಗಳೆರಡರಲ್ಲೂ ಸಲ್ಲುವ ದೇವಿಯ ಹಸ್ಲರ್ ಸಮೂದಾಯ ಅಭಿವೃದ್ಧಿ ಹೊಂದದಿರುವುದ್ಯಾಕೆ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಹಸ್ಲರ್ ಕುಟುಂಬಗಳು ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕುಟುಂಬ ಮತ್ತು ಅವರ ಸಮೂದಾಯದವರ ಮನೆ,ಭೂಮಿಗಳಿಗೆ ಕೂಲಿಗಳಾಗಿ ಬಂದವರು. ಈಗ ಕೂಡಾ ಬಹುತೇಕ ಹಸ್ಲರ್ ಕುಟುಂಬಗಳು ಕೂಲಿಯನ್ನೇ ಅವಲಂಬಿಸಿವೆ, ಅವರ ಕೂಲಿ ಪ್ರದೇಶಗಳೂ ಬಹುತೇಕ ಬ್ರಾಹ್ಮಣ ಅಥವಾ ಲಿಂಗಾಯತರ ಮನೆ,ತೋಟ ಗದ್ದೆಗಳೇ.
ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟದಲ್ಲಿ ಹವ್ಯಕರು ಸೇರಿದಂತೆ ಯಾವುದೇ ಸಮೂದಾಯವನ್ನು ಬಿಡುವಂತಿಲ್ಲ. ಊಳುವವನೆ ಒಡೆಯ ಕಾನೂನಿನ ಜಾರಿ ನಂತರ ಕೂಡಾ ಮೇಲ್ವರ್ಗದವರೇ ದೊಡ್ಡ ಜಮೀನ್ಧಾರರು!. ಈ ಸ್ಥಿತಿಯಲ್ಲಿ ಸ್ವತಂತ್ರ ಭಾರತದ ಏಳು ದಶಕಗಳ ವರೆಗೂಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇರುವ ಹಸ್ಲರ್ ಕುಟುಂಬ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಮುಂಚೂಣಿಗೆ ಬಾರದಿರಲು ಕಾರಣವೇನು?
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಭೂಸುಧಾರಣೆ, ಊಳುವವನೇ ಒಡೆಯ ಕಾನೂನು ಅನುಷ್ಠಾನದ ಅವಧಿಯಲ್ಲಿ ಕೂಡಾ ತಮ್ಮ ಆಪ್ತರು, ಜಾತಿ, ಅಂತಸ್ತಿನ ಜನರ ಭೂಮಿ ರಕ್ಷಿಸಿಕೊಟ್ಟ ಅನೇಕ ದೃಷ್ಟಾಂತಗಳು ನಮ್ಮ ಮುಂದಿವೆ. ಆದರೆ ಅವರಿಗೆ ಅವರೊಂದಿಗೆ ಅವರ ಮನೆಯಲ್ಲಿ ಕೃಷಿ-ಕೂಲಿಗೆ ಉಳಿದಿದ್ದ ಹಸ್ಲರ್ ಬದುಕಿನ ಬಗ್ಗೆ ಯೋಚಿಸಲು ಸಮಯವಿರಲಿಲ್ಲವೆ? ಯಾಕೆಂದರೆ ಕೆಲವು ಸಾವಿರ ಸಂಖ್ಯೆಯಲ್ಲಿರುವ ಸಿದ್ಧಾಪುರದ ಹಸ್ಲರರು ಈಗಲೂ ಸರ್ಕಾರದ ಆಶ್ರಯಮನೆಗೆ ಜಾಗವಿಲ್ಲದೆ ಗುಡಿಸಲುಗಳಲ್ಲಿ ಉಳಿದಿದ್ದಾರೆ.
ನೌಕರಿ,ಉದ್ಯಮ ಇತರೆ ವಿಷಯಗಳು ಅವರಿಗೆ ಗಗನಕುಸುಮವೆ. ಇತ್ತೀಚಿನ ವರ್ಷಗಳಲ್ಲಿ ಹಸ್ಲರ್ ರಿಗೆ ದೊಡ್ಮನೆ ಪಂಚಾಯತ್ ನಲ್ಲಿ ಕಾಲನಿ ನಿರ್ಮಿಸುವ ವಿಷಯದಲ್ಲಿ ಸ್ಥಳಿಯ ಶಾಸಕರು, ಸಂಸದರು ಸ್ಫಂದಿಸದ ಬಗ್ಗೆ ಸ್ಥಳಿಯರೇ ದೂರುತ್ತಾರೆ. ಹಸ್ಲರರಿಗೆ ಜಾನಪದ ಆಸ್ತಿ. ಆಸ್ತಿ ಮನೆಗಳಿಲ್ಲದೆ ಜಾನಪದ, ದುಡಿಮೆಯನ್ನೇ ಹಾಸು-ಹೊದ್ದುಮಾಡುವ ಇವರ ಪರವಾಗಿ ಶಿರಸಿ ಕ್ಷೇತ್ರ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದಾಗಲೂ ಪ್ರಯತ್ನಗಳಾಗಿದ್ದು ಕಡಿಮೆ. ಪ್ರಭಾವಿ ನಾಯಕ,ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜೀವಿತಾವಧಿಯಲ್ಲಿ ಹಸ್ಲರ್ ರಿಗೆ ಸಹಕರಿಸಿದ್ದರೆ ಈಗಲಾದರೂ ಅವರಿಗೆ ಸೂರು, ನೀರು ದೊರೆತಿರುತಿದ್ದವು. ಹಸ್ಲರ್ ವಿಷಯದಲ್ಲಿ ಕಾಳಜಿ, ಬದ್ಧತೆ ಪ್ರದರ್ಶಿಸದ ಜನತಾದಳ, ಕಾಂಗ್ರೆಸ್, ಬಿ.ಜೆ.ಪಿ. ಪಕ್ಷಗಳು ಇವರ ಬದುಕು, ಬವಣೆಯನ್ನು ನಿರ್ಲಕ್ಷಿಸಿವೆ.
ಇತ್ತೀಚಿನ 25 ವರ್ಷಗಳಿಂದ ಅಧಿಕಾರ, ಜನಪ್ರತಿನಿಧಿತ್ವ ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಸ್ಲರ್ ಬಗ್ಗೆ ಸಹಾನುಭೂತಿ ಹೊಂದಿರುವ ಬದಲು ಜಾತಿ ರಕ್ಷಣೆ ಮಾಡಿ ಮುಗ್ಧ ಹಸ್ಲರರಿಗೆ ಸಿದ್ಧಾಪುರ ತಾಲೂಕಿನ ದೊಡ್ಮನೆ, ಕಾನಳ್ಳಿಗಳಲ್ಲಿ ಆಗಬೇಕಾದ ಜನತಾಕಾಲೋನಿ ನಿರ್ಮಾಣಕ್ಕೂ ಅಡ್ಡಗಾಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಾಟಕ, ಬರಹ,ಭಾಷಣಗಳಲ್ಲಿ ಹಸ್ಲರ್ ಬಗ್ಗೆ ಮೊಸಳೆಕಣ್ಣೀರು ಸುರಿಸಿ ವಾಸ್ತವದಲ್ಲಿ ಅವರ ಹಕ್ಕು, ಅವಕಾಶ, ಅನುಕೂಲ ತಪ್ಪಿಸುವ ರಾಜಕಾರಣ ಉತ್ತರಕನ್ನಡದಲ್ಲಿ ಪರಿಶಿಷ್ಟರು, ಹಿಂದುಳಿದವರ ವಿಷಯದಲ್ಲಿ ನಡೆಯುತ್ತಿದೆ. ಸಿದ್ಧಾಪುರದ ನಾಟಕ ಕತೃ, ರಂಗಕಲಾವಿದರು ದೇವಿಯದೀವಿಗೆ ನಾಟಕ ಪ್ರದರ್ಶಿಸುವ ಮೂಲಕ ದೇವಿ, ಗಾಂಧಿ, ಅಹಿಂಸೆ, ಸತ್ಯ, ಸತ್ಯಾಗ್ರಹದ ಮಹತ್ವ ಅರಿತ ಸಿದ್ಧಾಪುರದ ಘಮವನ್ನು ಸ್ಥಳಿಯರಿಗೆ ಪರಿಚಯಿಸಿದ್ದಾರೆ. ಈ ರಂಗಕಲಾವಿದರು, ರಂಗಾಸಕ್ತರ ಸಕಾಲಿಕ ಕಾಳಜಿ, ಪ್ರಯತ್ನ, ಐತಿಹಾಸಿಕ ಸತ್ಯ ಪ್ರತಿಪಾದನೆಯ ವಸ್ತುನಿಷ್ಠತೆಯನ್ನು ಪ್ರಶಂಸಿಸುತ್ತಾ ಈ ಎಲ್ಲಾ ಮೌಲ್ಯ, ಅಭಿರುಚಿಗಳಿಗೆ ವಿರುದ್ಧವಾಗಿರುವ ಪ್ರಭುತ್ವ ಮತ್ತು ಜನಪ್ರತಿನಿಧಿಗಳ ಸೋಗಲಾಡಿತನವನ್ನೂ ಖಂಡಿಸುತ್ತಾ ಹಸ್ಲರರ ಹಕ್ಕು,ಮೂಲಭೂತ ಅವಶ್ಯಕತೆಗಳಿಗಾಗಿ ಅವರೊಂದಿಗೆ ಅವರ ಪರ ಕಾಳಜಿ,ಅನುಕಂಪ ಇರುವವರಾದರೂ ಒಂದಾಗಿ ಧ್ವನಿ ಎತ್ತುವ ಕೆಲಸ ಆಗಬೇಕಾಗಿದೆ.
ಈ ಬಗ್ಗೆ ಚಿಂತನ-ಮಂಥನಕ್ಕೆ ಅವಕಾಶ ಮಾಡಿದ ದೇವಿಯ ದೀವಿಗೆ ರಂಗನಟರು,ರಂಗಸಂಘಟಕರ ಪ್ರಯತ್ನಕ್ಕೆ ಸಿದ್ಧಾಪುರದ ಜನತೆ ಋಣಿಯಾಗಬೇಕಿದೆ.

ಹೆಗ್ಗೋಡಮನೆಯಲ್ಲಿ ನಡೆದ ಪರಿಸರಪೂರಕ ಆಲೆಮನೆಹಬ್ಬ
ಸಿದ್ಧಾಪುರ ತಾಲೂಕಿನ ಹೆಗ್ಗೋಡಮನೆಯ ವಾರ್ಷಿಕ ಆಲೆಮನೆ ಹಬ್ಬ ಇತ್ತೀಚೆಗೆ ನಡೆಯಿತು.
ರಾವ್ ಬಹೂದ್ದೂರು ಕುಟುಂಬ ಎನ್ನುವ ಹೆಸರಿದ್ದ ಹೆಗ್ಗೋಡಮನೆಯಲ್ಲಿ ಬಹುಹಿಂದಿನಿಂದಲೂ ಸಾಂಪ್ರದಾಯಿಕ ಆಲೆಮನೆ ಮಾಡುವುದು ರೂಢಿ, ಆದರೆ ಈಗ ಮೊದಲಿನಂತೆ ಸಾಂಪ್ರದಾಯಿಕ ಆಲೆಮನೆ ನಡೆಯುತ್ತಿಲ್ಲ. ಆದರೆ ಮೊದಲ ವ್ಯವಸ್ಥೆಗಿಂತ ಹೆಚ್ಚು ಅದ್ಧೂರಿಯಾಗಿ ಕಬ್ಬಿನ ಹಾಲು ತಯಾರಿಸಿ ಆಮಂತ್ರಿತರಿಗೆ ನೀಡುವ ಜೊತೆಗೆ ಊಟೋಪಚಾರವನ್ನು ಮಾಡಲಾಗುತ್ತದೆ.

ದೇವಿಯ ದೀವಿಗೆ ನಾಟಕದ ಜಲಕ್ ಗಾಗಿ ಈ ಲಿಂಕ್ https://www.youtube.com/watch?v=6k9j-bnG738 ನೋಡಿ, visit,subscribe,like #samajamukhi.net #samajamukhi @ಸಮಾಜಮುಖಿ ಕನ್ನೆಶ್#

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *