




ಸಿದ್ಧಾಪುರ ತಾಲೂಕಿನ ಅಗ್ಗೇರಿಯ ಮಾರಿಕಾಂಬಾ ಜಾತ್ರಾ ನಿಮಿತ್ತ ಸಾಂಸ್ಕೃತಿಕ ಸಂಗಮ ನಡೆಯಲಿದ್ದು ಈ ಕಾರ್ಯಕ್ರಮಗಳಿಂದಾಗಿ ಇದು ಸಾಂಸ್ಕೃತಿಕ ಜಾತ್ರೆಯಾಗಿ ಸಾರ್ವಜನಿಕರ ಗಮನ ಸೆಳೆದಿದೆ.
ಫೆ,27 ರ ಗುರುವಾರ ಸಾಯಂಕಾಲದ ಸಭಾ ಕಾರ್ಯಕ್ರಮದ ನಂತರ ಚಿಣ್ಣರ ಚಿಲಿಪಿಲಿ ನಡೆಯಲಿದೆ. ಫೆ,28 ರ ಶುಕ್ರವಾರ ಸಾಯಂಕಾಲ ಸಂಗೀತ ಸಂಜೆ ನಂತರ ಶಿರಸಿ ಯಕ್ಷಕಲಾಬಳಗದಿಂದ ಕರ್ಣಪರ್ವ ಯಕ್ಷಗಾನ ತಾಳಮದ್ದಲೆ ನಡೆಯಲಿವೆ.
29 ರ ಶನಿವಾರ 6-30 ರಿಂದ ಸಂಗೀತ ಸಂಜೆ ನಂತರ ಗೊದ್ಲಬೀಳ್ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ 1ರ ಸಂಜೆ ಭರತನಾಟ್ಯ ಹಾಗೂ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಆಖ್ಯಾನ ನಡೆಯಲಿದೆ.
ಮಾ.2 ರ ಸೋಮವಾರ ಕಲಾವೈವಿಧ್ಯ ನಡೆಯಲಿದೆ. ಅದೇ ದಿನ ರಾತ್ರಿ ದುಶ್ಯಂತಶಾಕುಂತಲಾ ಯಕ್ಷಗಾನ ನಡೆಯಲಿದೆ.
ಫೆ.3 ರ ಮಂಗಳವಾರ ಗಾಯನ ಮತ್ತು ಹಾಸ್ಯಸಂಜೆ ಹಾಗೂ ರಾತ್ರಿ ಕಡೆವಿನ ಕೋಲಾಟ ನಡೆಯಲಿವೆ. ಈ ಸಾಂಸ್ಕೃತಿಕ ವೈವಿಧ್ಯದಿಂದ ಹೀನಗಾರ ಶಾಲೆಯ ಆವರಣದಲ್ಲಿ ನಡೆಯುವ ಜಾತ್ರೆಗೆ ರಂಗುತುಂಬುವ ಕೆಲಸ ನಡೆಯಲಿದೆ.
ಅಗ್ಗೇರಿ ಜಾತ್ರೆ
ವಿದ್ಯುಕ್ತ ಪ್ರಾರಂಭ
ಸಿದ್ದಾಪುರ,
ತಾಲೂಕಿನ ಅಗ್ಗೇರಿ ಮಾರಿಕಾಂಬಾ ದೇವಾಲಯದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮಂಗಳವಾರ ಶೃದ್ಧಾ-ಭಕ್ತಿಯಿಂದ ಆರಂಭಗೊಂಡಿದೆ.
ಫೆ.25ರಿಂದ ಮಾ.3ರವರೆಗೆ ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹೀನಗಾರ ಶಾಲಾ ಸಮೀಪದ ಮೈದಾನದಲ್ಲಿ ಜಾತ್ರೆ ನಡೆಯುತ್ತಿದ್ದು ನಿತ್ಯ ದೇವಿಯ ಸನ್ನಿದಿಯಲ್ಲಿ ಹತ್ತಕ್ಕೂ ಹೆಚ್ಚು ಪುರೋಹಿತರಿಂದ ಚಂಡಿಹವನ,ಗಣಹವನ, ಪಾರಾಯಣ, ಭಕ್ತರಿಂದ ಪೂಜೆ, ವಿವಿಧ ಸೇವೆ, ಹರಕೆ ಸಮರ್ಪಣೆ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ಹೆಚ್ಚಿನ ಆದ್ಯತೆ ನೀಡಿ ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.
ನಾಮಧಾರಿ ನೌಕರರ ಸಂಘದ ಸನ್ಮಾನ & ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಸಾಮಾಜಿಕನ್ಯಾಯದ ಬದಲು ಸಾಮಾಜಿಕ ಅನ್ಯಾಯದ ಪೋಷಣೆಗೆ ವಿರೋಧ
ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕವಾಗಿ ಸಾಮಾಜಿಕನ್ಯಾಯ ನೀಡಲಾಗಿದ್ದರೂ ಸಾಮಾಜಿಕ ಮೀಸಲಾತಿ ಮತ್ತು ಸರ್ಕಾರಿ ಮೀಸಲಾತಿಗಳ ನಡುವೆ ಈ ದೇಶದ ಬಹುಸಂಖ್ಯಾತ ಹಿಂದುಳಿದವರ್ಗಗಳು ಸಾಮಾಜಿಕನ್ಯಾಯ ಪಡೆಯದ ವ್ಯವಸ್ಥೆ ಬಲಗೊಳಿಸುವ ದಿಸೆಯಲ್ಲಿ ದೇಶದ ವಿದ್ಯಮಾನಗಳು ನಡೆಯುತ್ತಿವೆ……
ಉತ್ತರಕನ್ನಡ ಜಿಲ್ಲೆಯಲ್ಲಂತೂ ಮೂಲನಿವಾಸಿ, ಬಹುಸಂಖ್ಯಾತ ಹಿಂದುಳಿದವರ್ಗಗಳಿಗೆ ಸಾಮಾಜಿಕ ನ್ಯಾಯದ ಬದಲು ಸಾಮಾಜಿಕ ಅನ್ಯಾಯ ಎಸಗಲಾಗುತ್ತಿದೆ ಎಂದು ನಿವೃತ್ತ ಉಪ ಅರಣ್ಯಸಂರಕ್ಷಣಾಧಿಕಾರಿ ಯು.ಡಿ.ನಾಯ್ಕ ಹೇಳಿದರು.
