

ಸಿದ್ದಾಪುರ ತಾಲೂಕಿನ ಸರಕಾರಿ ಮಾದರಿ ಬೇಡ್ಕಣಿ ಶಾಲೆಗೆ 117 ವರ್ಷಗಳ ಇತಿಹಾಸವಿದೆ.
ಇಂದು ತಾಲೂಕಿನ ಉತ್ತಮ ಶಾಲೆಗಳಲ್ಲಿ ಇದು ಒಂದು ಎಂದು ಗುರುತಿಸಿಕೊಂಡಿದೆ. 150 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆ ಇಲ್ಲಿದೆ.
ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಕಲಿಕೆಗೆ ಐದರಿಂದ ಏಳನೇ ತರಗತಿವರೆಗೆ ಪ್ರತಿ ತರಗತಿಗೆ ಸ್ಮಾರ್ಟ್ ಟಿ.ವಿ. ಇದ್ದು ಆಧುನಿಕ ಶಿಕ್ಷಣಕ್ಕೆ ಇದು ಸಹಕಾರಿಯಾಗಿದೆ.
ಈ ವರ್ಷ ಶಾಲೆಯ ಅಂಗಳದಲ್ಲಿ ಮಕ್ಕಳಿಗೆ ಕೃಷಿ ಪಾಠದೊಂದಿಗೆ ತರಕಾರಿ ಬೆಳೆಸಿದ್ದು ಹರಿವೆ , ಪಾಲಕ್ , ಟೊಮೆಟೊ ಮತ್ತು ಬದನೆಕಾಯಿ ಬೆಳೆಯಲಾಗಿದೆ. ಇದರಿಂದಾಗಿ ಮಕ್ಕಳಿಗೆ ಕೃಷಿಯನೈಜ ಅನುಭವ ನೀಡಲಾಗಿದೆ.
ಪ್ರತಿ ವರ್ಷ ಮಕ್ಕಳು ಜನವರಿ ತಿಂಗಳಲ್ಲಿ ಮಕ್ಕಳೇ ಸಂತೆ ನಡೆಸುವುದು ಇಲ್ಲಿಯ ವಿಶೇಷವಾಗಿದೆ. ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಮಕ್ಕಳಲ್ಲಿ ದೇಶಭಕ್ತಿ ಮೂಡುವಂತೆ ಯಾವುದೇ ತಾಲೂಕಾ ಮಟ್ಟದ ಕಾರ್ಯಕ್ರಮಕ್ಕೆ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿಆಚರಿಸಲಾಗುತ್ತಿದೆ.
ಶಾಲೆಯ ಅಭಿವೃದ್ಧಿಯಲ್ಲಿ ದಾನಿಗಳಾದ ಜಿ.ಕೆ. ಹರ್ಗಿಯವರ ಪಾತ್ರ : ನಿವೃತ್ತ ಸೈನಿಕರೂ ಮತ್ತು ಶಿಕ್ಷಕರೂ ಆಗಿರುವ ಜಿ.ಕೆ ಹರ್ಗಿ ತಮ್ಮ ವೃದ್ಯಾಪ್ಯ ವೇತನದ ಹಣದಿಂದ ಶಾಲೆಗೆ ಎರಡು ಸ್ಮಾರ್ಟ್ ಟಿ.ವಿ. ಮಕ್ಕಳಿಗೆ ಸಿಹಿ ಊಟ , ಶಾಲೆಯ ಅಂಗಳಕ್ಕೆ ಪಾಟೀಕಲ್ಲು , ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ್ದು ತಮ್ಮ ಪಿತ್ರಾರ್ಜಿತ ತೋಟದ ಆದಾಯದ 15,000 ರೂ. ಗಳನ್ನು ತಮ್ಮ ಜೀವಿತಾವಧಿನಂತರವೂ ಶಾಲೆಗೆ ನಿರಂತರವಾಗಿ ಸಿಗುವಂತೆ ಪತ್ರ ಬರೆದಿರುವುದು ವಿಶೇಷ.
ಇವರ ಜೊತೆ ಎಂ.ಆರ್. ನಾಯ್ಕ , ಅಣ್ಣಪ್ಪ ನಾಯ್ಕ ಹಾಗೂ ಇನ್ನೂ ಅನೇಕರು ಶಾಲೆಗೆ ದೇಣಿಗೆ ನೀಡಿರುತ್ತಾರೆ.
ಶಾಲೆಯ ಪ್ರಭಾರೆ ಮುಖ್ಯಾಧ್ಯಾಪಕ ಕೆ.ಪಿ.ರವಿ ಯವರ ದೂರದೃಷ್ಠಿ ಇಂದು ಈ ಶಾಲೆ ಇಷ್ಟು ಪ್ರಗತಿ ಹೊಂದಲು ಕಾರಣವೆಂದರೆ ತಪ್ಪೇನಿಲ್ಲ. ಮಕ್ಕಳನ್ನು ಕ್ರೀಡಾ ಚಟುವಟಿಕೆ , ಸಹಪಠ್ಯ ಚಟುವಟಿಕೆ , ಇನ್‍ಸ್ಪೈರ್ ಅವಾರ್ಡ್ ಚಟುವಟಿಕೆಗಳಲ್ಲಿ ಶಾಲೆಯ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಇಂದು ಜಿಲ್ಲಾ ಮಟ್ಟ , ರಾಜ್ಯ ಮಟ್ಟದವರೆಗೆ ಪ್ರತಿನಿಧಿಸುವಂತೆ ಪ್ರೋತ್ಸಾಹಿಸುತ್ತಿರುವುದು ಸಮಾಜ ಇವರನ್ನು ಗೌರವಿಸುವಂತೆ ಮಾಡಿದೆ. ಶಾಲೆಯ ಮೇಲ್‍ಉಸ್ತುವಾರಿ ಸಮೀತಿ ಯುವ ಉತ್ಸಾಹಿ ಪಾಲಕರಿಂದ ಕೂಡಿದೆ. ಗ್ರಾಮಸ್ಥರು ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ ನಾಯ್ಕರೊಂದಿಗಿನ ಸಮೀತಿ ಈ ಶಾಲೆಯ ಪ್ರಗತಿಯ ಹಿನ್ನೆಲೆಯಲ್ಲಿ ಅಹರ್ನಿಸಿ ದುಡಿಯುತ್ತಿರುವ ಎಲ್ಲರೂ ಮೆಚ್ಚುಗೆವ್ಯಕ್ತಪಡಿಸುತ್ತಾರೆ.
ಮಂಡ್ಲಿಕೊಪ್ಪ ಬಳಿ ಬಂದ ಬಂಧೀಸರ ವನೌಷಧದ ಜನಪ್ರೀಯ ನಡೆ
ಸಿದ್ಧಾಪುರ ಬಂಧೀಸರದ ಅರುಣ ಗೌಡರ್ ನಾಟಿವೈದ್ಯರಾಗಿ ಹೆಸರುಮಾಡುತಿದ್ದಾರೆ.
ಅರುಣ್ ಗೌಡರ್ ಕುಟುಂಬದ ನಾಟಿ ಔಷಧಕ್ಕೂ ಬಿಳಗಿ ಅರಸರ ಕಾಲದ ವನೌಷಧಕ್ಕೂ ಬಾದರಾಯಣ ಸಂಬಂಧವಿದೆ.
300 ವರ್ಷಗಳ ಹಿಂದೆ ಈ ಭಾಗದ ಸಾಮಂತ ಅರಸರಾಗಿದ್ದ ಬಿಳಗಿ ಅರಸರ ಕೊನೆಯ ರಾಜರ ಹೆಂಡತಿ(ರಾಣಿ) ಈ ಮನೆತನದವರು ಎಂಬುದು ಚಾರಿತ್ರಿಕ ದಾಖಲೆ.
ಇಂಥ ಹಿನ್ನೆಲೆಯ ಇವರ ಕುಟುಂಬದ ವನೌóಷಧಕ್ಕೆ ಸುಮಾರು ನೂರಾರು ವರ್ಷಗಳ ಇತಿಹಾಸವಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅರುಣ್ ಗೌಡ.
ಬಂಧೀಸರ ಔಷಧ,ಗೌಡರ ನಾಟಿಔಷಧ ಎಂದು ಪ್ರಖ್ಯಾತವಾಗಿರುವ ಬಂಧೀಸರ ಗೌಡರ ಕುಟುಂಬದ ಔಷಧಿಗೆ ವಾಸಿಯಾಗದ ಕಾಯಿಲೆಗಳೇ ಇಲ್ಲ.

