

ಸಿದ್ಧಾಪುರ ಬಂಧೀಸರದ ಅರುಣ ಗೌಡರ್ ನಾಟಿವೈದ್ಯರಾಗಿ ಹೆಸರುಮಾಡುತಿದ್ದಾರೆ.
ಅರುಣ್ ಗೌಡರ್ ಕುಟುಂಬದ ನಾಟಿ ಔಷಧಕ್ಕೂ ಬಿಳಗಿ ಅರಸರ ಕಾಲದ ವನೌಷಧಕ್ಕೂ ಬಾದರಾಯಣ ಸಂಬಂಧವಿದೆ.
300 ವರ್ಷಗಳ ಹಿಂದೆ ಈ ಭಾಗದ ಸಾಮಂತ ಅರಸರಾಗಿದ್ದ ಬಿಳಗಿ ಅರಸರ ಕೊನೆಯ ರಾಜರ ಹೆಂಡತಿ(ರಾಣಿ) ಈ ಮನೆತನದವರು ಎಂಬುದು ಚಾರಿತ್ರಿಕ ದಾಖಲೆ.
ಇಂಥ ಹಿನ್ನೆಲೆಯ ಇವರ ಕುಟುಂಬದ ವನೌಷಧಕ್ಕೆ ಸುಮಾರು ನೂರಾರು ವರ್ಷಗಳ ಇತಿಹಾಸವಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅರುಣ್ ಗೌಡ.
ಬಂಧೀಸರ ಔಷಧ,ಗೌಡರ ನಾಟಿಔಷಧ ಎಂದು ಪ್ರಖ್ಯಾತವಾಗಿರುವ ಬಂಧೀಸರ ಗೌಡರ ಕುಟುಂಬದ ಔಷಧಿಗೆ ವಾಸಿಯಾಗದ ಕಾಯಿಲೆಗಳೇ ಇಲ್ಲ.
ಮೂಲವ್ಯಾಧಿ, ಸಂತಾನಹೀನತೆ,ಸರ್ಪಸುತ್ತು, ಗ್ಯಾಸ್ಟ್ರಿಕ್, ಮಧುಮೇಹ ಬಹುತೇಕ ಎಲ್ಲಾ ತೊಂದರೆಗಳಿಗೆ ಔಷಧಿನೀಡುವ ಬಂಧೀಸರ ಅರುಣ್ ಗೌಡರ್ ವಿಶೇಷವೆಂದರೆ…
ಗೌಡರ್ ಯೋಗ,ಭವಿಷ್ಯ,ಜೋತಿಷ್ಯ ಬಲ್ಲವರು. ನಾಟಿ ಔಷಧಿಗೆ ಜ್ಯೋತಿಷ್ಯ,ಯೋಗಗಳ ನೆರವಿದ್ದರೆ ಉತ್ತಮ ಫಲಶೃತಿ ಎನ್ನುವ ಗೌಡರ್ ಕೃಷಿಕನಾಗಿ ನಾಟಿವೈದ್ಯ,ವನೌಷಧಿ ನೀಡಿಕೆಯಿಂದ ಪ್ರಸಿದ್ಧರಾಗಿದ್ದಾರೆ. ಮೂಲತ: ಕುಣಜಿಯವರಾದ ಬಂಧೀಸರ ಗೌಡರ ಕುಟುಂಬ ಕೃಷಿ,ಉದ್ಯಮ, ಶಿಕ್ಷಣದಿಂದ ರಾಜ್ಯವ್ಯಾಪಿ ನೆಲೆಸಿದ್ದಾರೆ. ಇವರೆಲ್ಲರನ್ನೂ ಪರಿಚಯಿಸುವ ಬಂಧೀಸರ ನಾಟಿಔಷಧಿಗೆ ಅರುಣ್ ಗೌಡರ್ ಮುತ್ತಜ್ಜನವರ ವರೆಗೆ ದಾಖಲೆಇದೆ.
ಪ್ರಸಿದ್ಧರು,ಪ್ರಖ್ಯಾತರು ವಿಶೇಶ ವ್ಯಕ್ತಿಗಳಿಂದ ಹಿಡಿದು ಸ್ಥಳಿಯ ಜನಸಾಮಾನ್ಯರವರೆಗೆ ಎಲ್ಲರಿಗೂ ಪರಿಚಿತವಾಗಿರುವ ಬಂಧೀಸರದ ನಾಟಿ ಔಷಧಿ ಕೋಲಶಿರ್ಸಿ ಬಳಿಯ ಬಂಧೀಸರದಲ್ಲಿ ನೀಡಲಾಗುತಿತ್ತು. ಈಗ ಆಸಕ್ತರ ಕೋರಿಕೆ ಮೇರೆಗೆ ತಮ್ಮ ವಾಸಸ್ಥಾನವನ್ನು ಬಂಧೀಸರದಿಂದ ಶಿರಸಿ ರಸ್ತೆಯ ಮಂಡ್ಲಿಕೊಪ್ಪ ಬಳಿ ವರ್ಗಾಯಿಸಿರುವ ಅರುಣ್ ದೂರದ ಊರುಗಳಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈಗ ಮುಖ್ಯರಸ್ತೆಯ ಪಕ್ಕಕ್ಕೇ ಬಂದಿದ್ದೇನೆ ಎನ್ನುತ್ತಾರೆ ಮುಗುಳ್ನಗುತ್ತಾರೆ.
ಗೌಡರ್ ವಾರದ ಗುರುವಾರ ಮತ್ತು ರವಿವಾರ ಔಷಧಿಹುಡುಕಿ ಬರುವ ರೋಗಿಗಳ ಕಾರಣಕ್ಕೆ ಅನ್ಯ ಕೆಲಸ ಒಪ್ಪಿಕೊಳ್ಳುವುದಿಲ್ಲ. ಕೃಷಿ,ಪ್ರವಾಸ ಸೇರಿದ ಉತ್ತಮ ಅಭ್ಯಾಸ,ಹವ್ಯಾಸಗಳ ಅರುಣಗೌಡರ್ ಈಗ ಶಿರಸಿ-ಸಿದ್ಧಾಪುರ ರಸ್ತೆಯ ಸಮೀಪ ವಾಸವಿರುವುದರಿಂದ ಹಿಂದಿನಂತೆ ಪರ ಊರುಗಳಿಂದ ಬರುವ ಜನರಿಗೆ ದಾರಿ ತೋರಿಸುವ ಕೆಲಸ ಕಡಿಮೆಯಾಗಿದೆ ಎನ್ನುವ ಸ್ಥಳಿಯರೊಬ್ಬರು ನೂರಾರು ವರ್ಷಗಳಿಂದ ಔಷಧ ನೀಡುತ್ತಿರುವ ಕುಟುಂಬ ಈಗಲೂ ಈ ಅಭ್ಯಾಸ ಮುಂದುವರಿಸಿಕೊಂಡು ಹೋಗುತ್ತಿರುವುದು ಜನರ ಭಾಗ್ಯ. ಇವರಿಂದ ವನೌಷಧ ಪಡೆದವರು ಸಂತಾನ ಭಾಗ್ಯ ಪಡೆದು ಖುಷಿಹಂಚಿಕೊಂಡಿದ್ದು, ಮಧುಮೇಹ, ಬಿ.ಪಿ. ಕಾಮಲೆಯಂಥ ದೊಡ್ಡರೋಗಗಳನ್ನು ನಿಯಂತ್ರಿಸಿದರೆಂದು ಖುಷಿ ಹಂಚಿಕೊಂಡ ಅನೇಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದೇನೆನ್ನುತ್ತಾರೆ.
ರಸ್ತೆ ಸರಿಯಿಲ್ಲದ ಮೂಲೆಯ ಗ್ರಾಮದಲ್ಲಿ ಉಳಿದು ಅನೇಕರ ಆರೋಗ್ಯ ಸುಧಾರಣೆ, ತೊಂದರೆ ಬಗೆಹರಿಸಿದ ಅರುಣ್ ಗೌಡರ್ ಸರಳತೆ, ಸಹಜ ಜನಹಿತಾಸಕ್ತಿ ಅವರ ನಾಟಿ ವೈದ್ಯಕ್ಕೆ ಮೆರಗು ನೀಡಿದೆ. ನಾಟಿಔಷಧಿಯಿಂದ ಪ್ರಸಿದ್ಧರಾಗಿರುವ ಬಂಧೀಸರದ ಕುಟುಂಬ ಈಗ ಜನರ ಅನುಕೂಲಕ್ಕಾಗಿ ಸಿದ್ಧಾಪುರ-ಶಿರಸಿ ಮಾರ್ಗದ ಮಂಡ್ಲಿಕೊಪ್ಪ ಬಳಿ ನೆಲೆಸಿ ಔಷಧೋಪಚಾರಕ್ಕೆ ಮುಂದಾಗಿರುವುದು ಅವರ ಸಮಾಜಮುಖಿ ನಿಲುವಿನ ಪ್ರತಿಬಿಂಬ. ಆಸಕ್ತರು ಇವರನ್ನು ಸಂಪರ್ಕಿಸಬಹುದಾದ ಚರದೂರವಾಣಿ ಸಂಖ್ಯೆ-9481914555


