

ಹೊನ್ನಾವರ ತಾಲೂಕಿನ ಟಿ.ವಿ. ನಿರೂಪಕ ಗಜಾನನ ಹೆಗಡೆ ಮತ್ತು ಹೊನ್ನಾವರದ ಇತಿಹಾಸದ ಪ್ರಾಧ್ಯಾಪಕ ಸಿದ್ಧಾಪುರ ಮೂಲದ ಪಿ.ಡಿ.ನಾಯ್ಕ ಮಂಗಳವಾರ ನಿಧನರಾದರು.
ಗಜಾನನ ಹೆಗಡೆ ಕೆಲವು ಪತ್ರಿಕೆಗಳ ನಂತರ 2000ದ ದಶಕದಲ್ಲಿ ಈ ಟಿ.ವಿ.ಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಸಂಘದೋಷದ ಕೋಮುವಾದಿಯಾಗದೆ ಎಲ್ಲರೊಳಗೊಂದಾಗಿ ಎಲ್ಲರನ್ನೂ ಪ್ರೀತಿಸುತಿದ್ದ ಗಜಾನನ ಹೆಗಡೆ ಕೆಲವು ವರ್ಷಗಳ ಕಾಲ ವಾಹಿನಿಗಳಲ್ಲಿದ್ದು ನಂತರ ರಂಗಭೂಮಿ,ಸಂಗೀತದ ಆಸಕ್ತಿಗಳಿಂದ ಮಾಧ್ಯಮಕ್ಷೇತ್ರದಿಂದ ಹೊರಗೆ ಉಳಿದಿದ್ದರು.
ಇದೇವಾರ ಆಕಸ್ಮಿಕವಾಗಿ ಸ್ಮೃತಿತಪ್ಪಿ ಬಿದ್ದಿದ್ದ ಗಜಾನನ ಹೆಗಡೆಯವರನ್ನು ಬೆಂಗಳೂರು ಕಿಮ್ಸ್ ಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತರಾದ ಗಜಾನನ ಪುತ್ರ,ಪುತ್ರಿಯೊಂದಿಗೆ ಪತ್ನಿ ಸೇರಿ ಅಪಾರ ಬಂಧುಗಳು ಹಿತೈಶಿಗಳನ್ನು ಅಗಲಿದ್ದಾರೆ.
ಪಿ.ಡಿ.ನಾಯ್ಕ-
ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದ ಪಿ.ಡಿ.ನಾಯ್ಕ ಸಿದ್ಧಾಪುರದ ಹೆಗ್ಗೇರಿಯವರು.ಸಿದ್ಧಾಪುರದಲ್ಲಿ ಪದವಿ,ಕ.ವಿ.ವಿ.ಯಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಪಡೆದಿದ್ದ ಪಿ.ಡಿ.ನಾಯ್ಕ ಶಿರಸಿಯಲ್ಲಿ ನೆಲೆಸಿದ್ದರು.
ಕ್ರೀಡೆ,ಸಾಹಿತ್ಯ,ಸಂಗೀತ,ಸಂಶೋಧನೆಗಳ ಆಸಕ್ತರಾಗಿದ್ದ ಪಿ.ಡಿ.ನಾಯ್ಕ ಗೃಹಾಲಂಕಾರ,ಶಿಸ್ತಿಗೆ ಹೆಸರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತಿದ್ದ ನಾಯ್ಕ ಉಡುಪಿ ಆಸ್ಫತ್ರೆಯಲ್ಲಿ ಅಸುನೀಗಿದ್ದಾರೆ.ಆಯುರ್ವೇದದ ವೈದ್ಯೆ ಪತ್ನಿ ವಾಹಿನಿ ಮತ್ತು ಮಗ,ಮಗಳನ್ನು ಅಗಲಿರುವ ಅವರಿಗೆ ಹುಟ್ಟೂರು ಹೆಗ್ಗೇರಿಯಲ್ಲಿ ಸಹೋದರರು, ಕುಟುಂಬಸ್ಥರು,ಹಿತೈಶಿಗಳು,ಬಂಧುಗಳು ಸೇರಿದ ಅಪಾರ ಅಭಿಮಾನಿ ಬಳಗವಿತ್ತು.ಅವರ ಅಳಿಯ ಆಯ್.ಎಫ್.ಎಸ್. ಅಧಿಕಾರಿ ಗಣಪತಿ ಕೆ.
ದುಬಾರಿ,ಐಶಾರಾಮಿ ವೆಲ್‍ಫೈರ್ ಬಿಡುಗಡೆ
ಐಶಾರಾಮಿ ಮತ್ತು ದುಬಾರಿ ಕಾರುಗಳಿಗೆ ಹೆಸರುವಾಸಿಯಾಗಿರುವ ಟಯೋಟಾ ಬುಧವಾರ ವೆಲ್‍ಫೈರ್ ಎನ್ನುವ ಹೊಸ ದುಬಾರಿ ಕಾರು ಬಿಡುಗಡೆಮಾಡಿದೆ. ಬಹುಪಯೋಗಿ ಕಾರು ಎಂದು ಪ್ರಚಾರ ನೀಡಿರುವ ಈ ಕಾರಿನ ಭಾರತೀಯ ಮಾರುಕಟ್ಟೆಯ ಬೆಲೆ 79ಲಕ್ಷಗಳು.


