
ಐಶಾರಾಮಿ ಮತ್ತು ದುಬಾರಿ ಕಾರುಗಳಿಗೆ ಹೆಸರುವಾಸಿಯಾಗಿರುವ ಟಯೋಟಾ ಬುಧವಾರ ವೆಲ್‍ಫೈರ್ ಎನ್ನುವ ಹೊಸ ದುಬಾರಿ ಕಾರು ಬಿಡುಗಡೆಮಾಡಿದೆ. ಬಹುಪಯೋಗಿ ಕಾರು ಎಂದು ಪ್ರಚಾರ ನೀಡಿರುವ ಈ ಕಾರಿನ ಭಾರತೀಯ ಮಾರುಕಟ್ಟೆಯ ಬೆಲೆ 79ಲಕ್ಷಗಳು.
ರಾಜಕಾರಣಿಗಳು ಶ್ರೀಮಂತರ ದುಬಾರಿ ಕಾರು ಎಂದು ಪ್ರಸಿದ್ಧವಾಗಿದ್ದ ಫಾರ್‍ಚೂನರ್ ಕಾರ್‍ಗಿಂತ ದುಪ್ಪಟ್ಟು ಬೆಲೆಯ ಈ ಕಾರು ಬೆಂಜ್‍ಕಾರಿಗೆ ಸ್ಫರ್ಧಿ ಎನ್ನಲಾಗಿದೆ. ಫೆ,26 ರ ಬುಧವಾರದಿಂದ ಭಾರತೀಯ ಮಾರುಕಟ್ಟೆ ಪ್ರವೇಶಿಸಿರುವ ಈ ಕಾರಿನ ಬಗ್ಗೆ ಕುತೂಹಲ ಗರಿಗೆದರಿದೆ.
ಆಧುನಿಕ ಶಿಕ್ಷಣದ ಜೊತೆಗೆ ಕೃಷಿ ಶಿಕ್ಷಣ ನೀಡುವ ಬೇಡ್ಕಣಿ ಶಾಲೆ
ಸಿದ್ದಾಪುರ ತಾಲೂಕಿನ ಸರಕಾರಿ ಮಾದರಿ ಬೇಡ್ಕಣಿ ಶಾಲೆಗೆ 117 ವರ್ಷಗಳ ಇತಿಹಾಸವಿದೆ.
ಇಂದು ತಾಲೂಕಿನ ಉತ್ತಮ ಶಾಲೆಗಳಲ್ಲಿ ಇದು ಒಂದು ಎಂದು ಗುರುತಿಸಿಕೊಂಡಿದೆ. 150 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆ ಇಲ್ಲಿದೆ.
ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಕಲಿಕೆಗೆ ಐದರಿಂದ ಏಳನೇ ತರಗತಿವರೆಗೆ ಪ್ರತಿ ತರಗತಿಗೆ ಸ್ಮಾರ್ಟ್ ಟಿ.ವಿ. ಇದ್ದು ಆಧುನಿಕ ಶಿಕ್ಷಣಕ್ಕೆ ಇದು ಸಹಕಾರಿಯಾಗಿದೆ.


