

ಸಂಸ್ಕೃತಿಗಾಗಿ ಪರಂಪರೆ ಹೆಸರಿನಲ್ಲಿ ಸ್ಥಳಿಯ(ಸಿದ್ಧಾಪುರ) ಮುರುಳೀವನ ಮತ್ತು ಸಂಸ್ಕೃತಿ ಸಂಪದ ಪ್ರಾರಂಭಿಸಿರುವ ನಾದಪ್ರದಕ್ಷಿಣೆಯ 12 ನೇ ಕಾರ್ಯಕ್ರಮದ ಅಂಗವಾಗಿ 48 ಗಂಟೆಗಳ ಸಂಗೀತ ಕಾರ್ಯಕ್ರಮ ಫೆ.29 ಮತ್ತು ಮಾ.1 ರಂದು ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಘಟಕರಾದ ವಿಜಯ ಹೆಗಡೆ ಮತ್ತು ಕಿರಣ ಹೆಗಡೆ ಮಘೇಗಾರು 2 ದಿವಸಗಳ 12 ನೇ ನಾದಪ್ರದಕ್ಷಿಣೆಯಲ್ಲಿ 14 ಅಧಿವೇಶನಗಳು ನಡೆಯಲಿವೆ.15ಪ್ರಮುಖ ಕಲಾವಿದರೊಂದಿಗೆ ಒಟ್ಟೂ 26 ಜನ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಭಾನುವಾರ ಗೌರವ ಸಮರ್ಪಣೆ ನಡೆಯಲಿದ್ದು ಈ ಸಂಗೀತಗೋಷ್ಠಿಗಳು ಯುಟ್ಯೂಬ್ ನಲ್ಲಿ ನೇರಪ್ರಸಾರವಾಗಲಿವೆ ಎಂದು ಶೇಷಗಿರಿಭಟ್ ಹೇಳಿದರು.
ನಾದಪ್ರದಕ್ಷಿಣೆಯ 12 ನೇ ಕಾರ್ಯಕ್ರಮದ ಭಾನುವಾರದ ಮಧ್ಯಾಹ್ನ 4.30 ಕ್ಕೆ ಈಚಲಕರಂಜಿಯ ಡಾ.ಚಂದ್ರಶೇಖರ್ ಕಾಣೆ,ವಿಶ್ವೇಶ್ವರ ಗಾಯತ್ರಿಯವರಿಗೆ ಗೌರವ ಸಮರ್ಪಣೆ ನಡೆಯಲಿದ್ದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಗೌರವ ನುಡಿ ನುಡಿಯಲಿದ್ದಾರೆ. ವಿಜಯ ಹೆಗಡೆ ದೊಡ್ಮನೆ ಮತ್ತು ಸಿ.ವಿ.ಹೆಗಡೆ ಮಘೇಗಾರು ಉಪಸ್ಥಿತರಿರಲಿದ್ದಾರೆ. ಈ ಸಂಗೀತ ಕಾರ್ಯಕ್ರಮಗಳ 2 ದಿವಸ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದರು.

ದೆಹಲಿ: ರಾಷ್ಟ್ರೀಯ ಅವಮಾನ,
ಗೃಹಸಚಿವರ ರಾಜೀನಾಮೆಗೆ ಆಗ್ರಹ
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ಸಂಘಟಿತ ಅಪರಾಧವಾಗಿದ್ದು ಇದರ ನೈತಿಕ ಹೊಣೆಹೊತ್ತು ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಇಂದು ರಾಷ್ಟ್ರಪತಿ ಕೋವಿಂದ್‍ರನ್ನು ಭೇಟಿಮಾಡಿದ ಕಾಂಗ್ರೆಸ್ ನಿಯೋಗ ಮನವಿ ನೀಡಿ ದೆಹಲಿಯ ಹಿಂಸಾಚಾರದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಕಪ್ರೇಕ್ಷಕರಂತೆ ವರ್ತಿಸುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಸೂಕ್ತವ್ಯವಸ್ಥೆಮಾಡಲು ವಿಫಲರಾದ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿ ಘಟನೆ ರಾಷ್ಟ್ರೀಯ ಅವಮಾನ,ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದಿದ್ದಾರೆ.
ಸಜ್ಜನರಿಬ್ಬರ ಆಕಸ್ಮಿಕ ಅಂತ್ಯಗಳು
ಹೊನ್ನಾವರ ತಾಲೂಕಿನ ಟಿ.ವಿ. ನಿರೂಪಕ ಗಜಾನನ ಹೆಗಡೆ ಮತ್ತು ಹೊನ್ನಾವರದ ಇತಿಹಾಸದ ಪ್ರಾಧ್ಯಾಪಕ ಸಿದ್ಧಾಪುರ ಮೂಲದ ಪಿ.ಡಿ.ನಾಯ್ಕ ಮಂಗಳವಾರ ನಿಧನರಾದರು.
ಗಜಾನನ ಹೆಗಡೆ ಕೆಲವು ಪತ್ರಿಕೆಗಳ ನಂತರ 2000ದ ದಶಕದಲ್ಲಿ ಈ ಟಿ.ವಿ.ಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಸಂಘದೋಷದ ಕೋಮುವಾದಿಯಾಗದೆ ಎಲ್ಲರೊಳಗೊಂದಾಗಿ ಎಲ್ಲರನ್ನೂ ಪ್ರೀತಿಸುತಿದ್ದ ಗಜಾನನ ಹೆಗಡೆ ಕೆಲವು ವರ್ಷಗಳ ಕಾಲ ವಾಹಿನಿಗಳಲ್ಲಿದ್ದು ನಂತರ ರಂಗಭೂಮಿ,ಸಂಗೀತದ ಆಸಕ್ತಿಗಳಿಂದ ಮಾಧ್ಯಮಕ್ಷೇತ್ರದಿಂದ ಹೊರಗೆ ಉಳಿದಿದ್ದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
