

ರಾಜ್ಯದ 210 ಸ್ಥಳಿಯ ಸಂಸ್ಥೆಗಳಲ್ಲಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯದೆ ಸಾವಿರಾರು ಚುನಾಯಿತಮುಖಂಡರಿಗೆ ಅಧಿಕಾರವಿಲ್ಲದಂತಾಗಿದ್ದು ಕಾನೂನು ಸಚಿವಾಲಯದ ನೆರವಿನೊಂದಿಗೆ ಈ ಗೊಂದಲ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಮನವಿ ಮಾಡಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠಗಳಲ್ಲಿ ಈ ಬಗ್ಗೆ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಿಂದಿನ ಸರ್ಕಾರ ಚುನಾವಣಾಪೂರ್ವ ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ್ದು ಅದಕ್ಕೆ ಸಲ್ಲಿಕೆಯಾದ ತಕರಾರುಗಳನ್ನು ಸರಿಪಡಿಸಿ ಗೊಂದಲ ನಿವಾರಿಸುವ ಪೂಜಾರಿಯವರ ಮನವಿಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕಾರ್ಯದರ್ಶಿಗಳಿಗೆ ಈ ಬಗ್ಗೆಶೀಘ್ರ ನಿರ್ಧಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
12 ನೇ ನಾದಪ್ರದಕ್ಷಿಣೆ,2 ದಿವಸ ನಿರಂತರ ಸಂಗೀತ ಅಧಿವೇಶನ
ಸಂಸ್ಕøತಿಗಾಗಿ ಪರಂಪರೆ ಹೆಸರಿನಲ್ಲಿ ಸ್ಥಳಿಯ ಮುರುಳೀವನ ಮತ್ತು ಸಂಸ್ಕøತಿ ಸಂಪದ ಪ್ರಾರಂಭಿಸಿರುವ ನಾದಪ್ರದಕ್ಷಿಣೆಯ 12 ನೇ ಕಾರ್ಯಕ್ರಮದ ಅಂಗವಾಗಿ 48 ಗಂಟೆಗಳ ಸಂಗೀತ ಕಾರ್ಯಕ್ರಮ ಫೆ.29 ಮತ್ತು ಮಾ.1 ರಂದು ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಘಟಕರಾದ ವಿಜಯ ಹೆಗಡೆ ಮತ್ತು ಕಿರಣ ಹೆಗಡೆ ಮಘೇಗಾರು 2 ದಿವಸಗಳ 12 ನೇ ನಾದಪ್ರದಕ್ಷಿಣೆಯಲ್ಲಿ 14 ಅಧಿವೇಶನಗಳು ನಡೆಯಲಿವೆ.15ಪ್ರಮುಖ ಕಲಾವಿದರೊಂದಿಗೆ ಒಟ್ಟೂ 26 ಜನ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
