

ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ 20 ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ 5 ಕಿ.ಮೀ. ಜಾಗೃತಾ ಬೈಕ್ ರ್ಯಾಲಿ ಮತ್ತು ಬೃಹತ್ ಪ್ರತಿಭಟನಾ ಸಭೆ ಮಾ.3 ರಂದು ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಮುಂಜಾನೆ 9.30 ಗಂಟೆಗೆ ಪ್ರತಿಭಟನಾಕಾರರು ರ್ಯಾಲಿ ಮೂಲಕ ಹೆಗ್ಗರಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಎದುರುಗಡೆಯಿಂದ ವಾಜಗಾರ ಕ್ರಾಸ್-ತಂಡಾಗುಂಡಿ ಮಾರ್ಗವಾಗಿ ಕುಳ್ಳೆ ಗ್ರಾಮಕ್ಕೆ ಸಾಗಿ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಸಭೆ ಜರುಗಲಿದೆ.
ತಾಲೂಕಿನ ನಿಲ್ಕುಂದ, ಮುಳಗುಂದ, ಹಳ್ಳಿಬೈಲ್, ಹುಕ್ಕಳಿ, ಶಿವಳಮನೆ, ಉಂಚಳ್ಳಿ,
ನೇರಗೋಡ, ಗಿಜಗುಳಿ, ನೈಗಾರ, ಕಡವಾಡ, ಹೊನ್ನೆಕೊಪ್ಪ, ಸುರಗಾಲ್, ಹೇಮಗಾರ, ಹೆಜನಿ, ಕುಡಗುಂದ, ಮಲೆಮನೆ, ಸುತ್ಲಮನೆ, ವಾಜಗೋಡ್, ದಾನಮಾಂವ್, ತೇಳಿಕೇರಿ ಸುತ್ತಮುತ್ತಲಿನ ಗ್ರಾಮಗಳನ್ನು ಶೆರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿದ ಹಿನ್ನೆಲೆಯಲ್ಲಿ 20 ಗ್ರಾಮಗಳಿಂದ ಅರಣ್ಯ ಮತ್ತು ಕಂದಾಯ ಭೂಮಿ ಕಬ್ಜೆಯಲ್ಲಿರುವ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸುಮಾರು 4 ಸಾವಿರ ಕುಟುಂಬಗಳು ಅತಂತ್ರ ವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.
ದೇಶಸೇವೆಮೂಲಕ ಋಣತೀರಿಸಲು ಕರೆ-ಕನಸು ಕಾಣುವ ಬರದಿಂದ ಗರ
ವಿದ್ಯಾರ್ಥಿಗಳಿಗೆ ದೊಡ್ಡ ಕನಸುಗಳಿರದಿದ್ದರೆ ಅಂಥವರ ಬದುಕಿಗೆ ಗರ ಬಡಿಯುವುದು ನಿಶ್ಚಿತ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಹೇಳಿದರು. ಅವರು ತಾಲೂಕಿನ ಕೋಲಶಿರ್ಸಿ ಬಿ.ಸಿ.ಎಂ. ಬಾಲಕಿಯರ ವಸತಿ ನಿಲಯದ ವಾರ್ಷಿಕೋತ್ಸವ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


