ಸಂಪಖಂಡದ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನೆ
ಕೋಮುಆಧಾರಿತ ಪ್ರಚೋದನೆಗಳಿಂದ ಹೊಸಜನಾಂಗದ ರಕ್ಷಣೆಗೆ ಸಲಹೆ
ಧರ್ಮ, ಕೋಮುಆಧಾರಿತವಾಗಿ ಯುವಜನರನ್ನು ತಪ್ಪುದಾರಿಗೆ ಎಳೆಯುವ ಪ್ರಚೋದನೆಗಳಿಂದ ಯುವಕರ ಯೋಚನಾಲಹರಿ ಸಂಕುಚಿತವಾಗುತಿದ್ದು ದಾರಿತಪ್ಪುವ ಯುವಜನರನ್ನು ಎಚ್ಚರಿಸುವ ಗುರುತರ ಜವಾಬ್ಧಾರಿ ಪಾಲಕರ ಮೇಲಿದೆ ಎಂದು ವಕೀಲ ಜಿ.ಟಿ.ನಾಯ್ಕ ಹೇಳಿದರು.
ಅವರು ತಾಲೂಕಿನ ಸಂಪಖಂಡದ ನಾಗಚೌಡೇಶ್ವರಿ ಯುವ
ಗೆಳೆಯರ ಬಳಗ ಆಯೋಜಿಸಿದ್ದ ಹೊನಲುಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಯುವಕರು ಪ್ರಚೋದನೆಗೆ ಒಳಗಾಗಿ ಅನಾಹುತಮಾಡಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಪರೇಶ್‍ಮೇಸ್ತ ಪ್ರಕರಣದ ಯುವಕರಿಗೆ ತಾವು ಹೇಗೆ ದಾರಿತಪ್ಪಿದ್ದೇವೆಂದು ಈಗ ಅರಿವಾಗುತ್ತಿದೆ. ಮಿಂಚಿಹೋದ ಕಾಲಕ್ಕೆ ಪರಿತಪಿಸುವ ಬದಲು ಮೊದಲೇ ಎಚ್ಚೆತ್ತುಕೊಂಡರೆ ಅಪಾಯದಿಂದ ಪಾರಾಗುವುದು ಸುಲಭ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ ಕನ್ನೇಶ್‍ಕೋಲಶಿರ್ಸಿ ನಮ್ಮ ಹಿನ್ನೆಲೆ, ಇತಿಹಾಸ, ಚರಿತ್ರೆ,ಸಾಧಕರ ಅನುಭವಗಳಿಂದ ನಾವು ಪಾಠ ಕಲಿಯಬೇಕು, ಉತ್ತೇಜಿತರಾಗಬೇಕು. ಆಗ ಮಾತ್ರ ನಮ್ಮ ಆಯ್ಕೆ ಸೂಕ್ತವಾಗುತ್ತದೆ. ಸಿದ್ಧಾಪುರದ ಹೋರಾಟ, ಸಾಧನೆ, ವರ್ತಮಾನಗಳೇ ನಮಗೆ ದಾರಿದೀಪವಾಗಬೇಕು ಎಂದು ಆಶಿಸಿದರು.
ರಾಷ್ಟ್ರ ಕಟ್ಟುವ ನೆಪದಲ್ಲಿ ಯುವ ಜನರನ್ನು ದುಷ್ಟಶಕ್ತಿಗಳು ಬಳಸಿಕೊಳ್ಳುತ್ತಿವೆ ಇದರಿಂದ ಜಾಗೃತರಾಗದಿದ್ದರೆ ಭವಿಷ್ಯ ಹಾಳಾಗುತ್ತದೆ ಎಂದು ರೈತಸಂಘದ ಅಧ್ಯಕ್ಷ ವೀರಭದ್ರನಾಯ್ಕ ಮಳವಳ್ಳಿ ಹೇಳಿದರು.
ಸಾಧಕ ಯುವತಿಯರು ಮತ್ತು ಶಿಕ್ಷಕರನ್ನು ಸನ್ಮಾನಿಸಿ,ಗೌರವಿಸಲಾಯಿತು. ಎಲ್.ಜಿ.ನಾಯ್ಕ,ಕೃಷ್ಣಮೂರ್ತಿ ನಾಯ್ಕ ಸೇರಿದಂತೆ ಕೆಲವರು ಉಪಸ್ಥಿತರಿದ್ದು ಯುವಕರಿಗೆ ಮಾರ್ಗದರ್ಶನ ಮಾಡಿದರು. ಸಂಪಖಂಡದ ಮೊದಲ ಕಬ್ಬಡ್ಡಿಪಂದ್ಯಾಟ ಮತ್ತು ಗೆಳೆಯರ ಬಳಗದ ಉದ್ಘಾಟನೆಗಳ ನೇತೃತ್ವವನ್ನು ದಿವಾಕರ ನಾಯ್ಕ ಮತ್ತು ಸುನೀಲ್ ನಾಯ್ಕ ವಹಿಸಿದ್ದರು.
ಆರ್.ಎಸ್.ಎಸ್. ನಿರ್ಣಯ ಮಂಡಿಸಿದ ಅಭಿವೃದ್ಧಿಪ್ರಾಧಿಕಾರ, ಕಾಂಗ್ರೆಸ್ ಸಂಸದರ ಸಭಾತ್ಯಾಗ
ನವದೆಹಲಿ,ಮಾ.04- ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರಕ್ಕೆ ಸಲ್ಲಿಸುವ ಮನವಿಯಲ್ಲಿ 2018 ರ ಆರ್.ಎಸ್.ಎಸ್. ಕಾರ್ಯಕ್ರಮದ ನಿರ್ಣಯದ ಮನವಿಯನ್ನುಮುದ್ರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಇಂದು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಮನವಿಯನ್ನು ಕೇಂದ್ರಕ್ಕೆ ನೀಡಲು ಇಂದು ದೆಹಲಿಯಲ್ಲಿ ಸರ್ವಪಕ್ಷಗಳ ಸದಸ್ಯರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅನುಮೋದನೆ ಪಡೆದು ಕೇಂದ್ರಕ್ಕೆ ಸಲ್ಲಿಸುವ ಮನವಿಯಲ್ಲಿ ಕನ್ನಡ ಹೋರಾಟಗಾರರು, ಕನ್ನಡ ಸಂಘಟನೆಗಳ ಮನವಿ ಸೇರಿಸದೆ ಮತಾಂಧ ಸಂಘಟನೆಯ ಹಳೆಯ ನಿರ್ಣಯವನ್ನು ಸೇರಿಸಿ ಮನವಿ ನೀಡುವ ರಾಜಕೀಯ ಪ್ರೇರಿತ ಪ್ರಯತ್ನವನ್ನು ರಾಜೇಗೌಡ ಸರ್ವಸದಸ್ಯರ ಗಮನಕ್ಕೆ ತಂದರು.
ಕೇಂದ್ರ ಸಚಿವ ಸದಾನಂದಗೌಡರ ನಿವಾಸದಲ್ಲಿ ನಡೆದ ಈ ಸರ್ವಪಕ್ಷಗಳ ಸಭೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಕ್ಷಪಾತವನ್ನು ವಿರೋಧಿಸಿ, ಪ್ರತಿಭಟಿಸಿದರು.
ಶರಾವತಿ ಅಭಯಾರಣ್ಯಕ್ಕೆ ಜನವಸತಿ ಪ್ರದೇಶ ಸೇರಿಸುವ ಅವೈಜ್ಞಾನಿಕ,ಕಾನೂನುವಿರೋಧಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಸಿದ್ಧಾಪುರ,ಮಾ.04- ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಹೆಚ್ಚುವರಿಯಾಗಿ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಅವೈಜ್ಞಾನಿಕ ಮತ್ತು ಸಂವಿಧಾನವಿರೋಧಿ ಕ್ರಮವನ್ನು ಕೈಬಿಡಲು ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯಪಾಲರಿಗೆ ಮನವಿ ಮಾಡಿದೆ.