

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರಕ್ಕೆ ಸಲ್ಲಿಸುವ ಮನವಿಯಲ್ಲಿ 2018 ರ ಆರ್.ಎಸ್.ಎಸ್. ಕಾರ್ಯಕ್ರಮದ ನಿರ್ಣಯದ ಮನವಿಯನ್ನುಮುದ್ರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಇಂದು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಮನವಿಯನ್ನು ಕೇಂದ್ರಕ್ಕೆ ನೀಡಲು ಇಂದು ದೆಹಲಿಯಲ್ಲಿ ಸರ್ವಪಕ್ಷಗಳ ಸದಸ್ಯರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅನುಮೋದನೆ ಪಡೆದು ಕೇಂದ್ರಕ್ಕೆ ಸಲ್ಲಿಸುವ ಮನವಿಯಲ್ಲಿ ಕನ್ನಡ ಹೋರಾಟಗಾರರು, ಕನ್ನಡ ಸಂಘಟನೆಗಳ ಮನವಿ ಸೇರಿಸದೆ ಮತಾಂಧ ಸಂಘಟನೆಯ ಹಳೆಯ ನಿರ್ಣಯವನ್ನು ಸೇರಿಸಿ ಮನವಿ ನೀಡುವ ರಾಜಕೀಯ ಪ್ರೇರಿತ ಪ್ರಯತ್ನವನ್ನು ರಾಜೇಗೌಡ ಸರ್ವಸದಸ್ಯರ ಗಮನಕ್ಕೆ ತಂದರು.
ಕೇಂದ್ರ ಸಚಿವ ಸದಾನಂದಗೌಡರ ನಿವಾಸದಲ್ಲಿ ನಡೆದ ಈ ಸರ್ವಪಕ್ಷಗಳ ಸಭೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಕ್ಷಪಾತವನ್ನು ವಿರೋಧಿಸಿ, ಪ್ರತಿಭಟಿಸಿದರು.
ಶರಾವತಿ ಅಭಯಾರಣ್ಯಕ್ಕೆ ಜನವಸತಿ ಪ್ರದೇಶ ಸೇರಿಸುವ ಅವೈಜ್ಞಾನಿಕ,ಕಾನೂನುವಿರೋಧಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಸಿದ್ಧಾಪುರ,ಮಾ.04- ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಹೆಚ್ಚುವರಿಯಾಗಿ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಅವೈಜ್ಞಾನಿಕ ಮತ್ತು ಸಂವಿಧಾನವಿರೋಧಿ ಕ್ರಮವನ್ನು ಕೈಬಿಡಲು ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ರಾಜ್ಯ ಸರ್ಕಾರವು ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ 20ಸಾವಿರ ಹೆಕ್ಟೇರ್ ಪ್ರದೇಶವನ್ನು ಸೇರಿಸಿದೆ. ಹೀಗೆ ಜನವಸತಿ ಇರುವ ಪ್ರದೇಶವನ್ನು ನಿಷೇಧಿತ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿಸಲು ಸಾರ್ವಜನಿಕ ಅಹವಾಲು ಕೇಳಬೇಕು. ಅಭಯಾರಣ್ಯ ವಿಸ್ತರಣೆ ಬಗ್ಗೆ ಜನಜಾಗೃತಿ ಮೂಡಿಸಬೇಕು.ಈ ನಿಯಮಗಳನ್ನು ಪಾಲಿಸದೆ. ಅರಣ್ಯ ಅತಿಕ್ರಮಣದಾರರ ಹಕ್ಕುಗಳನ್ನು ಮನ್ನಿಸದೆ. ಭಾರತೀಯ ನಾಗರಿಕರು ಸ್ವತಂತ್ರವಾಗಿ ಭಯಮುಕ್ತರಾಗಿ ಬದುಕುವ ಸ್ವಾತಂತ್ರ್ಯವನ್ನು ಹರಣ ಮಾಡಿ ಈ ಪ್ರಕ್ರಿಯೆ ನಡೆಸಲಾಗಿದೆ.

