

ಬೃಮ್ಹಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ರಾಜ್ಯಾದ್ಯಂತ ತನ್ನ ಚಟುವಟಿಕೆ ಪ್ರಾರಂಭಿಸಿದೆ.
ಇದರ ಅಂಗವಾಗಿ ಸಿದ್ದಾಪುರ ತಾಲೂಕಾ ಘಟಕ ರಚನೆಯಾಗಿದ್ದು ಇದರ ಅಧ್ಯಕ್ಷರು ಸದಸ್ಯರ
ಆಯ್ಕೆ ನಡೆದಿದೆ.
ಈ ಬಗ್ಗೆ ಇತ್ತೀಚೆಗೆ ತರಳಿಯಲ್ಲಿ ಸಭೆ ನಡೆಸಿ ಮಾಹಿತಿ ನೀಡಿದ ಈ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರರ ಮಾರ್ಗದರ್ಶನದಲ್ಲಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಈ ವಾರದಿಂದಲೇ ಗ್ರಾ.ಪಂ. ಘಟಕಗಳ ಸ್ಥಾಪನೆ ಮಾಡುತ್ತೇವೆ ಎಂದರು.
ಶೈಕ್ಷಣಿಕ,ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಳ ಜೊತೆಗೆ ಶಿಕ್ಷಣ, ಸಂಘಟನೆ, ಹೋರಾಟಗಳ ನಾರಾಯಣಗುರುಗಳ ಧ್ಯೇಯದಂತೆ ಈ ಘಟಕ ಕಾರ್ಯನಿರ್ವಹಿಸಲಿದೆ ಎಂದರು.
ಪದಾಧಿಕಾರಿಗಳ ಪಟ್ಟಿ ಹೀಗಿದೆ.- ವಿನಾಯಕ ನಾಯ್ಕ (ಅಧ್ಯಕ್ಷ) ಎ.ಜಿ.ನಾಯ್ಕ ಕಡಕೇರಿ (ಉಪಾಧ್ಯಕ್ಷ) ಕಿರಣ ನಾಯ್ಕ ಬಣಗಾರ (ಉಪಾಧ್ಯಕ್ಷ) ಪ್ರಶಾಂತ್ ನಾಯ್ಕ ಅವರಗುಪ್ಪಾ (ಪ್ರ.ಕಾ.) ಹರೀಶ್ ನಾಯ್ಕ ಕಾರ್ಯದರ್ಶಿ, ರವಿ ಆರ್. ನಾಯ್ಕ (ಸಂಚಾಲಕ) ನಾಗರಾಜ್ ಆರ್.ನಾಯ್ಕ, ಮೇಘರಾಜ್, ಜಗದೀಶ್ ಕೊಂಡ್ಲಿ, ನಿತೇಶ್ ನಾರಾಯಣ, ಶೇಖರ್ ನಾಯ್ಕ (ಸದಸ್ಯರು)
ವೈಭವದಿಂದ ಪ್ರಾರಂಭವಾದ ವಿಶ್ವಾಸ ಹೋಟೆಲ್-2
ಸಿದ್ಧಾಪುರ,ಮಾ.05-ನಗರದ ತಿಮ್ಮಪ್ಪನಾಯಕ ವೃತ್ತದ ಪ್ರಸಿದ್ಧ ರೊಟ್ಟಿ ಹೋಟೆಲ್ ವಿಶ್ವಾಸದ ಎರಡನೆಯ ಶಾಖೆ ಇಂದು ಬಸ್‍ನಿಲ್ದಾಣದ ಹಳೆ ಮಾರುತಿ ಹೋಟೆಲ್ ಜಾಗದಲ್ಲಿ ಶುಭಾರಂಭ ಮಾಡಿತು.
ಮಾರುತಿ ನಾಯ್ಕ ಸಹೋದರರು ಬಸ್ ನಿಲ್ಧಾಣದ ಬಳಿ ಪ್ರಾರಂಭಿಸಿರುವ ಈ ನೂತನ ವಿಶ್ವಾಸ್ ಹೋಟೆಲ್ ನಲ್ಲಿ ದಕ್ಷಿಣಭಾರತದ ಎಲ್ಲಾ ಖಾದ್ಯಗಳು ಸಿಗಲಿವೆ.ಇಂದು ಪ್ರಾರಂಭವಾದ ಈ ಹೋಟೆಲ್ ಶುಭಾರಂಭಕ್ಕೆ ಸಿದ್ಧಾಪುರದ ಪ್ರಮುಖರು, ಮಾರುತಿ ಸಹೋದರರ ಹಿತೈಶಿಗಳು, ಬಂಧುಗಳು ಆಗಮಿಸಿ, ಶುಭಕೋರಿದರು.
ಸ್ವಚ್ಛ,ಜನಪರ, ಪ್ರಾಮಾಣಿಕ ರಾಜಕಾರಣಕ್ಕಾಗಿ
ಕರ್ನಾಟಕ ರಾಷ್ಟ್ರ ಸಮೀತಿ
ರಾಜಕಾರಣ,ಜನಸೇವೆ ಯಲ್ಲಿ ಯಾರೆಲ್ಲಾ ಇರಬಾರದೋ, ಯಾರ್ಯಾರು ಬರಬಾರದೋ ಅಥವರೆಲ್ಲಾ ರಾಜಕಾರಣಿಗಳಾಗಿ ಈಗಿನ ವ್ಯವಸ್ಥೆ ಕಲುಷಿತಗೊಂಡಿದೆ. ಈ ಸ್ಥಿತಿಯಲ್ಲಿ ಸ್ವಚ್ಛ,ಪ್ರಾಮಾಣಿಕ, ಜನಪರ ರಾಜಕಾರಣ ಮಾಡಬಯಸುವವರಿಗಾಗಿ ಕರ್ನಾಟಕ ರಾಷ್ಟ್ರಸಮೀತಿ ಹೊಸ ನಾಯಕತ್ವ, ಹೊಸ ಆಲೋಚನೆ, ಯೋಜನೆಗಳೊಂದಿಗೆ ರಾಜ್ಯದಲ್ಲಿ ಕೆಲಸಮಾಡುವ ಸಂಕಲ್ಫಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.



