
ನಗರದ ತಿಮ್ಮಪ್ಪನಾಯಕ ವೃತ್ತದ ಪ್ರಸಿದ್ಧ ರೊಟ್ಟಿ ಹೋಟೆಲ್ ವಿಶ್ವಾಸದ ಎರಡನೆಯ ಶಾಖೆ ಇಂದು ಬಸ್‍ನಿಲ್ದಾಣದ ಹಳೆ ಮಾರುತಿ ಹೋಟೆಲ್ ಜಾಗದಲ್ಲಿ ಶುಭಾರಂಭ ಮಾಡಿತು.
ಮಾರುತಿ ನಾಯ್ಕ ಸಹೋದರರು ಬಸ್ ನಿಲ್ಧಾಣದ ಬಳಿ ಪ್ರಾರಂಭಿಸಿರುವ ಈ ನೂತನ ವಿಶ್ವಾಸ್ ಹೋಟೆಲ್ ನಲ್ಲಿ ದಕ್ಷಿಣಭಾರತದ ಎಲ್ಲಾ ಖಾದ್ಯಗಳು ಸಿಗಲಿವೆ.ಇಂದು ಪ್ರಾರಂಭವಾದ ಈ ಹೋಟೆಲ್ ಶುಭಾರಂಭಕ್ಕೆ ಸಿದ್ಧಾಪುರದ ಪ್ರಮುಖರು, ಮಾರುತಿ ಸಹೋದರರ ಹಿತೈಶಿಗಳು, ಬಂಧುಗಳು ಆಗಮಿಸಿ, ಶುಭಕೋರಿದರು.
ಸ್ವಚ್ಛ,ಜನಪರ, ಪ್ರಾಮಾಣಿಕ ರಾಜಕಾರಣಕ್ಕಾಗಿ
ಕರ್ನಾಟಕ ರಾಷ್ಟ್ರ ಸಮೀತಿ
ರಾಜಕಾರಣ,ಜನಸೇವೆ ಯಲ್ಲಿ ಯಾರೆಲ್ಲಾ ಇರಬಾರದೋ, ಯಾರ್ಯಾರು ಬರಬಾರದೋ ಅಥವರೆಲ್ಲಾ ರಾಜಕಾರಣಿಗಳಾಗಿ ಈಗಿನ ವ್ಯವಸ್ಥೆ ಕಲುಷಿತಗೊಂಡಿದೆ. ಈ ಸ್ಥಿತಿಯಲ್ಲಿ ಸ್ವಚ್ಛ,ಪ್ರಾಮಾಣಿಕ, ಜನಪರ ರಾಜಕಾರಣ ಮಾಡಬಯಸುವವರಿಗಾಗಿ ಕರ್ನಾಟಕ ರಾಷ್ಟ್ರಸಮೀತಿ ಹೊಸ ನಾಯಕತ್ವ, ಹೊಸ ಆಲೋಚನೆ, ಯೋಜನೆಗಳೊಂದಿಗೆ ರಾಜ್ಯದಲ್ಲಿ ಕೆಲಸಮಾಡುವ ಸಂಕಲ್ಫಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.
ಅವರು ಇಲ್ಲಿಯ ನೌಕರರ ಸಭಾಭವನದಲ್ಲಿ ನಡೆದ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.



