ಕರೋನಾ ವೈರಸ್ ಇರುವ ರೋಗಿಯೊಬ್ಬ ಇಂದು ಮಂಗಳೂರಿನ ವೆನ್‍ಲಾಕ್ ಆಸ್ಫತ್ರೆಯಿಂದ ತಪ್ಪಿಸಿಕೊಂಡು ಜನರ ಕುತೂಹಲ ತಲೆಬಿಸಿ ಹೆಚ್ಚಿಸಿದ್ದಾನೆ.
ವಿದೇಶದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ಧಾಣದಿಂದ ನೇರವಾಗಿ ನಿನ್ನೆ ಸಾಯಂಕಾಲ ವೆನ್‍ಲಾಕ್ ಆಸ್ಫತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಲಾಯಿತು. ಈ ತಪಾಸಣೆಯಲ್ಲಿ ಈ ವ್ಯಕ್ತಿಗೆ ಕೋವಿಡ್19 ಸೋಂಕು ತಗುಲಿರುವ ಬಗ್ಗೆ ಖಾತ್ರಿಯಾಯಿತು. ರವಿವಾರ ರಾತ್ರಿಯಿಂದ ಚಿಕಿತ್ಸೆ ಪಡೆದ ಈ ವ್ಯಕ್ತಿ ಇಂದು ಬೆಳಿಗ್ಗೆ ನಾಪತ್ತೆಯಾಗಿದ್ದಾನೆ.ಹೀಗೆ ನಾಪತ್ತೆಯಾದ ಕರೋನಾ ರೋಗಿಯ ಪತ್ತೆಗಾಗಿ ಪೊಲೀಸ್ ನೆರವು ಪಡೆಯಲಾಗಿದೆ.
ಈವರೆಗೆ ಭಾರತದಲ್ಲಿ 43 ಜನರಿಗೆ ಈ ಸೋಂಕು ತಾಕಿದ್ದು ವಿದೇಶಗಳಿಂದ ಬರುವ ಜನರಿಂದ ಈ ಸೋಂಕು ವಿಸ್ತರಿಸುತ್ತಿರುವುದರಿಂದ ವಿದೇಶದಿಂದ ಬರುವ ಜನರ ಮೇಲೆ ವಿಶೇಶ ನಿಗಾ ಇಡಲಾಗಿದೆ.
ಬೆಂಗಳೂರಿನಲ್ಲಿ ಬಹುತೇಕ ಕಡೆ ಈ ಸೋಂಕಿಗೆ ಹೆದರಿ ಬೇಬಿಸಿಟ್ಟಿಂಗ್ ಗಳು, ಶಿಶುವಿಹಾರಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವ ವರ್ತಮಾನ ಸುದ್ದಿಯಾಗಿದೆ. ದೊಡ್ಡ ನಗರಗಳಲ್ಲಿ ಕೋವಿಡ್ 19 ಭಯ, ಅರಣ್ಯವಿರುವ ಗ್ರಾಮ, ನಗರಗಳಲ್ಲಿ ಮಂಗನಖಾಯಿಲೆ ಭಯ. ಈ ಭಯಗಳಿಂದಾಗಿ ಜನರ ನೆಮ್ಮದಿ ಕದಡುತ್ತಿದ್ದು ಈ ರೋಗಗಳ ಚಿಕಿತ್ಸೆ, ಇವುಗಳು ವಿಸ್ತರಿಸದಂತೆ ತಡೆಯುವ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಮುತುವರ್ಜಿ ವಹಿಸುತ್ತಿರುವುದಾಗಿ ಹೇಳಿದೆ.
ಅಡಿಕೆ: ಕಳ್ಳರಿದ್ದಾರೆ ಎಚ್ಚರಿಕೆ!
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಕದಿಯಲು ಬಂದ ಕಳ್ಳರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಶಿರಸಿ-ಸಿದ್ಧಾಪುರದ ಕೆಲವೆಡೆ ಕಳ್ಳರು ಅಡಿಕೆ ಕದಿಯುವ ಹಿನ್ನೆಲೆಯಲ್ಲಿ ನಾನಾ ವೇಷಗಳಲ್ಲಿ ಹೊಂಚುಹಾಕುತಿದ್ದಾರೆ ಎನ್ನುವ ಗಾಳಿಸುದ್ದಿಗಳು ಕೇಳಿಬರುತ್ತಿವೆ.
ಕಳೆದ ವಾರ ಒಂದು ರಾತ್ರಿ ಅವರಗುಪ್ಪಾದಲ್ಲಿ (ಸಿದ್ಧಾಪುರ) ಅಡಿಕೆ ಸಂಗ್ರಹಿಸಿಟ್ಟಿದ್ದ ಮನೆಯ ಮುಂದೆ ಮಾರುತಿ ಒಮಿನಿಯಲ್ಲಿ ಬಂದಿದ್ದ ಜನರು ಹಾರ್ನ್ ಮಾಡಿ ಮನೆಯ ಜನರು ಬೆಳಕು ಹೊತ್ತಿಸುತ್ತಲೇ ಪರಾರಿಯಾದ ಘಟನೆ ನಡೆದಿದೆ.
ಇದೇ ರಾತ್ರಿ ಬಹುತೇಕ ಇದೇ ಸಮಯದಲ್ಲಿ ಇದೇ ಒಮಿನಿಯಲ್ಲಿ ಬಂದಿರಬಹುದಾದ ಕೆಲವು ಜನರು