ಸಿದ್ಧಾಪುರ ಹೊಸೂರು ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಬಂದ ಅನುದಾನವನ್ನು ಹಳೆ ಕೊಠಡಿಗಳ ದುರಸ್ಥಿಗೆ ಬಳಸಿಕೊಳ್ಳಲು ಅನುಮತಿ ನೀಡಲು ಜಿ.ಪಂ. ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡುವುದು ಮತ್ತು 5 ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕೋರಿ ಸಂಬಂಧಿಸಿದವರಿಗೆ ಪತ್ರ ಬರೆಯುವ ಮೂಲಕ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯ ಅನಿವಾರ್ಯತೆಗಳಿಗೆ ಸ್ಫಂದಿಸಲು ನಿರ್ಧರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕ ದಿವಾಕರ ಶೆಟ್ಟಿ ತಿಳಿಸಿದರು.
ಪ್ರಾಚ್ಯವಸ್ತು ಇಲಾಖೆಯ ನೀತಿ-ನಿಯಮಗಳಿಂದ ತೊಂದರೆಗೊಳಗಾಗಿರುವ ನಗರದ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳಿಯರು, ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮೀತಿಯ ಸಭೆಯ ನಂತರ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಹೊಸೂರು ಶಾಲೆಯಲ್ಲಿ ಸ್ಥಳಿಯರ ಕೋರಿಕೆಯ ಮೇಲೆ ಭೇಟಿನೀಡಿದ ಅಧಿಕಾರಿಗಳಿಗೆ ವಾಸ್ತವ ದರ್ಶನ ಮಾಡಿಸಿ, ಮಾತನಾಡಿದ ಪಿ.ಬಿ.ಹೊಸೂರು, ಮಂಜುನಾಥ ನಾಯ್ಕ, ಮಾರುತಿ ನಾಯ್ಕ ಜೊತೆಗಿದ್ದ ಸ್ಥಳಿಯರು ಕಳೆದ 7-8 ವರ್ಷಗಳಿಂದ ಶಾಲೆಯ ನಿರ್ವಹಣೆ,ಸಂರಚನೆಗೆ ಪ್ರಾಚ್ಯವಸ್ತು ಇಲಾಖೆಯ ನಿಯಮ ಅಡ್ಡಿಯಾಗಿದೆ.ಈ ನಿಯಮಗಳನುಸಾರ ಶಾಲೆಯ ಸ್ಥಳಾಂತರ, ಕಟ್ಟಡ ನಿರ್ಮಾಣ ಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.ಈ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಿ, ನಿರ್ಧಾರ ಪ್ರಕಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿರಸಿ ಜಿಲ್ಲೆಯ ಉಪನಿರ್ಧೇಶಕ ದಿವಾಕರ ಶೆಟ್ಟಿ ಹೊಸೂರು ಹಿ.ಪ್ರಾ.ಶಾಲೆಗೆ ಜಾಗ ಮಂಜೂರಿಗೆ ಪತ್ರ ಬರೆಯುವುದು, ಈಗಿರುವ ಕೊಠಡಿ ನಿರ್ಮಾಣದ ಹಣವನ್ನು ಹಳೆ ಕಟ್ಟಡದ ತಾತ್ಕಾಲಿಕ ದುರಸ್ಥಿಗೆ ಬಳಸುವುದು ಹಾಗೂ ಹೊಸ 5 ಕೊಠಡಿಗಳಿಗೆ ಅನುದಾನಕ್ಕಾಗಿ ಕೋರಿ ಸಂಬಂಧಿಸಿದವರಿಗೆ ಮನವಿ ಮಾಡುವ ಮೂಲಕ ಒಂದು ದಶಕದ ಈ ಶಾಲೆಯ ಸಮಸ್ಯೆಗೆ ಪರಿಹಾರ ದೊರಕಿಸುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುಮತಿ, ಮಂಜೂರಾತಿಗೆ ಮನವಿ ಮಾಡುವ ನಿರ್ಧಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಅದೇ ಬರಬೇಕಾಯಿತೆ…
ಬಂದೂಕು ಹಿಡಿದು
ಹೆದರಿಸುವ ಭೂ¥ರೆ…
ಬಾಂಬು ಕಟ್ಟಿಟ್ಟು
ಬೀಗುವ ಬಲಾಢ್ಯರೆ…
ದೊಡ್ಡಣ್ಣ ಸಣ್ಣಣ್ಣ
ಎಂಬ ವೀರರೆ…
ನಾವೇ ಶ್ರೇಷ್ಠರೆಂಬ
ದೇವ ದೂತರೆ
ಏನಿದೆಲ್ಲಾ…
👌👌👍