ಭವ್ಯಭಾರತ ಸಾಗುತ್ತಿರುವ ದಾರಿ ಭಯಹುಟ್ಟಿಸುತ್ತಿದೆಯೆ?

ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಮರಳಿದ್ದಾರೆ.
ಟ್ರಂಪ್ ಭಾರತ ಭೇಟಿ ಹಿನ್ನೆಲೆಯ ಉದ್ದೇಶಗಳಲ್ಲಿ ಅಮೇರಿಕಾದಲ್ಲಿರುವ ಭಾರತೀಯ ಮತದಾರರ ಓಲೈಕೆ ಹಾಗೂ ಯುದ್ಧಾಸ್ತ್ರಗಳು ಸೇರಿದಂತೆ ಅಮೇರಿಕಾಕ್ಕೆ ವ್ಯಾಪಾರಿ ಲಾಭ ಮಾಡುವ ಉದ್ಧೇಶ ಎನ್ನಲಾಗುತ್ತಿದೆ. ಭಾರತದಲ್ಲಿ ಮೋದಿ ನೇತೃತ್ವದಲ್ಲಿ ಎನ್.ಡಿ.ಎ. ಸರ್ಕಾರಗಳ ಆರಂಭ ಕಾಲದಿಂದಲೂ ಈ ಸರ್ಕಾರಗಳಿಗೆ ಬಂಡವಾಳಶಾಹಿ ಅಮೇರಿಕಾ ಮೇಲೆ ಪ್ರೀತಿ ಯಾಕೆಂದರೆ, ಭಾರತದಲ್ಲಿ ಮೋದಿ ಮತ್ತವರ ಪರಿವಾರ ಮಾಡುತ್ತಿರುವ ಉಳ್ಳವರ ಓಲೈಕೆಯ ಬಂಡವಾಳಶಾಹಿ, ಧಾರ್ಮಿಕ ರಾಷ್ಟ್ರೀಯತೆಯ ಕೋಮುವಾದಿ ಕಾರ್ಯಾಚರಣೆಗಳಿಗೂ ಟ್ರಂಪ್ ನೀತಿಗಳಿಗೂ ಸಾಮ್ಯತೆಗಳಿವೆ.
ಅಮೇರಿಕಾ ಬಹಿರಂಗವಾಗಿ ಭಾರತವನ್ನು ಓಲೈಸಿ, ಹಿಂದಿನಿಂದ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿರುವ ಅಂಶ ಬಹಿರಂಗ ಗುಟ್ಟು ಆದರೆ ಜನಸಾಮಾನ್ಯರ ವಿರೋಧಿ ಕಾರ್ಯಾಚರಣೆಯ ಮೋದಿ ಮತ್ತು ಟ್ರಂಪ್ ಚಲನೆಗಳ ಹಿಂದೆ ಅಭಿವೃದ್ಧಿ-ಸಂಬಂಧಗಳ ಸುಧಾರಣೆಯ ನೆಪದ ಆಂತರಿಕ ಸಮಾನ ಹಿತಾಸಕ್ತಿಗಳ ಕಾರಣಎಂಬುದನ್ನು ಭಾರತೀಯರು ಮರೆಯಬಾರದು.
ಟ್ರಂಪ್ ಭೇಟಿಯ ನಂತರ ದೆಹಲಿಯ ಇಶಾನ್ಯ ಭಾಗದಲ್ಲಿ ಕೋಮುಗಲಭೆಗಳಾಗಿವೆ. ಇದರಲ್ಲಿ ಜೀವತೆತ್ತವರ ಸಂಖ್ಯೆ 50 ರ ಹತ್ತಿರ. ರಾಷ್ಟ್ರದ ರಾಜಧಾನಿಗೆ ನಯವಾಗಿ ವಂಚಿಸುವ ಮತೀಯವಾದಿಗಳು, ಅವರನ್ನು ಎದುರಿಸಲಾಗದ ಮೃಧು ಹಿಂದುತ್ವವಾದಿಗಳು ಅಧಿಕಾರದ ಗದ್ದುಗೆ ಏರಲಿಲ್ಲದ ಖುಷಿಯ ನಂತರ ಪ್ರಾರಂಭವಾಗಿರುವ ಕೋಮುಗಲಭೆ ಕೇಂದ್ರದ ಆಡಳಿತ ಪಕ್ಷದ ಮತ್ತವರ ಪರಿವಾರದ ಸೃಷ್ಟಿ ಎನ್ನುವುದಕ್ಕೆ ಬಿ.ಜೆ.ಪಿ. ಮುಖಂಡರು ನೀಡಿರುವ ಹೇಳಿಕೆಗಳು,ಅವರ ಪರಿವಾರ ನೇರವಾಗಿ ಹಲ್ಲೆಯಲ್ಲಿ ಪಾಲ್ಗೊಂಡಿರುವ ಸಾಕ್ಷಿಗಳೇ ದಾಖಲೆ.
ಮತೀಯವಾದಿಗಳು ಜನರನ್ನು ದಿಕ್ಕುತಪ್ಪಿಸುವುದು, ಖರೀದಿಸುವುದು ನಂತರ ಹಿಂಸೆಯ ಮೂಲಕ ಹೆದರಿಸುವ ತಮ್ಮ ಕುಟಿಲನೀತಿಗಳನ್ನು ದೆಹಲಿಯಲ್ಲಿ ಜಾರಿ ಮಾಡುತ್ತಿರುವ ಬಗ್ಗೆ ಅವರ ಪರಿವಾರದವರೇ ಒಪ್ಪಿಕೊಂಡಿರುವ ಸತ್ಯ ಸಾಕ್ಷಿ.
ದೆಹಲಿಯಿಂದ ಪ್ರಾರಂಭವಾಗಿ ದೇಶದಾದ್ಯಂತ ರಾಷ್ಟ್ರೀಯವಾದ, ದೇಶಭಕ್ತಿ ಹೆಸರಲ್ಲಿ ಯಾರು ಕಾನೂನನ್ನು ಕೈಗೆತ್ತಿಕೊಂಡು ಶಾಂತಿ-ಸುವ್ಯವಸ್ಥೆ ಹಾಳು ಮಾಡುತಿದ್ದಾರೆ ಎನ್ನುವುದಕ್ಕೆ ಸಾಕ್ಷಿಗಳೆಂದರೆ….. ಅಂಗೈ ಹುಣ್ಣಿಗೆ ಕನ್ನಡಿ ಕೇಳಿದಂತೆ.
ಇದರ ಹಿಂದೆ ಲಾಭಕೋರ ಪರಿವಾರದ ನಯವಂಚನೆಯ ಅಧಿಕಾರ ಚಪಲದ ಕಾರ್ಯಸೂಚಿ,ಕಾರ್ಯಾಚರಣೆಗಳು ಕಾರಣ ಎನ್ನುವುದಕ್ಕೆ ಅವರಿಂದ ನಿರ್ಧೇಶಿತವಾದ ಕೇಂದ್ರ ಸರ್ಕಾರ ಮಾಡುತ್ತಿರುವ ಜನವಿರೋಧಿ ಕಾನೂನು, ಜನವಿರೋಧಿ ಕಾರ್ಯಕ್ರಮಗಳೇ ಸಾಕ್ಷಿ.
ಈ ಸರ್ಕಾರ ಜಾರಿಮಾಡುತ್ತಿರುವ ಕಾನೂನಿನ ಹಿಂದೆ ಜನರ ಪ್ರತಿರೋಧ, ಆಡಳಿತ ವಿರೋಧಿ ಅಭಿಮತ ಮರೆಮಾಚುವ ಹುನ್ನಾರಗಳನ್ನು ಅಲ್ಲಗಳೆಯುವಂತಿಲ್ಲ. ಎರಡು ಅವಧಿಗಳ ಎನ್.ಡಿ.ಎ. ಆಡಳಿತದಲ್ಲಿ ಭಾರತದ ಆರ್ಥಿಕತೆ, ಆಂತರಿಕ ಉತ್ಫನ್ನ ಸುಧಾರಿಸಿದ ಕುರುಹುಗಳಿಲ್ಲ. ಅವ್ಯವಸ್ಥೆ, ಗಲಭೆ ಶ್ರೀಮಂತರ ಓಲೈಕೆಯಿಂದ ಸಾರ್ವಜನಿಕ ಜನಜೀವನ ಮತ್ತಷ್ಟು ದುರ್ಬರವಾಗಿ ಮಾಡಿರುವ ಹಿಂದೆ ಪ್ರಧಾನಿ ಮೋದಿ ಮತ್ತವರ ಸರ್ಕಾರಗಳ ವಿಫಲತೆ ಕಣ್ಣಿಗೆ ರಾಚುವಂತಿದೆ.
ಈ ಸಂದಿಗ್ಧ ಸ್ಥಿತಿಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಆಡಳಿತ ಸರ್ಕಾರದ ವಿರುದ್ಧ ಜನಸಾಮಾನ್ಯರ ಪರವಾಗಿ ಕೆಲಸಮಾಡುವ ಧೈರ್ಯ ತೋರುತ್ತಿಲ್ಲ. ಇಂಥ ಪ್ರತಿರೋಧವಿರಬಾರದೆನ್ನುವ ಕಾರಣಕ್ಕೇ ಮೋದಿ ನಿಯಂತ್ರಿಸುವ ಪರಿವಾರ ಉಪಾಯದಿಂದ ದೇಶದ ಜಾತ್ಯಾತೀತ, ಪ್ರಾದೇಶಿಕ ಶಕ್ತಿಗಳು, ವ್ಯಕ್ತಿಗಳು, ಪಕ್ಷಗಳನ್ನು ನಿರ್ನಾಮ ಮಾಡುತ್ತಿದೆ. ಇದರ ಹಿಂದಿರುವ ಸಂಘದ ಪಿತೂರಿಯ ಭಾಗವಾಗೇ ಶ್ರೀಮಂತ ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಇಲ್ಲಿಯ ವ್ಯವಸ್ಥೆಗಳನ್ನು ಹೊಗಳುತ್ತಾರೆ.
ಮುಂದಿನ ಸರದಿ ಮೋದಿ ಅಮೇರಿಕಾಕ್ಕೆ ತೆರಳಿ ಅಲ್ಲಿಂದ ತಮ್ಮ ಸಂಘದ ಶ್ರೀಮಂತರು, ಪಟ್ಟಭದ್ರರ ಉಳ್ಳವರ ಓಲೈಕೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಇಮೇಜ್ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡುವುದು. ಈ ಕುಟಿಲ ತಂತ್ರಗಳಿಗೆ ಹಿನ್ನೆಲೆಯಾಗಿ ಜನತಂತ್ರ ನಿಯಂತ್ರಿಸುವ ಪಟ್ಟಭದ್ರರ ಸಂಘ ಹಿಂದೆ ಇಟಲಿ,ಅಮೇರಿಕಾ ಸೇರಿದಂತೆ ಕೆಲವು ಶ್ರೀಮಂತರಾಷ್ಟ್ರಗಳ ನೆರವು-ಸಹಾಯ ಪಡೆದ ಹಿನ್ನೆಲೆ ಇದೆ.
ಭಾರತದಲ್ಲಿ ಇಡೀ ವ್ಯವಸ್ಥೆಯನ್ನು ಪಟ್ಟಭದ್ರಸಂಘದ ಕಪಿಮುಷ್ಟಿಗೆ ಒಪ್ಪಿಸಿದರೆ ಅವರು ತಮ್ಮ ಕಾರ್ಯಸೂಚಿಯಂತೆ ಅಮೇರಿಕಾ ಪ್ರೇರಿತ ಶ್ರೀಮಂತರ ಪರವಾಗಿನ ವ್ಯವಸ್ಥೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಾರೆ. ಇಂಥ ಷಡ್ಯಂತ್ರ-ಕುಟಿಲ ಉಪಾಯಗಳ ಹಿನ್ನೆಲೆಯಲ್ಲಿ ಟ್ರಂಪ್ ಓಲೈಕೆ, ಮುಸ್ಲಿಂದ್ವೇಶ, ರಾಜಧಾನಿ ಸೇರಿದಂತೆ ತಮ್ಮ ಮಿತಿಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ಸಂಘ ಕೈಜೋಡಿಸಿದೆ.
ಇದರ ಇನ್ನೊಂದು ಮುಖವೆಂದರೆ… ಪಾಕಿಸ್ತಾನಕ್ಕೆ ಜೈ ಎನ್ನುವ ವ್ಯಕ್ತಿಗಳನ್ನು ವಿರೋಧಿಸುತ್ತಾ ದೇಶದ ರಕ್ಷಣಾ ಪಡೆಯಿಂದಲೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ಅಧಿಕಾರಿಗಳು,ದೇಶದ್ರೋಹಿಗಳನ್ನು ರಕ್ಷಿಸುವುದು. ಪಾಕಿಸ್ಥಾನದ ಪರ ಘೋಷಣೆ ಕೂಗುವವರು ಪಾಕಿಸ್ಥಾನಕ್ಕೆ ಮಾಹಿತಿ ನೀಡಿ ದೇಶದ ರಹಸ್ಯ ರವಾನಿಸುವವರಿಗಿಂತ ಕೆಟ್ಟವರು, ದುಷ್ಟರು, ದ್ರೋಹಿಗಳಾಗಿ ಕಾಣುವುದು ಸಂಘದ ಮತಾಂಧತೆಯ ಮನಸ್ಥಿತಿ. ಕೋಮುವಾದಿಗಳು, ಉಳ್ಳವರ ಪರವಾಗಿರುವವರ ಸಂಘ- ಪರಿವಾರಗಳಿಗೆ ದೇಶದ ಗಡಿ ಮಹತ್ವದೆನ್ನಿಸುತ್ತದೆಯೇ ಹೊರತು ದೇಶವಾಸಿ, ಬಹುಸಂಖ್ಯಾತ ಜನಸಾಮಾನ್ಯರು ಪ್ರಮುಖರಾಗಿ ಕಾಣುವುದೇ ಇಲ್ಲ.
ಈ ಮನಸ್ಥಿತಿ ಶ್ರೀಮಂತ ದೇಶದ ಟ್ರಂಪ್ ನನ್ನು ಓಲೈಸುತ್ತಲೇ ದೆಹಲಿಯಲ್ಲಿ ಬೆಂಕಿ ಹೊತ್ತಿಸುತ್ತದೆ. ದೇಶದ ಆದಾಯ, ವರಮಾನವನ್ನು ಕಬಳಿಸುತ್ತದೆ. ಈ ತಪ್ಪುಗಳ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ವಾಸ್ತವದ ಹಿಂದೆ ಜನವಿರೋಧಿ ಆಡಳಿತ, ಜನವಿರೋಧಿ ಅಭಿರುಚಿ ರಕ್ಷಿಸಿಕೊಳ್ಳುವ ಉಳ್ಳವರ ಹಿತ ಅಡಗಿರುತ್ತದೆ.
ಈ ವ್ಯವಸ್ಥೆ ಪೋಶಿಸಿ ಹೊಡೆತ ತಿನ್ನುತ್ತಿರುವ ಭಾರತೀಯ ಈ ಕುಟಿಲಪರಿವಾರದ ವಿರುದ್ಧ ಸಂಘಟಿತರಾಗುತ್ತಿರುವುದು ಒಳ್ಳೆಯ ಲಕ್ಷಣ. ದೇಶ ಪ್ರಕಾಶಿಸಲಿಲ್ಲ, ಉತ್ತಮ ದಿನಗಳು ಬರಲಿಲ್ಲ, ಭಾರತೀಯರ ಸ್ಥಿತಿ-ಗತಿ ಸುಧಾರಿಸಿಲ್ಲ. ಈ ಅವ್ಯವಸ್ಥೆಗಳ ಹಿಂದೆ ಕಟ್ಟರ್ ಮತೀಯವಾದಿಗಳು ಹಾಗೂ ಈ ವ್ಯವಸ್ಥೆ ಪೋಶಿಸುವ ಮೃಧು ಮತಾಂಧರ ಕೊಡುಗೆಗಳೂ ಇವೆ. ಇವುಗಳನ್ನು ಅರ್ಥಮಾಡಿಕೊಳ್ಳಲು ಬಹಳ ದಿನ, ದೂರ ಕಾಯುವ ಅಗತ್ಯವಿಲ್ಲ ಎನ್ನುವುದೊಂದೇ ಶುಭಸೂಚನೆ.

ಹೊಸೂರುಶಾಲೆಯ ಗೃಹಣಕ್ಕೆ ಶೆಟ್ಟರ ತಾತ್ಕಾಲಿಕ ಪರಿಹಾರದ ಅಭಯ
ಸಿದ್ಧಾಪುರ ಹೊಸೂರು ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಬಂದ ಅನುದಾನವನ್ನು ಹಳೆ ಕೊಠಡಿಗಳ ದುರಸ್ಥಿಗೆ ಬಳಸಿಕೊಳ್ಳಲು ಅನುಮತಿ ನೀಡಲು ಜಿ.ಪಂ. ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡುವುದು ಮತ್ತು 5 ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕೋರಿ ಸಂಬಂಧಿಸಿದವರಿಗೆ ಪತ್ರ ಬರೆಯುವ ಮೂಲಕ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯ ಅನಿವಾರ್ಯತೆಗಳಿಗೆ ಸ್ಫಂದಿಸಲು ನಿರ್ಧರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕ ದಿವಾಕರ ಶೆಟ್ಟಿ ತಿಳಿಸಿದರು.
ಪ್ರಾಚ್ಯವಸ್ತು ಇಲಾಖೆಯ ನೀತಿ-ನಿಯಮಗಳಿಂದ ತೊಂದರೆಗೊಳಗಾಗಿರುವ ನಗರದ ಹೊಸೂರು ಹಿರಿಯ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *