

ನಿರೀಕ್ಷೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ನೇಮಕವಾಗಿದ್ದಾರೆ. ಎ.ಆಯ್.ಸಿ.ಸಿ. ಪರವಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನೇಮಕದ ಆದೇಶ ಬಿಡುಗಡೆಮಾಡಿದ್ದು,ಕಾರ್ಯಾಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ ಮತ್ತು ಸತೀಶ್ ಜಾರಕಿಹೊಳೆ ಹಾಗೂ ಸಲೀಂ ಅಹಮ್ಮದ್ ರನ್ನು ನೇಮಿಸಲಾಗಿದೆ.
ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದುವರಿದಿದ್ದಾರೆ. ಎಂ ನಾರಾಯಣಸ್ವಾಮಿ ವಿಧಾನಪರಿಷತ್ ನಾಯಕರಾಗಿದ್ದು ಅಜಯ್‍ಸಿಂಗ್ ರನ್ನು ವಿಧಾನಸಭಾ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯ ಮೂಲಕ ರಾಜ್ಯದ ಕಾಂಗ್ರೆಸ್‍ನಲ್ಲಿ ನೆನಗುದಿಗೆ ಬಿದ್ದಿದ್ದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಮುಗಿದಂತಾಗಿದೆ.
ಕರ್ನಾಟಕ ರಾಷ್ಟ್ರ ಸಮೀತಿ ರವಿಕೃಷ್ಣ ರೆಡ್ಡಿಯವರೊಂದಿಗೆ
ಮೂಖಾಮುಖಿ- ಜನ ಇನ್ನೂ ಸಮಾಜಮುಖಿಯಾಗಿ ಯೋಚಿಸುತ್ತಿಲ್ಲ,
ಗೆಲ್ಲುತ್ತೇವೆ ಒಂದುದಿನ ಗೆಲ್ಲಲೇಬೇಕು ಒಳ್ಳೆತನ
ಕರ್ನಾಟಕ ರಾಷ್ಟ್ರ ಸಮೀತಿಯ(ಪಕ್ಷ) ರವಿಕೃಷ್ಣ ರೆಡ್ಡಿ ಕನಸುಗಾರ, 2008 ರಲ್ಲಿ ವಿದೇಶದಿಂದ ಭಾರತಕ್ಕೆ ಬಂದು ಸಮಾಜಮುಖಿಯಾದ ವಾತಾವರಣಕ್ಕೆ ಅಂಥ ಮನೋಭಾವದ ಮಾಧ್ಯಮ,ಪಕ್ಷ, ಆಡಳಿತ, ರಾಜ್ಯ ಬೇಕು ಎಂದು ಕನಸಿದವರು. ಅವರು ಹೊರತರುತ್ತಿದ್ದ ವಿಕ್ರಾಂತ ಕರ್ನಾಟಕ ಕನ್ನಡ ಸಾಪ್ತಾಹಿಕ ಲೋಕದ ವಿಶಿಷ್ಟ ಪ್ರಯೋಗ. ಈ ವಿಕ್ರಾಂತ ಕರ್ನಾಟಕ ಮುಂದುವರಿಸಲಾಗದ ಬಿಕ್ಕಟ್ಟಿಗೆ ಸಿಲುಕಿದ ರವಿಕೃಷ್ಣ ರೆಡ್ಡಿ ರಾಜಕೀಯದಿಂದ ಸಮಾಜಪರಿವರ್ತನೆಯ ಕನಸು ಕಂಡವರು.
ಸಮಾಜಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠರೊಂದಿಗೆ ಸಮಸಮಾಜ, ಸಮಾಜಮುಖಿ ಚಿಂತನೆಯ ಆಶಾವಾದದೊಂದಿಗೆ ಕರ್ನಾಟಕ ರಾಷ್ಟ್ರ ಸಮೀತಿ ಕಟ್ಟಿದ್ದಾರೆ. ಕರ್ನಾಟಕ ರಾಷ್ಟ್ರ ಸಮೀತಿ ಹಣ-ಹೆಂಡ,ಮನಿ.ಮಸಲ್‍ಪವರ್ ಗಳನ್ನು ಮೀರಿದ ಸುಧಾರಣಾವಾದಿ ರಾಜಕೀಯದ ಪ್ರಯೋಗ.
ಕರ್ನಾಟಕ ರಾಷ್ಟ್ರ ಸಮೀತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಕಳೆದ ವಾರ ಸಮಾಜಮುಖಿ ಗೆ ಮುಖಾಮುಖಿಯಾದರು ಅವರೊಂದಿಗಿನ ಚುಟುಕು ಸಂದರ್ಶನ ಹೀಗಿದೆ- ಸಮಾಜಮುಖಿ- ಈ ಪ್ರಯೋಗ ಸಾಧ್ಯವೆ?
ರವಿಕೃಷ್ಣರೆಡ್ಡಿ- ನಮ್ಮ ಗುಣ,ಆಶಾವಾದ, ಅಪೇಕ್ಷೆ ವರವೂ ಆಗಬಹುದು, ಶಾಪವೂ ಆಗಬಹುದು. ರಾಜಕೀಯ, ರಾಜಕೀಯ ಬದುಕು ತೀರಾ ಕೆಟ್ಟ ಸಂದರ್ಭದಲ್ಲಿ ನಾವು ಮಾಡುತ್ತಿರುವ ಪ್ರಯೋಗ ಅಪ್ರಾಯೋಗಿಕ ಎನಿಸಬಹುದು……….


