

(ಸಿದ್ದಾಪುರ,ಮಾ.13-) ಜನರು ಪ್ರಯಾಣಿಸುತಿದ್ದ ರಿಕ್ಷಾ ಒಂದಕ್ಕೆ ಎದುರಿನಿಂದ ಬಂದ ದನ ತಪ್ಪಿಸಲು ಪ್ರಯತ್ನಿಸಿದ ರಿಕ್ಷಾ ಪಲ್ಟಿಯಾಗಿ ಇದರಲ್ಲಿ ಪ್ರಯಾಣಿಸುತಿದ್ದ 8ಜನರಲ್ಲಿ ಒಬ್ಬರು ಮೃತರಾಗಿ 7 ಜನರಿಗೆ ಗಾಯಗಳಾದ ದುರ್ಘಟನೆ ಇಂದು ಇಲ್ಲಿಯ ಜೋಗರಸ್ತೆಯ ಕುಂಬಾರಕುಳಿ ಬಳಿ ನಡೆದಿದೆ.
ಇಂದು ಮಧ್ಯಾಹ್ನ ರಿಕ್ಷಾ ಚಾಲಕ ತನ್ನ ರಿಕ್ಷಾದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಿದ್ದಾಪುರದಿಂದ ಮಾವಿನಗುಂಡಿ ಕಡೆಗೆ ತೆರಳುತಿದ್ದ. ಕುಂಬಾರಕುಳಿ ಬಳಿ ರಸ್ತೆಗೆ ಅಡ್ಡವಾಗಿ ಬಂದ ಆಕಳನ್ನು ತಪ್ಪಿಸಲು ಪ್ರಯತ್ನಿಸಿದಾಗ ವೇಗ ನಿಯಂತ್ರಿಸಲಾಗದೆ ರಿಕ್ಷಾ ಪಲ್ಟಿಯಾಯಿತು.
ಈ ರಿಕ್ಷಾದಲ್ಲಿದ್ದ ಚಾಲಕ ನರಸಿಂಹ ಸೇರಿದಂತೆ 9 ಜನರಲ್ಲಿ ಒಬ್ಬರು ರಸ್ತೆ (ಸ್ಥಳ)ಯಲ್ಲೇ ಸಾವನ್ನಪ್ಪಿದ್ದರು. ಮೃತರನ್ನು ಹಲಗೇರಿಯ ರಾಮಚಂದ್ರ ಮಹಾಬಲೇಶ್ವರ ಹೆಗಡೆ ಎಂದು ಗುರುತಿಸಲಾಗಿದೆ. ಉಳಿದ7 ಜನ ಸಹಪ್ರಯಾಣಿಕರಾದ ಮೆಣಸಿಯ ಗಣಪತಿ ನಾಯ್ಕ, ಕಿಲಾರದ ಸುಶೀಲಾ ರವೀಂದ್ರ ನಾಯ್ಕ, ಚಿಂತನ್ ರವೀಂದ್ರ ನಾಯ್ಕ ಕಿಲಾರ, ವೆಂಕಟ್ರಮಣ ಶಂಕರ್ ನಾಯ್ಕ ಮೆಣಸಿ, ಗೌರಿ ಬಂಗಾರ್ಯ ಚೆನ್ನಯ್ಯ ಹುಸೂರು ಸುಜಾತಾ ಬಂಗಾರ್ಯ ಚೆನ್ನಯ್ಯ ಹುಸೂರು ಮತ್ತು ಗಣಪತಿ ಹುಲಿಯಾ ನಾಯ್ಕ ಸುಂಕತ್ತಿ ಎಂದು ಗುರುತಿಸಲಾಗಿದೆ. ಆರೋಪಿ ಪೇಶಂಜರ್ ರಿಕ್ಷಾ ಚಾಲಕ ನರಸಿಂಹ ಮಡಿವಾಳ ಕಡಕೇರಿ ಪರಾರಿಯಾಗಿದ್ದಾನೆ. ಗಾಯಗೊಂಡ ಎಲ್ಲರೂ ಸ್ಥಳಿಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.


Many thanks really practical. Will certainly share website with my friends.