

ಹಲವು ಸುತ್ತಿನ ಕಸರತ್ತಿನ ನಂತರ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅಂತೂ ಇಂತೂ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದಾರೆ.
ಡಿ.ಕೆ.ಶಿ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಲು ವಿರೋಧಿಸಿದ್ದರು ಎನ್ನಲಾದ ಕೆಲವು ಮುಖಂಡರ ಒಪ್ಪಿಗೆ ಇಲ್ಲದೆ ಶಿವಕುಮಾರ ಮತ್ತು ಸಿದ್ಧರಾಮಯ್ಯ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಡಿ.ಕೆ.ಶಿವಕುಮಾರ ಸಮರ್ಥ ಮತ್ತು ವಿರೋಧಿಗಳಿಂದ ಗಾಯಗೊಂಡಿರುವ ನಾಯಕ.
ಶಿವಕುಮಾರರ ವೈಯಕ್ತಿಕ, ಸಾಮೂದಾಯಿಕ, ಇತರ ಶಕ್ತಿಗಳೆದುರು ಉಳಿದವರು ಉಳಿಯುವುದು ಕಷ್ಟ. ಇಂಥ ಡಿ.ಕೆ.ಶಿ. ಕೆ.ಪಿ.ಸಿ.ಸಿ. ಪಟ್ಟ ಏರುತ್ತಲೇ ರಾಜ್ಯ ರಾಜಕೀಯದಲ್ಲಿ ಅನೇಕ ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಿವೆ. ಡಿ.ಕೆ.ಶಿವಕುಮಾರ ಬಿ.ಜೆ.ಪಿ., ಜೆ.ಡಿ.ಎಸ್. ನ ಕೆಲವು ಶಾಸಕರು, ಮಾಜಿಶಾಸಕರೊಂದಿಗೆ ನಿಕಟ ಸಂಪರ್ಕದಲ್ಲಿರುವುದು ಗುಟ್ಟಿನ ವಿಷಯವೇನಲ್ಲ.
ಈಗಿನ ಮಾಹಿತಿ ಪ್ರಕಾರ ಡಿ.ಕೆ.ಶಿ. ಬಿ.ಜೆ.ಪಿ., ಜೆ.ಡಿ.ಎಸ್. ನ ಒಂದು ಡಜನ್ ಮಾಜಿ ಮತ್ತು ಹಾಲಿ ಶಾಸಕರಿಗೆ ಗಾಳ ಹಾಕಿದ್ದು ಅವರಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ, ಸಿ.ಬಿ.ಸುರೇಶ್,ಬೆಮಲ್ ಕಾಂತರಾಜ್, ರಮೇಶ್‍ಬಾಬು, ಮಧುಬಂಗಾರಪ್ಪ ಸೇರಿದ್ದಾರೆ ಎನ್ನಲಾಗುತ್ತಿದೆ.
ಊಹೆಗಳ ಪ್ರಕಾರ ಸಿ.ಬಿ.ಐ. ನಿಂದ ಡಿ.ಕೆ.ಶಿ. ಕೆಣಕಿರುವ ಬಿ.ಜೆ.ಪಿ. ಮತ್ತು ರಾಜ್ಯದ ಪರ್ಯಾಯ ಪಕ್ಷವಾಗಿರುವ ಜೆ.ಡಿ.ಎಸ್. ನಾಯಕರ ಮೇಲೆ ಡಿಕೆಶಿ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಠಿಕೊಡುವಂತೆ ಇತ್ತ ಡಿ.ಕೆ.ಶಿ. ಕೆ.ಪಿ.ಸಿ.ಸಿ. ಅಧ್ಯಕ್ಷರಾಗುತ್ತಲೇ ಅತ್ತ ಮಧುಬಂಗಾರಪ್ಪ, ಎಸ್.ಆರ್. ಶ್ರೀನಿವಾಸ ರ ಜೊತೆಗೆ ಕೆಲವರು ಇದೇವಾರ ಬೆಂಗಳೂರಿನಲ್ಲಿ ಆಪ್ತರ ಸಭೆ ಆಯೋಜಿಸಿರುವ ಸುದ್ದಿ ಮಾರ್ದನಿಸಿದೆ. ಡಿ.ಕೆ.ಶಿ. ಮತ್ತು ಸಿದ್ಧರಾಮಯ್ಯ ಸೇರಿ ದಿ.ಎಸ್.ಬಂಗಾರಪ್ಪನವರ ಶಿಷ್ಯಂದಿರು ಮತ್ತು ಮೂಲ ಜನತಾದಳದ ಕೆಲವು ನಾಯಕರನ್ನು ಸಂಪರ್ಕಿಸಲು ಯೋಜಿಸಿದ್ದು ಈ ಯೋಚನೆ ಕಾರ್ಯಾರೂಪಕ್ಕೆ ಬಂದರೆ ಕೆಲವು ಬಿ.ಜೆ.ಪಿ.ನಾಯಕರು ಮತ್ತು ಜೆ.ಡಿ.ಎಸ್. ಪ್ರಮುಖರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಡಿ.ಕೆ.ಶಿವಕುಮಾರ ಜೊತೆ ಉತ್ತಮ ಸಂಬಂಧ ಹೊಂದಿರುವ ಕೆಲವು ಕಾಂಗ್ರೆಸ್ ನಾಯಕರು, ಇತರ ಪಕ್ಷಗಳ ಮುಖಂಡರು ಡಿ.ಕೆ.ಶಿ. ಮತ್ತು ಸಿದ್ಧರಾಮಯ್ಯನವರ ಕೈ ಬಲಪಡಿಸಿ ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಯತ್ನಿಸಲಿದ್ದಾರೆ ಎನ್ನಲಾಗುತ್ತಿದೆ.
ಬಿ.ಜೆ.ಪಿ.ಯ ಕೆಲವು ಅಸಂತುಷ್ಟರು ಕೂಡಾ ಕಾಂಗ್ರೆಸ್ ಬಲಪಡಿಸುವ ಹಿನ್ನೆಲೆಯಲ್ಲಿ ಸಹಕರಿಸಲು ಸಿದ್ಧರಿರುವುದಾಗಿ ತಿಳಿಸಿದ್ದು ಡಿ.ಕೆ.ಶಿ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ನಂತರ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಉಂಟಾಗಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ನಡುವೆ ಮಾಮು ಕುಮಾರಸ್ವಾಮಿ ಜಾದಳದ ಬಲವರ್ಧನೆಗೆ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಮೊರೆಹೋಗಿದ್ದು ಒಕ್ಕಲಿಗರ ಮೇಲಾಟ, ಲಿಂಗಾಯತರ ಒಳಜಗಳದಲ್ಲಿ ಮಾಮು ಕುಮಾರಸ್ವಾಮಿ ಮತ್ತು ಮಾಮು ಸಿದ್ಧರಾಮಯ್ಯ ಸೈಲೆಂಟಾಗಿ ವ್ಯವಹರಿಸುತ್ತಿರುವುದರಿಂದ ಡಿ.ಕೆ.ಶಿ. ಕೂಡಾ ನಿಧಾನವಾಗಿ ಹೆಜ್ಜೆಹಾಕಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.


ಕರಾವಳಿ ಸಂಚಲನ- ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದರೆ ಮಲೆನಾಡು, ಕರಾವಳಿಯಲ್ಲಿ ಜೆ.ಡಿ.ಎಸ್.ಬರಿದಾಗುವ ಸಾಧ್ಯತೆ ಇದೆ. ಉತ್ತರಕನ್ನಡ,ದಕ್ಷಿಣಕನ್ನಡ ಸೇರಿದಂತೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಭಾಗದ ಕೆಲವು ಬಂಗಾರಪ್ಪ ಅಭಿಮಾನಿಗಳು ಮಧುಬಂಗಾರಪ್ಪ ಜೊತೆ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗುತ್ತಿದೆ.
ಕಾರವಾರ ಮಾಜಾಳಿಯಲ್ಲಿ ನೀಲಿಸಮುದ್ರ!
ಪಾಚಿಗಳು ಸೃಷ್ಟಿಸುವ ನೀಲಿ
ಬೆಳಕಿನಿಂದ ನೀಲಿಯಾದ ಕಡಲು
ಕಾರವಾರ ಮಾಜಾಳಿ ಕಡಲ ತೀರದಲ್ಲಿ ರಾತ್ರಿ ವೇಳೆ ಸಮುದ್ರ ನೀಲಿಬಣ್ಣಕ್ಕೆ ತಿರುಗುತಿದ್ದು ಸ್ಥಳಿಯರ ಕುತೂಹಲಕ್ಕೆ ಕಾರಣವಾಗಿದೆ. ಸಮುದ್ರದ ನೀರು ಹಗಲು ಮತ್ತು ರಾತ್ರಿವೇಳೆ ತಿಳಿನೀಲಿಯಾಗಿ ಕಾಣುವುದು ಸಾಮಾನ್ಯ. ಆದರೆ ಮಿಂಚುಹುಳು ಸೃಷ್ಟಿಸುವ ನೀಲಿ ಬೆಳಕಿನಂಥ ಬಣ್ಣ ಸಮುದ್ರದಲ್ಲಿ ಕಾಣುವುದರಿಂದ ಸಹಜವಾಗಿ ಕುತೂಹಲ ಹೆಚ್ಚಿದೆ. ಹೀಗೆ ನೀಲಿಬಾನಿನ ರೀತಿ ರಾತ್ರಿಯಲ್ಲಿ ನೀಲಿಕಡಲಾಗಲು ಪಾಚಿಗಳು ಕಾರಣ ಎನ್ನಲಾಗುತ್ತಿದೆ.
