ಹೀಗೆಂದು ಟ್ವೀಟ್ ಮಾಡುವ ಮೂಲಕ ನಟ ಧನಂಜಯ್ ಚಕ್ರವರ್ತಿ ಸೂಲಿಬೆಲೆಯವರಿಗೆ ಟಕ್ಕರ್ ನೀಡಿದ್ದಾರೆ. ಇಂದು ಕರೋನಾ ಬಗ್ಗೆ ನಂಜಿನ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ ಇಟಲಿಯಲ್ಲಿ ಜನ ಸಾಯುತ್ತಿರುವ ಬಗ್ಗೆ ಏಸು ಕ್ರಿಸ್ತರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರೀಯೆ ನೀಡಿದ ನಟ ಧನಂಜಯ್ ಚುಟುಕಾಗಿ ‘ಮೊದಲು ಮಾನವನಾಗು’ ಎಂದು ಟ್ವೀಟ್ ಮಾಡಿದ್ದಾರೆ.
ಕೋಮುವಾದಿಗಳ ಪರ ವಕಾಲತ್ತು ವಹಿಸುತ್ತಾ, ಉಳ್ಳವರು, ಅಧಿಕಾರಸ್ಥರ ಭಟ್ಟಂಗಿತನ ಮಾಡುವ ಚಕ್ರವರ್ತಿ ಸೂಲಿಬೆಲೆಗೆ ಟಕ್ಕರ್ ನೀಡಿರುವ ಧನಂಜಯ್‌ರ ಪ್ರತಿಕ್ರೀಯೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಧರ್ಮಾಂಧರ ಪರ, ಧರ್ಮಾಂಧ ಸಂಘಟನೆಗಳ ಪರ ವಕಾಲತ್ತು ವಹಿಸುವ ಸೂಲಿಬೆಲೆ ನಡವಳಿಕೆ ಬಗ್ಗೆ ಟೀಕಿಸಿರುವ ಬಹುಸಂಖ್ಯಾತರು ಧನಂಜಯ್,ಸೂಲಿಬೆಲೆ ಚಕ್ರವರ್ತಿಯ ಸುಳ್ಳು, ನಾಟಕ, ಸೋಗಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಪ್ರಶಂಸಿದ್ದಾರೆ.