
ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ರಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ನಾಮನಿರ್ದೇಶನದ ಬಗ್ಗೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ಗೋಗೊಯ್ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆ ಅವರು ನ್ಯಾಯಮೂರ್ತಿಗಳಾಗಿದ್ದಾಗ ಮೋದಿ ಸರ್ಕಾರಕ್ಕೆ ಮಾಡಿದ ಸಹಾಯಗಳಿಗೆ ಇದು ಪ್ರತಿಫಲ ಎಂಬರ್ಥದಲ್ಲಿ ಜನರು ಟೀಕೆಗಳನ್ನು ಮಾಡಿದ್ದರು.
“ಬಹುಶಃ ನಾಳೆ ದೆಹಲಿಗೆ ಹೋಗುತ್ತೇನೆ. ಮೊದಲು ಪ್ರಮಾಣವಚನ ಸ್ವೀಕರಿಸುತ್ತೇನೆ, ನಂತರ ನಾನು ಇದನ್ನು ಏಕೆ ಒಪ್ಪಿಕೊಂಡೆ ಎಂದು ಮಾಧ್ಯಮಗಳೊಂದಿಗೆ ವಿವರವಾಗಿ ಮಾತನಾಡುತ್ತೇನೆ …” ಎಂದು ರಂಜನ್ ಗೊಗೊಯ್ ಅಸ್ಸಾಂನ ಗುವಾಹಟಿಯಲ್ಲಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸುಮಾರು ೧೩ ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ಗೊಗೊಯ್ ಕಳೆದ ವರ್ಷ ನವೆಂಬರ್‌ನಲ್ಲಿ ನಿವೃತ್ತರಾಗಿದ್ದರು.೨೦೧೮ ರ ಜನವರಿಯಲ್ಲಿ ದೀಪಕ್ ಮಿಶ್ರಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಲ್ಲಿ ಗೊಗೊಯ್ ಕೂಡಾ ಸೇರಿದ್ದರು. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಆಯ್ದ ಆದ್ಯತೆಯ ನ್ಯಾಯಾಧೀಶರಿಗೆ ಪ್ರಕರಣಗಳ ನಿಯೋಜನೆ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತ್ತು ಕಲಾವಿದರು ಪ್ರಾಬಲ್ಯ ಹೊಂದಿರುವ ರಾಜ್ಯಸಭೆಗೆ ಇದುವರೆಗೆ ಮುಖ್ಯ ನ್ಯಾಯಾಧೀಶರನ್ನು ರಾಷ್ಟçಪತಿಗಳು ನಾಮಕರಣ ಮಾಡಿದ ಉದಾಹರಣೆಯಿಲ್ಲ.
ಕರೋನಾ ಪರಿಣಾಮ:
ವಾರದ ಸಂತೆಯ ಜಾಗ ಬದಲು
ಸಿದ್ಧಾಪುರ,ಮಾ.೧೭- ಕರೋನಾ ಎಲ್ಲರನ್ನೂ ನಡುಗಿಸುತಿದ್ದು ಇಲ್ಲಿಯ ಮಾರುಕಟ್ಟೆ ಇಲ್ಲದ ರಸ್ತೆಯ ಮೇಲೆ ನಡೆಯುತಿದ್ದ ಬುಧವಾರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ನೆಹರೂ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಇಂದು ನಡೆದ ತಾಲೂಕಾ ಆಡಳಿತದ ಸಭೆಯಲ್ಲಿ ನಿರ್ಣಯಿಸಿದ್ದು ರಸ್ತೆಮೇಲೆಯೇ ನಡೆಯುತಿದ್ದ ಸಂತೆ ಸ್ಥಳಿಯರು, ಜನಸಾಮಾನ್ಯರಿಗೆ ತೊಂದರೆ ಮಾಡುವುದಲ್ಲದೆ ರಸ್ತೆಯಲ್ಲಿ ನಡೆದು ಹೋಗುವ ಜನರಿಗೆ ಕೂಡಾ ಸಂತೆಯ ಬಿಸಿ ತಾಗಲಿರುವ ಹಿನ್ನೆಲೆಯಲ್ಲಿ ಕರೋನಾ ಮುನ್ನೆಚ್ಚರಿಕೆಯಾಗಿ ವಾರದ ಸಂತೆಯ ಸ್ಥಳವನ್ನು ಹಳೆ ಜಾಗದಿಂದ ನೆಹರೂ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಸಿದ್ಧಾಪುರದ ರಸ್ತೆ ಮೇಲಿನ ಸಂತೆಯ ಬಗ್ಗೆ ಬಹುಹಿಂದಿನಿAದಲೂ ವಿರೋಧವಿತ್ತು. ಈ ಬಗ್ಗೆ ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೆಲವರ ಹಿತಾಸಕ್ತಿಯಿಂದಾಗಿ ವಾರದ ಸಂತೆಯ ಜಾಗ ಬದಲಾಗಿರಲಿಲ್ಲ ಈಗ ಕರೋನಾ ಭೀತಿ ಈ ರಸ್ತೆ ಮೇಲಿನ ಅವ್ಯವಸ್ಥಿತ ಸಂತೆಯನ್ನು ಸ್ಥಳಾಂತಿಸುವAತೆ ಮಾಡಿದೆ. ಈ ಬಗ್ಗೆ ಸಾರ್ವಜನಿಕರು ಹ಼ರ್ಷಿತರಾಗಿದ್ದು ಜನರು, ಸ್ಥಳಿಯರು ಎಲ್ಲರಿಗೂ ಅನಾನುಕೂಲವಾದ ಬುಧವಾರದ ವಾರದ ಸಂತೆಯ ಸ್ಥಳ ಬದಲಾವಣೆ ಬಗ್ಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ತಾಲೂಕಿನ ಮಂಗನಕಾಯಿಲೆ ಮತ್ತು ಕರೋನಾ ಮುನ್ನೆಚ್ಚರಿಕೆಗಳ ಬಗ್ಗೆ ಕೂಡಾ ಈ ತುರ್ತು ಸಭೆಯಲ್ಲಿ ಚರ್ಚೆಯಾಗಿದ್ದು ಮಂಗನಕಾಯಿಲೆ ಮತ್ತು ಕರೋನಾ ತಡೆ, ಮುನ್ನೆಚ್ಚರಿಕೆಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಸಾರ್ವಜನಿಕರು ಭಯಮುಕ್ತರಾಗಿರಲು ವಿನಂತಿಸಿದ್ದಾರೆ.
ಮೊದಲು ಮಾನವನಾಗು ಸೂಲಿಬೆಲೆ
ಹೀಗೆಂದು ಟ್ವೀಟ್ ಮಾಡುವ ಮೂಲಕ ನಟ ಧನಂಜಯ್ ಚಕ್ರವರ್ತಿ ಸೂಲಿಬೆಲೆಯವರಿಗೆ ಟಕ್ಕರ್ ನೀಡಿದ್ದಾರೆ. ಇಂದು ಕರೋನಾ ಬಗ್ಗೆ ನಂಜಿನ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ ಇಟಲಿಯಲ್ಲಿ ಜನ ಸಾಯುತ್ತಿರುವ ಬಗ್ಗೆ ಏಸು ಕ್ರಿಸ್ತರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
