ಕರೋನಾ ವೈರಸ್ ಮತ್ತು ಮಂಗನಕಾಯಿಲೆಗಳ ಬಗ್ಗೆ ವಿಶೇಶ ಗಮನ ಹರಿಸುತ್ತಿರುವ ಸರ್ಕಾರ, ಆಸ್ಫತ್ರೆಗಳ ಕ್ರಮದಿಂದ ಸರ್ಕಾರಿ ಆಸ್ಫತ್ರೆಗಳ ಇತರ ಹೊರರೋಗಿಗಳಿಗೆ ತೊಂದರೆಯಾಗುತ್ತಿರುವ ವಿದ್ಯಮಾನ ವರದಿಯಾಗಿದೆ.
ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಸರ್ಕಾರಿ ಆಸ್ಫತ್ರೆಗಳಲ್ಲಿ ಕರೋನಾ ಸೋಂಕು ಮತ್ತು ಮಂಗನಕಾಯಿಲೆಗಳ ಬಗ್ಗೆ ವಿಶೇಶ ನಿಗಾ ವಹಿಸಲಾಗುತ್ತಿದೆ. ವೈದ್ಯರು, ಆಸ್ಫತ್ರೆಗಳು ಈ ಮಾರಕ ರೋಗಗಳ ಬಗ್ಗೆ ವಿಶೇಶ ಆಸಕ್ತಿ ವಹಿಸುತ್ತಿರುವುದರಿಂದ ಸರ್ಕಾರಿ ಆಸ್ಫತ್ರಗಳಿಗೆ ಬರುವ ಇತರ ಸಾಮಾನ್ಯ ಹೊರರೋಗಿಗಳ ಬಗ್ಗೆ ಉಪೇಕ್ಷೆಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.
ಸಿದ್ಧಾಪುರದಲ್ಲಿ ಸೋಮವಾರ ಮಧ್ಯಾಹ್ನದ ಅವಧಿಯಲ್ಲಿ ಕೆಲವು ವೈದ್ಯರಿಲ್ಲದೆ ಸಾರ್ವಜನಿಕರು, ಮಕ್ಕಳಿಗೆ ತೊಂದರೆಯಾಯಿತು ಎಂದು ಕೆಲವರು. ದೂರಿದರು. ಒಂದುಗಂಟೆಗೇ ಊಟಕ್ಕೆ ತೆರಳುವ ವೈದ್ಯರು, ಸಿಬ್ಬಂದಿಗಳು ಮೂರು ವರೆಯವರೆಗೂ ಬಂದಿರುವುದಿಲ್ಲ. ಇದರಿಂದ ಚಿಕಿತ್ಸೆಗೆ ಬಂದು ಸರತಿಸಾಲಿನಲ್ಲಿ ಕಾಯುವವರಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ದೂರಿದರು.
ಮಕ್ಕಳು, ಹಿರಿಯರು ನಾಲ್ಕೈದು ತಾಸು ಸರತಿ ಸಾಲಲ್ಲಿ ನಿಂತು ಚಿಕಿತ್ಸೆ ಪಡೆಯುವ ಸ್ಥಿತಿ ಸಿದ್ದಾಪುರದಲ್ಲಿದೆ. ಆಸ್ಫತ್ರೆಗೆ ಬರುವವರೇ ಅಶಕ್ತರು, ಅನಾರೋಗ್ಯ ಉಂಟಾದವರು ಇಂಥ ಮಕ್ಕಳು, ಹಿರಿಯರನ್ನು ದಿನವಿಡೀ ಕಾಯುಸುತ್ತಿರುವುದು ಇಲ್ಲಿ ಸಾಮಾನ್ಯ. ವೈದ್ಯರು ಬಂದು ಹೋಗುವ ಬಗ್ಗೆ ನಿಯಮಿತ, ನಿಶ್ಚಿತ ಸಮಯಮಾಹಿತಿ ಇಲ್ಲದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈಗ ಈ ಕೊರೊನಾ ಸೋಂಕಿನ ಭಯ, ಈ ಅವ್ಯವಸ್ಥೆಗಳ ಬಗ್ಗೆ ಹೇಳುವವರು, ಕೇಳುವವರು ಇಲ್ಲದಂತಾಗಿರುವುದು ನಮ್ಮ ತಾಲೂಕಿನ ದೌರ್ಭಾಗ್ಯ.
- ಕೆ.ಟಿ.ನಾಯ್ಕ ಹೆಗ್ಗೇರಿ, ತಾಲೂಕಾ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ.
ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುವೆ:
ರಂಜನ್ ಗೊಗೊಯ್
ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ರಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ನಾಮನಿರ್ದೇಶನದ ಬಗ್ಗೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ಗೋಗೊಯ್ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆ ಅವರು ನ್ಯಾಯಮೂರ್ತಿಗಳಾಗಿದ್ದಾಗ ಮೋದಿ ಸರ್ಕಾರಕ್ಕೆ ಮಾಡಿದ ಸಹಾಯಗಳಿಗೆ ಇದು ಪ್ರತಿಫಲ ಎಂಬರ್ಥದಲ್ಲಿ ಜನರು ಟೀಕೆಗಳನ್ನು ಮಾಡಿದ್ದರು.
“ಬಹುಶಃ ನಾಳೆ ದೆಹಲಿಗೆ ಹೋಗುತ್ತೇನೆ. ಮೊದಲು ಪ್ರಮಾಣವಚನ ಸ್ವೀಕರಿಸುತ್ತೇನೆ, ನಂತರ ನಾನು ಇದನ್ನು ಏಕೆ ಒಪ್ಪಿಕೊಂಡೆ ಎಂದು ಮಾಧ್ಯಮಗಳೊಂದಿಗೆ ವಿವರವಾಗಿ ಮಾತನಾಡುತ್ತೇನೆ …” ಎಂದು ರಂಜನ್ ಗೊಗೊಯ್ ಅಸ್ಸಾಂನ ಗುವಾಹಟಿಯಲ್ಲಿ ಹೇಳಿದ್ದಾರೆ.