
ಸಿದ್ಧಾಪುರ,ಮಾ.೧೭- ಕರೋನಾ ಎಲ್ಲರನ್ನೂ ನಡುಗಿಸುತಿದ್ದು ಇಲ್ಲಿಯ ಮಾರುಕಟ್ಟೆ ಇಲ್ಲದ ರಸ್ತೆಯ ಮೇಲೆ ನಡೆಯುತಿದ್ದ ಬುಧವಾರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ನೆಹರೂ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. (ಸಮಯ ಸಂಜೆ 5-30 ರ ಮೊದಲು)
ಈ ಬಗ್ಗೆ ಇಂದು ನಡೆದ ತಾಲೂಕಾ ಆಡಳಿತದ ಸಭೆಯಲ್ಲಿ ನಿರ್ಣಯಿಸಿದ್ದು ರಸ್ತೆಮೇಲೆಯೇ ನಡೆಯುತಿದ್ದ ಸಂತೆ ಸ್ಥಳಿಯರು, ಜನಸಾಮಾನ್ಯರಿಗೆ ತೊಂದರೆ ಮಾಡುವುದಲ್ಲದೆ ರಸ್ತೆಯಲ್ಲಿ ನಡೆದು ಹೋಗುವ ಜನರಿಗೆ ಕೂಡಾ ಸಂತೆಯ ಬಿಸಿ ತಾಗಲಿರುವ ಹಿನ್ನೆಲೆಯಲ್ಲಿ ಕರೋನಾ ಮುನ್ನೆಚ್ಚರಿಕೆಯಾಗಿ ವಾರದ ಸಂತೆಯ ಸ್ಥಳವನ್ನು ಹಳೆ ಜಾಗದಿಂದ ನೆಹರೂ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಸಿದ್ಧಾಪುರದ ರಸ್ತೆ ಮೇಲಿನ ಸಂತೆಯ ಬಗ್ಗೆ ಬಹುಹಿಂದಿನಿಂದಲೂ ವಿರೋಧವಿತ್ತು. ಈ ಬಗ್ಗೆ ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೆಲವರ ಹಿತಾಸಕ್ತಿಯಿಂದಾಗಿ ವಾರದ ಸಂತೆಯ ಜಾಗ ಬದಲಾಗಿರಲಿಲ್ಲ. ಈಗ ಕರೋನಾ ಭೀತಿ ಈ ರಸ್ತೆ ಮೇಲಿನ ಅವ್ಯವಸ್ಥಿತ ಸಂತೆಯನ್ನು ಸ್ಥಳಾಂತಿಸುವಂತೆ ಮಾಡಿದೆ.
ಈ ಬಗ್ಗೆ ಸಾರ್ವಜನಿಕರು ಹ಼ರ್ಷಿತರಾಗಿದ್ದು ಜನರು, ಸ್ಥಳಿಯರು ಎಲ್ಲರಿಗೂ ಅನಾನುಕೂಲವಾದ ಬುಧವಾರದ ವಾರದ ಸಂತೆಯ ಸ್ಥಳ ಬದಲಾವಣೆ ಬಗ್ಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ತಾಲೂಕಿನ ಮಂಗನಕಾಯಿಲೆ ಮತ್ತು ಕರೋನಾ ಮುನ್ನೆಚ್ಚರಿಕೆಗಳ ಬಗ್ಗೆ ಕೂಡಾ ಈ ತುರ್ತು ಸಭೆಯಲ್ಲಿ ಚರ್ಚೆಯಾಗಿದ್ದು ಮಂಗನಕಾಯಿಲೆ ಮತ್ತು ಕರೋನಾ ತಡೆ, ಮುನ್ನೆಚ್ಚರಿಕೆಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಸಾರ್ವಜನಿಕರು ಭಯಮುಕ್ತರಾಗಿರಲು ವಿನಂತಿಸಿದ್ದಾರೆ.
ಮೊದಲು ಮಾನವನಾಗು ಸೂಲಿಬೆಲೆ
ಹೀಗೆಂದು ಟ್ವೀಟ್ ಮಾಡುವ ಮೂಲಕ ನಟ ಧನಂಜಯ್ ಚಕ್ರವರ್ತಿ ಸೂಲಿಬೆಲೆಯವರಿಗೆ ಟಕ್ಕರ್ ನೀಡಿದ್ದಾರೆ. ಇಂದು ಕರೋನಾ ಬಗ್ಗೆ ನಂಜಿನ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ ಇಟಲಿಯಲ್ಲಿ ಜನ ಸಾಯುತ್ತಿರುವ ಬಗ್ಗೆ ಏಸು ಕ್ರಿಸ್ತರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರೀಯೆ ನೀಡಿದ ನಟ ಧನಂಜಯ್ ಚುಟುಕಾಗಿ ‘ಮೊದಲು ಮಾನವನಾಗು’ ಎಂದು ಟ್ವೀಟ್ ಮಾಡಿದ್ದಾರೆ.
