ಉಲ್ಟಾಅಂಗಿ ಬಗ್ಗೆ ಸಾಹಿತಿ ಅರುಣಕುಮಾರ ಹಬ್ಬು ಅನಿಸಿಕೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನನ್ನ ಅಚ್ಚುಮೆಚ್ಚಿನ ಪ್ರದೇಶ. ಮಲೆನಾಡ ಸೊಗಡು, ಎತ್ತರೆತ್ತರ ಮರಗಳು, ಸಂಜೆಯಾದ ಕೂಡಲೇ ರೊಂಯ್ ರೊಂಯ್ ಎಂದು ಒರಲುವ ಮರ ಜಿರಲೆಗಳು, ಬೆಳಿಗಿನ ಮಂಜು ಹನಿಗಳು ಎಲೆಗಳ ಮೇಲೆ ಮುತ್ತಿನಂತೆ ಸೂರ್ಯನ ಬೆಳಕಿಗೆ ಹೊಳೆಯುವುದು, ಪಕ್ಷಿಗಳ ಕಲರವ. ನಿತ್ಯ ಇವೆಲ್ಲವನ್ನು ಅನುಭವಿಸಿ ಅಲ್ಲಿಯೇ ಬಾಲ್ಯ ಕಳೆದ ನನಗೆ ಮಲೆನಾಡೇ ಇಷ್ಟ.

ಮಂಚಿಕೆರೆ ಎಂಬ ಪುಟ್ಟ ಪೇಟೆಯೂ ಅಲ್ಲದ ಹಳ್ಳಿಯೂ ಅಲ್ಲದ ಊರಿನಲ್ಲಿಲ್ಲಿದ್ದ ಸರಕಾರಿ ಶಾಲೆ ಮತ್ತು ರಾಜರಾಜೇಶ್ವರಿ ಹೈಸ್ಕೂಲಿನಲ್ಲಿ ನನ್ನ ಶಿಕ್ಷಣ. ಅವೆಲ್ಲ ರೋಮಾಂಚಕ ಅನುಭವ. ಅಂಥ ತಾಲೂಕಿನ ಬೀಗಾರ ಗ್ರಾಮದ ತಮ್ಮಣ್ಣ ಅವರು ಒಬ್ಬ ಶಿಕ್ಷಕ ಮತ್ತು ಸಾಹಿತಿ. ಅವರ ಪರಿಚಯ ಆದದ್ದು ಫೇಸ್ಬುಕ್ನಲ್ಲಿ. ಅವರ ಬರೆಹಗಳಿಗೆ ನಾನು ಆಗಾಗ ಪ್ರತಿಕ್ರಿಯಿಸುತ್ತಿದ್ದು ಆತ್ಮೀಯತೆ ತಾನೇತಾನಾಗಿ ಬೆಳೆಯಿತು. ಅವರು ಶಾಲಾ ಶಿಕ್ಷಕರಾಗಿದ್ದರಿಂದ ಮಕ್ಕಳ ನಾಡಿ ಅವರಿಗೆ ಕರಗತ. ಹಾಗೆ ಬರೆಯುವ ಹವ್ಯಾಸವೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ.ಎಳೆದು ತಂದಿದೆ. ಅಂತೆಯೇ ಮಕ್ಕಳ ಬಾಲ್ಯದ ಎಲ್ಲ ಚಟುವಟಿಕೆಗಳು, ತುಂಟಾಟಗಳು, ಕುತೂಹಲಗಳು, ಹವ್ಯಾಸಗಳು ಅವರಿಗೆ ಕರತಲಾಮಲಕ.
ಈ ಹಿನ್ನೆಲೆಯಲ್ಲಿ ಅವರು ಮಕ್ಕಳಿಗಾಗೇ ಮೀಸಲಾದ ಉಲ್ಟಾ ಅಂಗಿ ಕಥಾ ಸಂಕನಲನವೊಂದನ್ನು ಹೊರತಂದಿದ್ದಾರೆ. ಅದನ್ನು ಓದುವ ಅವಕಾಶವನ್ನೂ ನನಗೆ ನೀಡಿದ್ದಾರೆ. ಈ ಉಲ್ಟಾ ಅಂಗಿಯ ಮರ್ಮ ಓದುತ್ತ ಹೋದಂತೆ ನನ್ನೆದುರು ತೆರೆದುಕೊಳ್ಳುತ್ತ ಹೋದಂತೆ ನನ್ನ ಬಾಲ್ಯವೇ ಮತ್ತೆ ಮರಳಿ ಬಂದಷ್ಟು ಸಾರ್ಥಕ ಮನೋಭಾವ ಉಂಟಾಯಿತು.
ಈ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚು. ಶಾಲೆಗೆ ಬಾರದ ಸುಬ್ಬು, ಹುಟ್ಟು ಹಬ್ಬಕ್ಕೆ ಚಾಕಲೇಟ್ ಹಂಚಲು ಪರದಾಡಿ ಸುಳ್ಳು ಹೇಳಿದ ಸೌಮ್ಯ, ಮರಹತ್ತಿ ಪಾರಿವಾಳವನ್ನು ಪಾರು ಮಾಡುವಾಗ ಅಂಗಿ ಹೊಲಸಾದರೂ ಉಲ್ಟಾ ಹಾಕಿದ್ದ ಅಂಗಿಯನ್ನು ಸೀದಾ ಮಾಡಿ ಗೆದ್ದ ಎಂಕಣ್ಣ,, ಗಣಪತಿ ಮುಳುಗಿಸುವ ಕುರಿತು ಸಾನ್ವಿಗೆ ಅರಿವು ಮೂಡಿಸುವ ರವಿ, ಎರಡು ತುಂಡಾದ ಎಲೆಗಳನ್ನು ಕೂಡಿಸುವಂತೆ ತಂದೆ ತಾಯಿಯನ್ನು ಒಂದು ಮಾಡುವ ಅಜ್ಜಿ . . . ಹೀಗೆ ಎಲ್ಲರೂ ಆಪ್ತವಾಗುತ್ತ ಸಾಗುತ್ತಾರೆ.
ಎಲ್ಲ ಮಕ್ಕಳಿಗೂ ತಿಳಿಯುವಂತೆ ಸರಳ ಭಾಷಾ ಪ್ರಯೋಗ, ಆದರೂ ಸುಂದರ ನಿರೂಪಣೆಯಿಂದ ಮಕ್ಕಳ ಅಷ್ಟೇ ಏಕೆ ನನ್ನಂಥ ಹಿರಿಯನ ಮನಸ್ಸೂ ಸೆರೆ ಹಿಡಿಯುತ್ತದೆ. ಸ್ನಾತಕೋತ್ತರ ಪದವೀಧರರಾಗಿರುವ ತಮ್ಮಣ್ಣ ಬೀಗಾರ ಈ ಕಥಾ ಸಂಕಲನದ ಮೂಲಕ ಎಲ್ಲ ಓದುಗರು ಮತ್ತು ಮಕ್ಕಳ ಮನ ಗೆದ್ದಿದ್ದಾರೆ. ನಾನು ಈ ಕಥೆಗಳನ್ನು ನನ್ನ ಪುಟ್ಟ ಮೊಮ್ಮಕ್ಕಳಿಗೂ ಓದಿ ತೋರಿಸಿದೆ. ಒಟ್ಟಾರೆ ಇದು ಮಕ್ಕಳ ಕಥಾ ಸಾಹಿತ್ಯದಲ್ಲಿ ಒಂದು ಉತ್ತಮ ಪ್ರಯೋಗ. ಇಂಥ ಮೌಲ್ವಿಕ ಸೃಷ್ಟಿ ನಿಮ್ಮಿಂದ ಇನ್ನಷ್ಟು ಬರಲಿ ತಮ್ಮಣ್ಣ.

ಅನುಗಾರ ಬೆನಕ,
ಸವಿಜೇನಿನ ಜನಕ
ತಾಲೂಕಿನ ಬೆಳ್ಳುಮನೆಯ ಬೆನಕ ಬಿಳಗಿ ಜೇನುಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಾತ್ಕಾಲಿಕ ಉದ್ಯೋಗಿ.
ಈ ಡಿ. ದರ್ಜೆಯ ಅನುಗಾರ
ಅಲ್ಲಿ ಕೆಲಸ ಮಾಡಿಕೊಂಡು ಇಲಾಖೆಯ ಜವಾಬ್ಧಾರಿ ನಿರ್ವಹಿಸುತ್ತಾ ಕಾಲ ಕಳೆದಿದ್ದರೆ ಬೆನಕ ನಿವೃತ್ತಿಯ ನಂತರವೂ ಸುದ್ದಿಯಾಗದೆ ಕಳೆದು ಹೋಗುತಿದ್ದ ಯಾಕೆಂದರೆ….. ಈತ ಅಲ್ಲಿಯ ಹಂಗಾಮಿ ನೌಕರ.
ಆದರೆ ಇದರಾಚೆ ತನ್ನ ಆಸಕ್ತಿ,ಸಾಧನೆಯಿಂದ
ಈತ ಅನುಗಾರ ಬೆನಕ ಸವಿಜೇನಿನ ಜನಕ ಎನ್ನುವ ಶೀರ್ಷಿಕೆಗೆ ಮಹತ್ವ ತಂದಿದ್ದಾನೆ. …..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *