

ಕಳೆದ ೧೫ ತಿಂಗಳ ಹಿಂದೆ ಅಸ್ಥಿತ್ವಕ್ಕೆ ಬಂದಿದ್ದ ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ಪತನವಾಗಿದೆ.
ಇಂದು ಮಾಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಪ್ರಕಟಿಸಿದ ಮುಖ್ಯಮಂತ್ರಿ ಕಮಲ್‌ನಾಥ್ ಕಳೆದ ಹದಿನೈದು ವರ್ಷಗಳ ಬಿ.ಜೆ.ಪಿ. ಆಡಳಿತದ ನಂತರ ಅಸ್ಥಿತ್ವಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡಿದೆ. ಗೂಂಡಾರಾಜ್, ಮಾಫಿಯಾ ನಿಯಂತ್ರಣ, ಜನಪರ ಆಡಳಿತ ಸಹಿಸದ ಬಿ.ಜೆ.ಪಿ. ಕುತಂತ್ರದಿಂದ ಸರ್ಕಾರ ಬೀಳಿಸಿದೆ. ಇದು ಬಿ.ಜೆ.ಪಿ. ಮತ್ತು ಕೇಂದ್ರದ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಕ್ರಮ ಎಂದು ಕೆಂಡ ಕಾರಿದ್ದಾರೆ.
ಕಳೆದ ಒಂದು ವರ್ಷಗಳಿಂದ ಅನೇಕ ರಾಜ್ಯಗಳ ಅಧಿಕಾರ ಕಳೆದುಕೊಂಡ ಬಿ.ಜೆ.ಪಿ. ಹಣ, ಅಧಿಕಾರಗಳ ಮದದಿಂದ ಕೆಲವು ರಾಜ್ಯಗಳ ಸರ್ಕಾರಗಳನ್ನು ಬೀಳಿಸಿ ತಮ್ಮ ಪಕ್ಷದ ಆಡಳಿತ ಮುಂದುವರಿಸಿದೆ. ಮಧ್ಯಪ್ರದೇಶದಲ್ಲಿ ಕೂಡಾ ಕಳೆದ ೧೫ ವರ್ಷಗಳಿಂದ ಆಡಳಿತ ಮಾಡಿದ್ದ ಬಿ.ಜೆ.ಪಿ. ಕಳೆದ ವರ್ಷ ಅಧಿಕಾರ ಕಳೆದುಕೊಂಡಿತ್ತು. ಹೀಗೆ ಅಧಿಕಾರ ಕಳೆದುಕೊಂಡ ಬಿ.ಜೆ.ಪಿ. ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಮತ್ತೆ ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಇದರ ಅಂಗವಾಗಿ ೨೨ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ, ತನ್ನ ಸರ್ಕಾರಕ್ಕಾಗಿ ಪ್ರಯತ್ನಿಸಿತ್ತು. ಮಧ್ಯಪ್ರದೇಶದ ಬಿ.ಜೆ.ಪಿ.ಯ ರಾಜಕೀಯ ವ್ಯಭಿಚಾರಕ್ಕೆ ತುತ್ತಾದ ಕಾಂಗ್ರೆಸ್ ಶಾಸಕರು ಕರ್ನಾಟಕದ ಬಿ.ಜೆ.ಪಿ.ಸರ್ಕಾರದ ರಕ್ಷಣೆ ಪಡೆದು ಪ್ರಹಸನವಾಗಿದ್ದು ಇತ್ತೀಚಿನ ವಿದ್ಯಮಾನ. ಕೋವಿಡ್ ವಿರುದ್ಧ ಜನತಾ ಕರ್ಫ್ಯೂ ನಾಟಕಮಾಡುತ್ತಿರುವ ಮೋದಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಜನತಾಕರ್ಫ್ಯೂ ದಿನ ಮನೆಗೆ ಕಳುಹಿಸುವರೆ ಎಂದು ಬಿ.ಜೆ.ಪಿ. ಟೀಕಾಕಾರರು ಪ್ರಶ್ನಿಸಿದ್ದಾರೆ.

