
ಕರೋನಾದಿಂದ ಪಾರಾಗಲು ವೈಜ್ಷಾನಿಕ, ವೈಧ್ಯಕೀಯ ಕ್ರಮಗಳತ್ತ ಗಮನಹರಿಸುತ್ತಿರುವಾಗಲೇ ಕೆಲವು ಕಡೆ ಕರೋನಾ ಬರದಂತೆ ಮುಂಜಾಗೃತೆ ವಹಿಸುವ, ಕರೋನಾ ಪರಿಣಾಮದಿಂದ ತೊಂದರೆಗೊಳಗಾಗಿರುವ ಜನರಿಗೆ ಸಹಕರಿಸುವ ಪ್ರಯತ್ನಗಳು ನಡೆಯುತ್ತಿವೆ.
ಇದೇ ವಾರ ಕರೋನಾ ಪರಿಣಾಮದಿಂದ ಹಾನಿಗೊಳಗಾದ ನಾಟಕ ಕಲಾವಿದರಿಗೆ ಆಹಾರ ಸಾಮಗ್ರಿ ವಿತರಿಸುವ ಮೂಲಕ ಶಿರಸಿಯಲ್ಲಿ ಉದ್ಯಮಿ ಭೀಮಣ್ಣ ನಾಯ್ಕ ಮಾನವೀಯತೆ ಮೆರೆದಿದ್ದರು.
ಶಿರಸಿ ಪತ್ರಕರ್ತರು ರಂಗಕಲಾವಿದರಿಗೆ ಆಹಾರ ಸಾಮಗ್ರಿ ನೀಡಿ, ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸರಿಗೆ ಮುಖಗವಸು ನೀಡಿ ಸಹಕರಿಸಿದ್ದರು.
ಶುಕ್ರವಾರ ಸಿದ್ಧಾಪುರದ ಆಟೋ ಚಾಲಕರಿಗೆ ಮುಖವಗಸು ವಿತರಿಸುವ ಮೂಲಕ ಶಿರಸಿ ಉದ್ಯಮಿ ಉಪೇಂದ್ರ ಪೈ ಕರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮಾಡಿದರು.




