ಕರೋನಾ ಎಲ್ಲರನ್ನೂ ಹೆದರಿಸುತ್ತಿದೆ. ಕರೋನಾ ವಿಸ್ತರಿಸದಂತೆ ತಡೆಯುವ ಪ್ರಯತ್ನವಾಗಿ ರಾಜ್ಯದ ಕರೋನಾ ಬಾಧಿತ ೯ ಜಿಲ್ಲೆಗಳಲ್ಲಿ ಈ ತಿಂಗಳ ಅಂತ್ಯದವರೆಗೆ ಅಗತ್ಯ, ಅನಿವಾರ್ಯ ಸೇವೆಗಳನ್ನು ಬಿಟ್ಟು ಉಳಿದ ಸಂಪೂರ್ಣ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ.
ಪಿ.ಯು.ಸಿ. ಕೊನೆಯ ಪರೀಕ್ಷೆ ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿರುವ ಸರ್ಕಾರ ಶಿಕ್ಷಣ ಇಲಾಖೆಗೆ ಮಾರ್ಚ್ ೩೧ ರ ವರೆಗೆ ರಜೆ ಘೋಶಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿ ಆದೇಶಿಸಿರುವ ಸರ್ಕಾರ ನಾಳೆಯ ಪಿ.ಯು.ಸಿ. ಪರೀಕ್ಷೆ ನಡೆಸುತ್ತಿರುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆ ಆದಂತಾಗಿದೆ.
ಸ್ವಯಂಪ್ರೇರಿತರಾಗಿ ಇಂದು ಜನತಾ ಕರ್ಫ್ಯೂ ಗೆ ಆದೇಶಿಸಿದ್ದ ಸರ್ಕಾರ ರಾತ್ರಿ ಬೆಳಗಾಗುವ ಮೊದಲು ಮನುಷ್ಯ,ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಸಣ್ಣ-ಪುಟ್ಟ ಗೊಂದಲಗಳ ನಡುವೆ ಇಂದು ಜನತಾ ಕರ್ಪ್ಯೂ ಯಶಸ್ವಿಯಾಗಿದೆ. ಉತ್ತರಕನ್ನಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಮಾ.೨೪ ರ ಮುಂಜಾನೆ ಆರರಿಂದ ಮಾ.೩೦ ರ ಮಧ್ಯರಾತ್ರಿಯ ವರೆಗೆ ೧೪೪ ಜಾರಿಮಾಡಿದೆ. ಪೊಲೀಸರು, ಪತ್ರಕರ್ತರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಸಾರ್ವಜನಿಕ ಸೇವೆಯಲ್ಲಿದ್ದು ಉಳಿದ ಕ್ಷೇತ್ರಗಳು ಬಹುತೇಕ ಸ್ಥಬ್ಧವಾಗಿವೆ.
,👌