

ನನಗಾಗಿ ನಿಮ್ಮ ಚಪ್ಪಾಳೆ ಬೇಕಿಲ್ಲ …. ಬದಲಿಗೆ ಹೀಗೆ ಮಾಡಿ: ಹಿರಿಯ ವೈದ್ಯೆಯ ಸಾತ್ವಿಕ ಆಕ್ರೋಶ*
ಹೈದರಾಬಾದ್ ನಲ್ಲಿ ಹಿರಿಯ ವೈದ್ಯೆಯಾಗಿರುವ ಡಾ. ಮನಿಶಾ ಬಣಗಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಈ ಸಂದೇಶವು ಕೇಂದ್ರ ಸರ್ಕಾರವು ಅತ್ಯಂತ ಹೊಣೆಗೇಡಿಯಾಗಿ ವರ್ತಿಸಿರುವ ಕುರಿತ ಸಾತ್ವಿಕ ಆಕ್ರೋಶವಾಗಿದೆ. ಆ ಹಿರಿಯ ವೈದ್ಯರ ಸಂದೇಶದ ಕನ್ನಡ ಅನುವಾದ ಇಲ್ಲಿದೆ.
ಪ್ರಿಯ ಭಾರತೀಯರೇ! ಮೋದಿ-ಬಿಜೆಪಿಯ ಗಂಟಾಲಜಿಯ ಜ್ಞಾನಕ್ಕೆ ಕಿವಿಗೊಡದಿರಿ, ದಯವಿಟ್ಟು ನನಗಾಗಿ ಚಪ್ಪಾಳೆ ಹೊಡೆಯಬೇಡಿ!!
ನಾನೊಬ್ಬ ವೈದ್ಯೆ, ನನಗಾಗಿ ನೀವು ಚಪ್ಪಾಳೆ ಹೊಡೆಯಬೇಕೆಂದು ನಾನು ಬಯಸುವುದಿಲ್ಲ. ಕಳೆದೆರಡು ದಶಕಗಳಿಂದಲೂ ತೀವ್ರ ಸೋಂಕಿಗೆ ಒಳಗಾಗಿ ನನ್ನಲ್ಲಿಗೆ ಬರುವ ಅದೆಷ್ಟೋ ರೋಗಿಗಳಿಗೆ ನಾನು ಚಿಕಿತ್ಸೆ ನೀಡಿದ್ದೇನೆ, ಈಗ ಕೊರೊನಾ ಆವರಿಸಿಕೊಂಡಿರುವ ಹೊತ್ತಿನಲ್ಲೂ ಸಹ ಅದನ್ನು ಮುಂದುವರೆಸುವವಳಿದ್ದೇನೆ. ಆದರೆ ಮಾರ್ಚ್ 22ರಂದು ಯಾರಿಂದಲೂ ನಾನು ಚಪ್ಪಾಳೆಗಳನ್ನು ಇಷ್ಟ ಪಡುವುದಿಲ್ಲ.
ಬದಲಿಗೆ, ಮೂಲಭೂತ ಹಕ್ಕುಗಳನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಿ ನೀವು ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತುರ್ತಾಗಿ ಆಗಬೇಕಿರುವ ಕೆಲಸಗಳಿಗಾಗಿ ಆಗ್ರಹಪಡಿಸಬೇಕು ಎಂದು ಬಯಸುತ್ತೇನೆ-
• ಎಷ್ಟು ವಿಕೋಪ ಪರಿಹಾರ ನಿಧಿಯನ್ನು ನಿಗದಿಪಡಿಸಿದ್ದೀರಿ ಎಂದು ಘೋಷಿಸಿ ಮತ್ತು ಎಲ್ಲರಿಗೂ ವೈದ್ಯಕೀಯ ಸಹಾಯ ಹಾಗೂ ವೈದ್ಯಕೀಯ ಕಾರ್ಯತಂತ್ರವೇನು ಎಂದು ತಿಳಿಸಬೇಕು.
• ಸರ್ದಾರ್ ಪಟೇಲ್ ಪ್ರತಿಮೆಗೆ ವಿನಿಯೋಗಿಸಿದ ಹಣದ ಕನಿಷ್ಟ ಎರಡು ಪಟ್ಟು ಹಣವನ್ನಾದರೂ ಕೊರೊನಾ ವೈರಸ್ ತಡೆಯಲು ಕೂಡಲೇ ಮೀಸಲಿಡಬೇಕು ಎಂದು ಒತ್ತಾಯಿಸಿ
• ಮೋದಿ ಸಂಕಷ್ಟದಿಂದ ರಕ್ಷಿಸಿದ ಇಲ್ಲವೇ ಜನರ ತೆರಿಗೆಯ ಬೊಕ್ಕಸದಿಂದ ಅಪಾರ್ ಹಣದ ಬೇಲೌಟ್ ನೀಡಿ ಉಳಿಸಿರುವ ಕಾರ್ಪೊರೇಟ್ ದೊರೆಗಳು ಮತ್ತು ಮೋದಿಯವರ ಪರಮಾಪ್ತ ಉದ್ಯಮಿಗಳು ಈಗ ದೇಶಕ್ಕಾಗಿ ಸಹಾಯ ಹಸ್ತ ಚಾಚಲು ಕೇಳಿಕೊಳ್ಳಲು ತಿಳಿಸಿ.
• ತಿರುಪತಿ, ಪದ್ಮನಾಭನ್, ಶಿರಡಿ, ಸಿದ್ದಿವಿನಾಯಕ, ಪುರಿ ಮೊದಲಾದ ಗುಡಿ ಗುಂಡಾರಗಳಲ್ಲಿ ದಾಸ್ತಾನು ಇಟ್ಟಿರುವ ರಾಶಿ ರಾಶಿ ಚಿನ್ನ ಬೆಳ್ಳಿಯನ್ನು ಸಾರ್ವಜನಿಕ ಸಂಪತ್ತು ಎಂದು ಘೋಷಿಸಿ ಇಂದು ಎದುರಾಗಿರುವ ವಿಪತ್ತಿನ ಸಮಯದಲ್ಲಿ ಉಪಯೋಗಿಸಲು ಮೋದಿಯವರಿಗೆ ತಿಳಿಸಿ.
• ನಿಮ್ಮ ಚಪ್ಪಾಳೆ ಬದಿಗಿರಿಸಿ ಕನಿಷ್ಠ ಇಲ್ಲಿಂದ ಆರಂಭಿಸಿ. ಯಾವುದೇ ನೆಪ ಹೇಳಿ ನನಗಾಗಿ ಚಪ್ಪಾಳೆ ತಟ್ಟಬೇಡಿ


