

ಕರೋನಾ ಜಾಗೃತಿ,ಮುನ್ನೆಚ್ಚರಿಕೆ ಕಠಿಣ ಕ್ರಮಗಳ ನಡುವೆ ಕರೋನಾ ವಿಸ್ತರಣೆ ಮುಂದುವರಿದಿದೆ.
ಇಂದು ಬೆಳಿಗ್ಗೆವರೆಗೆ ಭಾರತದಲ್ಲಿ ಕರೋನಾದಿಂದ ಸಾವನ್ನಪ್ಪಿದರವರ ಸಂಖ್ಯೆ 15 ಕ್ಕೆ ಏರಿದೆ.
ಸರ್ಕಾರದ ಕಠಿಣ ಕ್ರಮಗಳ ಉಲ್ಲಂಘನೆಗೆ ಶಿಕ್ಷೆಯಾಗಿ ಲಾಠಿ ಏಟು ಬೀಳುತಿದ್ದರೆ ದೇಶದ ಹಲವೆಡೆ ವಿಶೇಶವಾಗಿ ಗ್ರಾಮಸ್ಥರು ತಮ್ಮ ಊರಿನ ಸಂಪರ್ಕ ರಸ್ತೆಗಳನ್ನೇ ಬಂದ್ ಮಾಡಿ ಕರೋನಾ ಮುನ್ನೆಚ್ಚರಿಕೆ ವಹಿಸುತಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ರಸ್ತೆ, ಸಿದ್ಧಾಪುರದ ಕುಮಟಾ ರಸ್ತೆ, ನೆಜ್ಜೂರಿನ ರಸ್ತೆ, ಬುರುಡೆ ಜಲಪಾತದ ಸಂಪರ್ಕ ರಸ್ತೆಗಳು ಸೇರಿದಂತೆ ಬಹುತೇಕ ಕಡೆ ಸ್ಥಳಿಯರು ತಮ್ಮ ಗ್ರಾಮಗಳ ಸಂಪರ್ಕ ರಸ್ತೆಗಳ ಮೇಲೆ ಮರ, ಕಲ್ಲುಗಳನ್ನು ಇಟ್ಟು ಸಂಚಾರ ನಿರ್ಬಂಧಿಸಿದ್ದಾರೆ. ಕಾನೂನು, ಸರ್ಕಾರದ ಆದೇಶ, ಸ್ಥಳಿಯರ ಮುನ್ನೆಚ್ಚರಿಕೆಗಳಿಂದ ಕರೋನಾ ಜಾಗೃತಿ, ನಿಯಂತ್ರಣ ನಡೆಯುತ್ತಿದೆ. ಇಂಥ ಕ್ರಮಗಳ ನಡುವೆ ಕೂಡಾ ಕರೋನಾ ಸಾವುಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.





