

ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವಂತೆ ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಳಳದ ವಿದೇಶದಿಂದ ಮರಳಿದ ಯುವಕನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ.ಈ ಯವಕ ಕೆಲವು ದಿವಸಗಳ ಹಿಂದೆದುಬೈನಿಂದ ಹಿಂದಿರುಗಿದ್ದ.
ಈ ಹೊಸ ಪ್ರಕರಣದೊಂದಿಗೆ ರಾಜ್ಯದಲ್ಲಿ ಕರೋನಾ ಸೋಕಿತರ ಸಂಖ್ಯೆ 56 ಕ್ಕೇರಿದಂತಾಗಿದೆ. ಒಂದುದಿವಸದಲ್ಲಿ ಮೂರು ಹೊಸ ಪ್ರಕರಣದಿಂದಾಗಿ ಗುರುವಾರ 53 ರಷ್ಟಿದ್ದ ಕರೋನಾ ಸೋಕಿತರ ಸಂಖ್ಯೆ ಇಂದು 56 ಕ್ಕೇರಿದೆ. ಭಟ್ಳಳದ ಮುಂಡಳ್ಳಿ, ಜಾಲಿ, ಪಟ್ಟಣ ಭಾಗದಲ್ಲಿ ಸುರಕ್ಷಣಾ ಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿಯಮಗಳ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ವರೆಗೆ ರಾಜ್ಯದಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 3. ಈ ಹಿಂದೆ ಗಲಬರ್ಗಾ, ಚಿಕ್ಕಬಳ್ಳಾಪುರ ಇಂದು ತುಮಕೂರಿನಲ್ಲಿ ತಲಾ ಒಬ್ಬೊಬ್ಬರು ಕರೋನಾದಿಂದ ಸಾವು ಕಂಡಂತಾಗಿದೆ.
ಭಾರತ ಲಾಕ್‍ಔಟ್ ಹಿನ್ನೆಲೆಯಲ್ಲಿ ನಿನ್ನೆ 1.70 ಲಕ್ಷ ಕೋಟಿ ಯೋಜನೆಗಳನ್ನು ಪ್ರಕಟಿಸಿದ ಕೇಂದ್ರ ಇಂದು ದೇಶದ ಬ್ಯಾಂಕಿಂಗ್ ಕ್ಷೇತ್ರ ಮೂರು ತಿಂಗಳುಗಳ ವರೆಗೆ ಸಾಲವಸೂಲಾತಿ, ತಿಂಗಳ ಕಂತು ತುಂಬುವಿಕೆಗಳಿಗೆ ವಿನಾಯತಿ ನೀಡಲು ಆರ್.ಬಿ.ಐ. ಮೂಲಕ ಆದೇಶಿಸಿದೆ.
