

ದುಬೈನಿಂದ ಭಟ್ಕಳಕ್ಕೆ ಬಂದಿದ್ದ ಇನ್ನೋರ್ವ ಯುವಕನಲ್ಲೂ ಕೊರೋನಾ ಸೋಂಕು ಇದೆ ಎನ್ನಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಯುವಕನ ಗಂಟಲಿನ ದ್ರವವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಸಂದರ್ಭದಲ್ಲಿ ಪಾಸಿಟಿವ್ ಬಂದಿದೆ. ಆದರೆ, ಇದು ಅಧಿಕೃತವಲ್ಲ. ಕೆಲವೊಮ್ಮೆ ನೆಗೆಟಿವ್ ವರದಿಗಳೂ ಪಾಸಿಟಿವ್ ಬರುವ ಸಾಧ್ಯತೆ ಇದೆ. ಹೀಗಾಗಿ ಭಾರತದಾದ್ಯಂತ ಪುಣೆ ಪ್ರಯೋಗಾಲಯದ ವರದಿಯೇ ಅಧಿಕೃತ. ಹೀಗಾಗಿ ಇದನ್ನು ಮತ್ತೆ ಪುಣೆಗೆ ಕಳುಹಿಸಿ, ಅಲ್ಲಿಂದ ವರದಿ ಬಂದ ಬಳಿಕ ಕೊರೋನಾ ಸೋಂಕು ತಗುಲಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಹೇಳಲಾಗುವುದು’ ಎಂದು ತಿಳಿಸಿರುತ್ತಾರೆ.
ರಾಜ್ಯದಲ್ಲಿ 56 ಕ್ಕೇರಿದ ಸೋಂಕಿತರ ಸಂಖ್ಯೆ, ಭಟ್ಕಳದ ಯುವಕನಲ್ಲಿ ಕೊರೋನಾ ಪತ್ತೆ
ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವಂತೆ ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಳಳದ ವಿದೇಶದಿಂದ ಮರಳಿದ ಯುವಕನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಹೊಸ ಪ್ರಕರಣದೊಂದಿಗೆ ರಾಜ್ಯದಲ್ಲಿ ಕರೋನಾ ಸೋಕಿತರ ಸಂಖ್ಯೆ 56 ಕ್ಕೇರಿದಂತಾಗಿದೆ. ಒಂದುದಿವಸದಲ್ಲಿ ಮೂರು ಹೊಸ ಪ್ರಕರಣದಿಂದಾಗಿ ಗುರುವಾರ 53 ರಷ್ಟಿದ್ದ ಕರೋನಾ ಸೋಕಿತರ ಸಂಖ್ಯೆ ಇಂದು 56 ಕ್ಕೇರಿದೆ. ಭಟ್ಳಳದ ಮುಂಡಳ್ಳಿ ಭಾಗದಲ್ಲಿ ಸುರಕ್ಷಣಾ ಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿಯಮಗಳ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.
ಭಾರತ ಲಾಕ್‍ಔಟ್ ಹಿನ್ನೆಲೆಯಲ್ಲಿ ನಿನ್ನೆ 1.70 ಲಕ್ಷ ಕೋಟಿ ಯೋಜನೆಗಳನ್ನು ಪ್ರಕಟಿಸಿದ ಕೇಂದ್ರ ಇಂದು ದೇಶದ ಬ್ಯಾಂಕಿಂಗ್ ಕ್ಷೇತ್ರ ಮೂರು ತಿಂಗಳುಗಳ ವರೆಗೆ ಸಾಲವಸೂಲಾತಿ, ತಿಂಗಳ ಕಂತು ತುಂಬುವಿಕೆಗಳಿಗೆ ವಿನಾಯತಿ ನೀಡಲು ಆರ್.ಬಿ.ಐ. ಮೂಲಕ ಆದೇಶಿಸಿದೆ.
