


ಸಿದ್ಧಾಪುರದ ವೈದ್ಯ ಡಾ.ಪ್ರಶಾಂತ್ ಪರ್ಜನ್ಯ ಎನ್ನುವ ಕವನ ಸಂಕಲನ ಹೊತರುವ ಮೂಲಕ ಕವಿ,ಸಾಹಿತಿಯಾಗಿ ಹೆಸರು ಮಾಡಿದ್ದಾರೆ.
ವೃತ್ತಿಯಿಂದ ವೈದ್ಯ, ಪ್ರವೃತ್ತಿಯಿಂದ ಸಾಹಿತಿ, ಕವಿ ಆಗಿರುವ ಡಾ.ಪ್ರಶಾಂತ ವಿಶ್ವವಿಖ್ಯಾತ ಜೋಗಜಲಪಾತವಿರುವ ಜೋಗದವರು. ಯುವ ವೈದ್ಯರಾಗಿರುವ ಅವರ ಕವನ ಒಂದು ಕವನ (ನಂಜುಂಡ) ಕರೋನಾ ಸೋಂಕನ್ನು ಬಹು ಹಿಂದೇ ಪರಿಚಯಿಸಿತ್ತು ಎನ್ನುವುದು ಕೆಲವರ ಅಭಿಪ್ರಾಯ. ನಿಮಗೂ ಹಾಗೆನ್ನಿಸುತ್ತಿದೆಯೆ? ಓದಿ ನೋಡಿ, ಈ ಸೂಕ್ಷ್ಮಾಣು ಕವನ ಕರೋನಾ ಬಗ್ಗೆಯೇ ಇದೆ ಎನಿಸಿದರೆ ಡಾ.ಪ್ರಶಾಂತ ಸಿದ್ಧಾಪುರದಂಥ ಚಿಕ್ಕ ನಗರದಲ್ಲಿದ್ದು ಅಮೂರ್ತ ಕಲ್ಪಿಸಿದ ಹೊಸ ಕಾಣ್ಕೆಯ ಕವಿ,ಸಾಹಿತಿ, ಸಾಹಿತ್ಯಾಸಕ್ತ ವೈದ್ಯ ಎನ್ನಲಡ್ಡಿಯಿಲ್ಲ.
ಪ್ರಥಮ ಪುಸ್ತಕ, ಕವನ ಸಂಕಲನದ ಮೂಲಕವೇ ತಮ್ಮ ಸಾಹಿತ್ಯ, ಭಾಷೆ, ಕಾಣ್ಕೆಗಳ ವೈಶಿಷ್ಟ್ಯ ಪ್ರತಿಬಿಂಬಿಸಿರುವ ಡಾ.ಪ್ರಶಾಂತ ಕನ್ನಡ ಸಾರಸ್ವತ ಲೋಕಕ್ಕೆ ಕವಿಯಾಗಿ ಸಲ್ಲಲಿರುವ ಯುವ ವೈದ್ಯ ಎನ್ನಬಹುದು.
