

ಒಂದು ಚಿತ್ರ ನೂರು ಶಬ್ಧಗಳಿಗೆ ಸಮಾನ. ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಚಿತ್ರಗಳಿವು.
ಶಿವಾನಂದ ಕಳವೆ, ಸರ್ಜಾಶಂಕರ ಲಕ್ಷಾಂತರ ಶಬ್ಧಗಳ ಪುಸ್ತಕ ಪರಿಚಯಿಸಿದ್ದರೆ, ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರದಲ್ಲಿ ಕರೋನಾ ನಿರ್ವಹಣೆ, ಪರಿಹಾರ ಕ್ರಮಗಳ ಪರಶೀಲನೆ ನಡೆಸಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಿಕ್ಷಾ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ವೈಯಕ್ತಿಕ ನೆರವು ವಿತರಿಸಿದರು. ಉಳಿದಂತೆ, ಎಂದಿನಂತೆ ಸ್ಫೀಕರ್ ಮತ್ತು ಸಂಸದರ ಗುರುತು-ಪತ್ತೆ ಇಲ್ಲ.
ಎಂದಿನಂತೆ ವೈದ್ಯರು, ನರ್ಸ್‍ಗಳು, ಪೊಲೀಸರು,ಸೈನಿಕರು ನಮಗಾಗಿ ದುಡಿದರು.
ರೈತರಿಗೆ ಹೊರೆಯಾದ ಕರೋನಾ,ರೈತರ ಉತ್ಫನ್ನಗಳನ್ನು ಕೇಳುವವರಿಲ್ಲದೆ ಹಾನಿ
ಕರೋನಾ ಸೋಕಿನ ಭಯ, ಲಾಕ್‍ಔಟ್ ಹಿನ್ನೆಲೆಗಳಲ್ಲಿ ಕೃಷಿ,ಕೃಷಿ ಉತ್ಫನ್ನಗಳು, ಕೃಷಿ ಸಂಬಂಧಿ ಉದ್ಯಮಗಳು ಹಾನಿಗೊಳಗಾಗಿವೆ. ಮಲೆನಾಡು ಪ್ರದೇಶದಲ್ಲಿ ಬೆಳೆದ ಅನಾನಸ್, ಬಾಳೆ ಬೆಳೆಗಳನ್ನು ಕೇಳುವವರಿಲ್ಲದೆ ಇವುಗಳನ್ನು ಬೆಳೆದ ರೈತ ತಾವು ಬೆಳೆದ ಬೆಳೆ ತಮ್ಮ ಕಣ್ಮುಂದೇ ಹಾಳಾಗುತ್ತಿರುವುದನ್ನು ನೋಡುವಂತಾಗಿದೆ.






