ಕೋಮುವಾದಿ ಮೋದಿ,ಮತ್ತು ಎಳಸು ರಾಹುಲ್

ಕೋಮುವಾದಿ ಮೋದಿ,ಮತ್ತು
ಎಳಸು ರಾಹುಲ್
(6 ವರ್ಷಗಳ ಹಿಂದೆ ಬರೆದ ಲೇಖನ)
ಗುಜರಾತ್‍ನ ಮೋದಿ ಸಮಾಜವಾದಿ, ಜಾತ್ಯಾತೀತ ಭಾರತದ ಪ್ರಧಾನಿಯಾಗಿದ್ದಾರೆ.
ಮೋದಿ ಆರ್.ಎಸ್.ಎಸ್.ನ ಕಟ್ಟಾ ಕಾರ್ಯಕರ್ತರಾಗಿದ್ದವರು. ಗುಜರಾತ್‍ನಲ್ಲಿ ಸ್ನೇಹಿತರು, ವಿರೋಧಿಗಳೆನ್ನದೆ ತನ್ನೊಡನೆ ಭಿನ್ನಾಭಿಪ್ರಾಯ ಹೊಂದಿದವರನ್ನು ಹಿಂದೆ-ಮುಂದೆ ನೋಡದೆತೆರೆಮರೆಗೆ ಸರಿಸಿದವರು.
ಮೋದಿ ಮಹಾನ್ ದೇಶಪ್ರೇಮಿ ಎಂದು ಮಾಧ್ಯಮಗಳು ಟಾಂ. ಟಾಂ. ಹೊಡೆದವು, ಹಾಗಾದರೆ, ಮೋದಿ ಹೇಗೆ ದೇಶಪ್ರೇಮಿ ಎಂಬುದನ್ನು ತೋರಿಸಿಲ್ಲ. ಸದಾ ಶ್ರೀಮಂತರು, ಪಟ್ಟಭದ್ರರು, ಜಾತಿವಾದಿಗಳು, ಧರ್ಮಾಂಧರ ಪರವಾಗಿ ಭಟ್ಟಂಗಿತನ ಮಾಡುತ್ತಾ ಸರಳ-ಸಜ್ಜನ, ಸಮಾಜವಾದಿ ಜಾತ್ಯಾತೀತರನ್ನು ದುಷ್ಟರೆಂಬಂತೆ ಬಿಂಬಿಸುತ್ತಾ ಶ್ರೀರಾಮನಂಥ ಬ್ರಾಹ್ಮಣ ಗುಲಾಮರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಹಿಂದೂ ಕೋಮುವಾದಿ ಆರ್.ಎಸ್. ಎಸ್.ಉಗ್ರರ ಸಂಘಟನೆಯಲ್ಲಿದ್ದ ಕಾರಣಕ್ಕೆ ಮೋದಿ ದೇಶಪ್ರೇಮಿಯಾಗಲು ಹೇಗೆ ಸಾಧ್ಯ?
ಗುಜರಾತ್‍ನಲ್ಲಿ ಅಲ್ಲಿಯ ಎನ್.ಆರ್.ಆಯ್. ಗಳಿಂದ ಹಣ ತರಿಸಿ, ಅಭಿವೃದ್ಧಿ ಹೆಸರಿನಲ್ಲಿ ಮೋದಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿಗಳಂಥ ಕುಬೇರರನ್ನುಕೊಬ್ಬಿಸಿದರು. ಈ ಕುಬೇರರು ಮೋದಿಯ ಋಣ ತೀರಿಸಲೆಂಬಂತೆ ಬಿ.ಜೆ.ಪಿ. ಸಂಘ ಪರಿವಾರಕ್ಕೆ ಬಂಡವಾಳ ನೀಡಿದರು. ಭಾರತದ ಕುಬೇರರನ್ನು ಕಾವಲು ಕಾಯುವ ಆರ್.ಎಸ್.ಎಸ್. ವಿ.ಹಿಂ.ಪಗಳು ಆಸೆಬುರುಕ ಯುವಕರು, ಬಿ.ಜೆ.ಪಿ. ಪ್ರೇರಿತ ಕಾರ್ಯಕರ್ತರನ್ನು ಕೊಬ್ಬಿಸಿದರು. ಬಂಡವಾಳ ಶಾಹಿ ಕುಬೇರರಕೈಚಳಕದಿಂದ ಮಾಧ್ಯಮಗಳು ‘ಮೋದಿ ಅಲೆ!’ ಸೃಷ್ಟಿಸತೊಡಗಿದವು. ಭಾರತದ ಚರಿತ್ರೆ ಇತಿಹಾಸ, ರಾಜಕೀಯ ಚಳವಳಿ ಅರಿಯದ ಯುವಪಡೆ ಹಿಂದುತ್ವ ಆಧರಿತ ಸೋಗಲಾಡಿಗಳು ಮತ್ತು ಮಾರಾಟವಾದ ಮಾಧ್ಯಮಗಳ ಉತ್ಫ್ರೇಕ್ಷಿತ ವರದಿಗಳನ್ನು ನೋಡಿ, ಓದಿ ಭ್ರಮಾಧೀನರಾದರು. ಈ ಕೃತಕ ಮೋದಿ ಅಲೆಯ ದಿಕ್ಕೆಟ್ಟ ಜನಾಭಿಪ್ರಾಯ ಬಿ.ಜೆ.ಪಿ. ಎಂಬ ಕೋಮುವಾದಿ ಪಕ್ಷವನ್ನು ಶ್ರೀಮಂತರು ಮೇಲ್ವರ್ಗದ ಅಜ್ಞಾನುಧಾರಿ ಸೋಗಲಾಡಿ ಮೋದಿಯನ್ನು ಗೆಲ್ಲಿಸಿತು.
ಆರ್.ಎಸ್.ಎಸ್., ವಿ.ಹಿಂ.ಪ. ಪ್ರೇರಿತ ಬಿ.ಜೆ.ಪಿ.
…..‘ಮಂದಿರವಲ್ಲೇ ಕಟ್ಟುವೆವು’ ಎಂದಿತು. ಸಮಾನ ನಾಗರಿಕ ಸಂಹಿತೆ ಎಂದಿತು. ಆರ್ಟಿಕಲ್ 370 ಎಂದಿತು. ಈಗ ಇವೆಲ್ಲಾ ಜಾರಿಗೆ ಅಗತ್ಯವಿರುವ ಬಹುಮತ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರಕ್ಕಿದೆ. ಮಮತಾ ಬ್ಯಾನರ್ಜಿ ಛಿ.. ಎಂದು ಹೊರಗಟ್ಟಿದ ನ್ಯಾನೋ ಕಾರು ಘಟಕ ಸ್ಥಾಪನೆಗೆ ಮೋದಿ ನಡು ರಾತ್ರಿಯಲ್ಲಿ ‘ಎಸ್’ ಎಂದರು.
ಎರಡು ಅವಧಿಗಳ ಮೋದಿ ಸರ್ಕಾರದಲ್ಲಿ ಗುಜರಾತ್‍ನಲ್ಲಿ ಲೋಕಾಯುಕ್ತ ನೇಮಕಕ್ಕೆ ಅವಕಾಶ ನೀಡಲಿಲ್ಲ. ಮೋದಿ ಮತ್ತು ಗುಜರಾತ್ ಕುಖ್ಯಾತವಾದದ್ದು ಕೋಮು ಹಿಂಸೆಗೆ. ಆದರೆ, ರೈತರ ಜಮೀನು ಕಸಿದು ಕಾರ್ಪೊರೇಟ್ ಕುಳಗಳಿಗೆ ತರಾತುರಿಯಲ್ಲಿ ನೀಡಿ ಖಾಸಗಿ ಕುಬೇರರಿಂದ ಹಣ ಬಾಚಿದ ಮೋದಿ ಬಗ್ಗೆ ಮಾಧ್ಯಮಗಳು ಚಕಾರ ಎತ್ತಲಿಲ್ಲ.
ಮೋದಿ ಲೋಕಾಯುಕ್ತ ನೇಮಕ ಮಾಡದೆ ಬ್ರಷ್ಟಾಚಾರ ಮಾಡಿದ್ದು ಮಾಧ್ಯಮಗಳಿಗೆ ಕಾಣಲಿಲ್ಲ. ಕೋಮುದಂಗೆ, ಘರ್ಷಣೆಗಳು ಸರ್ಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದಾಗ ಉಗ್ರ ಪ್ರತಾಪಿಯಂಥ ಅಕ್ಷರ ಹಾದರದ ಹೇಸಿಗೆಗಳು ಮೋದಿ ಮತ್ತುಮುಸ್ಲಿಂ ಎಂದೆಲ್ಲಾ ಭಟ್ಟಂಗಿತನ ಮಾಡತೊಡಗಿದ್ದರು. ಮೋದಿ ಗುಜರಾತ್‍ನಲ್ಲಿ ಮಾಡಿದ ಅನಿವಾರ್ಯ ಸೌಹಾರ್ದತೆಯನ್ನು ಭಾರತದುದ್ದಕ್ಕೂ ವಿಸ್ತರಿಸಿ, ಬಹುಸಂಖ್ಯಾತ ಹಿಂದುಳಿದವರನ್ನು ಅಲ್ಫಸಂಖ್ಯಾತ ಮುಸ್ಲಿಂ, ಕ್ರೈಸ್ತ, ಜೈನ ಸಿಖ್ಖರನ್ನು ಧ್ವನಿ ಎತ್ತದಂತೆ ಕೂಡ್ರಿಸುವ ಮೋದಿ ಹುನ್ನಾರಕ್ಕೆ ಅಂಬಾನಿಯ ರಿಲಾಯನ್ಸ್, ಟಾಟಾ, ಅದಾನಿ ಸೇರಿದಂತೆ ಅನೇಕ ಶ್ರೀಮಂತ ಕುಬೇರರು ಹಣ ಸುರಿದಿದ್ದಾರೆ. ಈ ಹಣ ಜನಸಾಮಾನ್ಯರ ಅವಿವೇಕವನ್ನು ಉದ್ದೀಪಿಸಿ, ಮೋದಿ ಅಲೆಯ ಬಿ.ಜೆ.ಪಿ. ಸರ್ಕಾರವನ್ನು ತಂದಿದೆ. ಇದನ್ನು ಬಿಟ್ಟರೆ ಮೋದಿ ಮಾಡಿದ ಸಾಧನೆ ಏನು?
ಮೋದಿ ಒಬ್ಬ ಕಪಟ ಆರೆಸೆಸ್ಸಿಗ, ಆತನೊಂದಿಗಿರುವ ಅನೇಕರು ಸಿಂಹದ ಮುಖವಾಡದ ಗೋಮುಖ ವ್ಯಾಘ್ರಗಳು. ಮೋದಿಯ ಅಲೆಯಲ್ಲಿ ಆಯ್ಕೆಯಾದವರಲ್ಲಿ ಅನೇಕರು ಉತ್ತರಕನ್ನಡ ಸಂಸದ ಅನಂಥ ಹೆಗಡೆಯಂಥ ಹಿಂಸೃಮೃಗಗಳು, ಸಿಂಹನಂಥ ಸೋಗಲಾಡಿ ಭಟ್ಟಂಗಿಗಳು. ಮೋದಿಯನ್ನು ಅಟ್ಟಕ್ಕೇರಿಸಿರುವ ಮಾಧ್ಯಮಗಳು ಜಾಗತೀಕರಣದ ರಾಕ್ಷಸ ಸೃಷ್ಟಿಗಳು. ಇಂಥವರಿಂದ ಭಾರತದ ಏಳ್ಗೆ, ಪ್ರಗತಿ, ಧೀರತನಗಳ ಪ್ರತಿಬಿಂಬ ಸಾಧ್ಯವಿಲ್ಲ.
ಬಿ.ಜೆ.ಪಿ. ಮಾಡಿದ ಕುತಂತ್ರದ ಷಡ್ಯಂತ್ರ ಹೇಗೆ ಕೆಲಸ ಮಾಡಿದೆ ಎಂದರೆ,ಕರ್ನಾಟಕದಲ್ಲಿ ಅಕಾಲಿಕವಾಗಿ ಬಿ.ಜೆ.ಪಿ. ಸರ್ಕಾರ ಬಂದಂತೆ ಭಾರತಕ್ಕೆ ಸಹ್ಯವಲ್ಲದ ಮೋದಿಯ ಬಿ.ಜೆ.ಪಿ. ಸರ್ಕಾರ ಬಂದಿದೆ. ಈ ಸರ್ಕಾರ ಬರುವಂತೆ ಶ್ರಮಿಸಿದ ಕಾರ್ಪೊರೇಟ್ ಕುಬೇರರು ಈಗ ತಮ್ಮ ಲಾಭದ ಲೋಡೆಡ್ ಬಂದೂಕನ್ನು ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರದ ಹೆಗಲಮೇಲಿಡಲಿದ್ದಾರೆ. ಮೋದಿ ಹೇಳಿ ಕೇಳಿ ಆರ್.ಎಸ್.ಎಸ್.ಗುಲಾಮ, ಸನಾತನವಾದಿ ಬ್ರಾಹ್ಮಣರ ಪೋಷಕ ಶ್ರೀರಾಮನಂಥ ಶೂದ್ರವಿರೋಧಿ ವೈಶ್ಯ. ಮೋದಿ ಈಗ ತನ್ನ ಹೆಗಲ ಮೇಲೆ ಶ್ರೀಮಂತ ಕುಳಗಳಿಡುವ ಬಂದೂಕನ್ನು ಜನತೆಯತ್ತಗುರಿಮಾಡಲಿದ್ದಾನೆ.
ಇದರಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಉದ್ಯೋಗಖಾತ್ರಿ, ಮಧ್ಯಾಹ್ನದ ಬಿಸಿಯೂಟದ ಫಲಾನುಭವಿ ಜನಸಾಮಾನ್ಯರೇ ಬಲಿಯಾಗಲಿದ್ದಾರೆ. ರಾಮಾಯಣ, ಪುರಾಣಗಳಲ್ಲಿ ಶಂಬೂಕ, ರಾವಣ, ಕರ್ಣ, ಧುರ್ಯೋಧನರು ಜನಸಾಮಾನ್ಯರ ಪರವಿದ್ದು, ಪಟ್ಟಭದ್ರ ಬ್ರಾಹ್ಮಣ್ಯದ ವಿರುದ್ಧವಿದ್ದು ರಾಕ್ಷಸರೆಂಬಂತೆ ಚಿತ್ರಿತವಾದಂತೆ! ಧರ್ಮಾಂಧ ಕೋಮುವಾದಿ ಹಿಂದುತ್ವವಾದಿಗಳು ಹೆಂಡ್ತಿಬಿಟ್ಟ ಮೋದಿಯೆಂಬ ಶ್ರೀಮಂತರ ಕಾವಲು ನಾಯಿಯನ್ನು ಆಧುನಿಕ ಶ್ರೀರಾಮ, ಭರತ ಚಕ್ರವರ್ತಿ ಎಂದು ಬಿಂಬಿಸಲಿದ್ದಾರೆ!
ಇದರ ಪರಿಣಾಮವೆಂದರೆ, ಹಿಂದುತ್ವವಾದಿ ಆರ್.ಎಸ್ಸೆಸ್ಸಿಗ ಮೋದಿ ಭಾರತದ ಮೂಲನಿವಾಸಿಗಳಾದಹಿಂದುಳಿದವರು, ಮತಾಂತರವಾದ ಮುಸ್ಲಿಂ, ಕ್ರೈಸ್ತರನ್ನು ಗುರಿಮಾಡುವ ಹಿಂಸಾಧಾರಿತ ಶೋಷಣೆಯ ಆಡಳಿತವನ್ನು ಹೇರಲಿದ್ದಾನೆ. ಈ ಎಲ್ಲಾ ಬಹುಜನ ವಿರೋಧಿ ಷಡ್ಯಂತ್ರದ ಹಿಂದಿರುವವರು ಮಧ್ಯೇಷಿಯಾ ಪ್ರಣೀತ ಸನಾತನವಾದಿ ಬ್ರಾಹ್ಮಣರು. 21 ನೇ ಶತಮಾನದ ಇಂಟರ್‍ನೆಟ್ ಯುಗದಲ್ಲೂ ಪ್ರತಿಶತ 5 ರಷ್ಟಿರುವ ಮೇಲ್ವರ್ಗದ ಪಟ್ಟಭದ್ರರುಮೋದಿಯಂಥ ಆರೆಸ್ಸೆಸ್ ಗುಲಾಮನಿಟ್ಟುಕೊಂಡು ಬಹುಜನವಿರೋಧಿ ಆಡಳಿತ ನೀಡುತ್ತಿರುವುದು ಈ ದೇಶದ ದುರಂತ, ಜಾಗತಿಕ ಅಪರಾಧ.
ಇಂಥ ಲಿಂಕುಗಳ ಸಿಕ್ಕಿನಲ್ಲಿ ಬಂಧಿಯಾಗಿರುವ ಮೋದಿ ಪರವಾಗಿ ಯಾಕೆ ಶ್ರೀಮಂತರು, ಪಟ್ಟಭದ್ರರು, ಆರೆಸೆಸ್ಸಿಗರು, ಅಂತರಾಷ್ರೀಯ ದರೋಡೆಕೋರರೆಲ್ಲಾ ವಕಾಲತ್ತು ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಯಾವ ತನಿಖೆ, ಸಂಶೋಧನೆ ಅಗತ್ಯವಿಲ್ಲಾ. ಆದರೆ, ಭಾರತೀಯರನ್ನುಮಂಕುಬೂದಿಯಲ್ಲಿ ಮೀಯಿಸಿ,ಮೋದಿಅಲೆ ಸೃಷ್ಟಿಸಿರುವ ಉಪಾಯಕಾರಿ ಲಾಭಬಡುಕರು ಮೋದಿಯಂಥವರನ್ನು ಬಳಸಿಕೊಂಡು ಜನತೆಯ ಮೇಲೆ ಹೊರೆಯ ಭಾರವನ್ನು ಹೆಚ್ಚಿಸಲಿದ್ದಾರೆ ಎನ್ನುವುದಕ್ಕೆ ಸಾಕ್ಷಿದೊರೆಯುವುದಕ್ಕೆ ಹೆಚ್ಚು ದಿವಸ ಕಾಯುವ ಅಗತ್ಯವಿಲ್ಲ. ಹಾಗಾಗಿ ಮೋದಿ, ಮೋದಿ ನೇತೃತ್ವದ ಸರ್ಕಾರಕ್ಕೆ ‘ಸಮಾಜಮುಖಿ’ಯ ವಿರೋಧ. ಕೋಮುವಾದಕ್ಕೆ ಬಲಿಯಾಗಿರುವ ಭಾರತದ ಯುವಕರು ಮತ್ತೆ ಮಂಡಲ್ ವರದಿಯ ವಿರೋಧಿ ಮಂಡೆಲೆಸ್ ಜನರಂತೆ ಗೋಚರಿಸತೊಡಗಿದ್ದಾರೆ. ಜನಸಾಮಾನ್ಯರ ಅಪೇಕ್ಷೆಗೆ ವಿರುದ್ಧವಾಗಿರುವ ಕೋಮುವಾದಿ ಬಿ.ಜೆ.ಪಿ.ಗಳಿಗೆ ಅವರ ನಾಯಕ ಆಧುನಿಕ ಶ್ರೀರಾಮನೆಂಬ ಮೋದಿಗೆ. ಧಿಕ್ಕಾರ, ಧಿಕ್ಕಾರ.ಚಲೇಜಾವ್ ಹಿಂದುತ್ವವಾದಿ.
ರಾಹುಲ್ ಕಾಂಗ್ರೆಸ್
ರಾಹುಲ್ ಒಂದರ್ಥದಲ್ಲಿ ಸೌಮ್ಯ-ಸಜ್ಜನ ಭಾರತೀಯ, ಶ್ರೀಮಂತ ಪರಿವಾರದ ಪ್ರತಿನಿಧಿ. ಆಕಸ್ಮಿಕ-ಅನಿವಾರ್ಯ ಆಯ್ಕೆಯಾಗಿ ಭಾರತದಂಥ ದೇಶದ ಪ್ರಧಾನಿಯಾಗಬಲ್ಲ ಎನ್ನುವ ಮಟ್ಟಕ್ಕೆ ಕಾಂಗ್ರೆಸ್ ಬಿಂಬಿಸುವ ಮೊದಲು, ರಾಹುಲ್ ಕೊಳಗೇರಿ, ಬುಡಕಟ್ಟುಗಳ ಗುಡ್ಡಗಾಡುಪ್ರದೇಶಗಳನ್ನೆಲ್ಲಾ ಸುತ್ತಾಡಿ ಸಮಸ್ಯೆ ಅರಿಯುವ ಪ್ರಯತ್ನ ಮಾಡಿದ್ದ.
ಆದರೆ, ಸೌಮ್ಯ,ಶ್ರೀಮಂತ ರಾಹುಲ್ ಬಡವರು ಶೋಷಿತರು, ಬುಡಕಟ್ಟುಗಳೊಂದಿಗೆ ಕುಳಿತಾಗ ಅವರಿಗೆಲ್ಲಾ ಈತ ತಮ್ಮವನೆನಿಸಲಿಲ್ಲ. ಅಮ್ಮ ಸೋನಿಯಾರಿಗೆ ಆರೋಗ್ಯ ತೊಂದರೆ, ಮಗ ಏನನ್ನಾದರೂ ಮಾಡಬಲ್ಲ ಎನ್ನುತ್ತಿರುವಾಗಲೇ ಕಾರ್ಪೊರೇಟ್ ಕುಳಗಳು ರಾಹುಲ್‍ರ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದರು. ಅದಕ್ಕೂ ವಿಶಿಷ್ಟ ಕಾರಣಗಳಿವೆ. ಕಾಂಗ್ರೆಸ್ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ಪ್ರಾರಂಭಿಸಿದರು, ಬಡ ರೈತ ಕಾರ್ಮಿಕರಿಗೆ ದಿನಕ್ಕೆ 250 ರೂಪಾಯಿಗಳ ಕೂಲಿ, ಜೊತೆಜೊತೆಗೆ ಆತನ ಆಸ್ತಿಯ ಕೆಲಸ ಆಗತೊಡಗಿತು.
ಮಾಹಿತಿ ಹಕ್ಕು, ಆರೋಗ್ಯ ಹಕು,್ಕ ಆಹಾರ ಭದ್ರತೆ ಬಗ್ಗೆ ಎಲ್ಲಾ ಮಾತನಾಡತೊಡಗಿದರು. ಶಾಲಾಮಕ್ಕಳು, ಅಲ್ಫಸಂಖ್ಯಾತರ ಮದುವೆಗಳಿಗೆ ಶಾದಿಭಾಗ್ಯ ಸೇರಿದಂತೆ ಆ ಭಾಗ್ಯ, ಈ ಭಾಗ್ಯ ಎಂದೆಲ್ಲಾ ಬಡವರ ಭಾಗ್ಯದ ಬಾಗಿಲು ತೆರೆಯತೊಡಗಿತು.
ಹೀಗೆ ಬಡವರು, ಶೋಷಿತರು, ಹಿಂದುಳಿದ ವರ್ಗ, ಅಲ್ಫ ಸಂಖ್ಯಾತರು ಎಂದಾಗಲೆಲ್ಲ ಚೆಡ್ಡಿಗಳ ವಿದೇಶಿ ವಿದ್ರೋಹಕ ಮನಸ್ಸು ಕೆಡತೊಡಗುತ್ತದೆ. ಹಿಂದುತ್ವದ ಹೆಸರಿನ ಆರ್.ಎಸ್.ಎಸ್. ವಿಹಿಂಪಗಳೆಲ್ಲಾ ಭಾರತದಲ್ಲಿ ಎಂದೂ ಬಡವರು, ಶೋಷಿತರು ದುರ್ಬಲವರ್ಗದವರ ಪರವೆಲ್ಲಾ ದುಡಿದದ್ದೇ ಇಲ್ಲ. ಎಟಲೀಸ್ಟ್ ಸೌಜನ್ಯಕ್ಕಾದರೂ ಮಿಡಿದಿದ್ದರೆ…. ಅವರನ್ನು ಸಹಿಸಿಕೊಳ್ಳಬಹುದಿತ್ತು.
ಈ ವಿದ್ರೋಹಕ ಆರ್.ಎಸ್.ಎಸ್. ಮನೋಭಾವದ ಪುರೋಹಿತಶಾಹಿ ಕ್ರಿಮಿಗಳಿಗೆ ಜನಕ್ಕಿಂತ ದನದ ಮೇಲೆ ಪ್ರೀತಿ.
ದೇಶದ ಜನತೆ, ಅವರ ಸುಖ ಶಾಂತಿಗಿಂತ ಇವರಿಗೆ ದೇವರು, ಧರ್ಮದ ಹೆಸರಿನ ರಾಜಕೀಯ, ಧಾರ್ಮಿಕ ವ್ಯಾಪಾರದ ಮೇಲೆ ಕಾಳಜಿ!. ಇಂಥಹ ಅನಿಷ್ಟ ಹಿಂದುತ್ವವಾದಿಗಳೆದುರು ಕಾಂಗ್ರೆಸ್ ದ್ರಾವಿಡ ಚಳವಳಿಯ ಡಿ.ಎಂ.ಕೆ. ಸಮಾಜವಾದಿ ಪಕ್ಷ, ಆರ್.ಜೆ.ಡಿ. ಸೇರಿದಂತೆ ಹಿಂದುತ್ವವಾದಿಗಳ ವಿರೋಧಿ ಪಾಳಯವನ್ನು ಕಾಂಗ್ರೆಸ್‍ಸೇರಿಸಿಕೊಂಡಿತು.
ಅವರು ಕಾಂಗ್ರೆಸ್ ಚರಿತ್ರೆ, ಇತಿಹಾಸ, ಮೀರಿಸುವಂತೆ ವರ್ತಿಸತೊಡಗಿದರು. ಇವರನ್ನೆಲ್ಲಾ ನಿಯಂತ್ರಿಸುವುದು ಕಷ್ಟಸಾಧ್ಯವಾಗಿರಲಿಲ್ಲ. ಆದರೆ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಇವನ್ನೆಲ್ಲಾ ಸಂಭಾಳಿಸಿದರು. ಅಮೇರಿಕಾ, ಇಂಗ್ಲೆಂಡ್‍ನಂಥ ಶ್ರೀಮಂತ ದೇಶಗಳೆ ಆರ್ಥಿಕ ಹಿಂಜರಿಕೆಯಿಂದ ಕಂಗಾಲಾದ ಸಮಯದಲ್ಲೂ ಸಿಂಗ್ ಸರ್ಕಾರ, ದೇಶದ ಆರ್ಥಿಕತೆಗಳನ್ನೆಲ್ಲಾ ಬ್ಯಾಲೆನ್ಸ್ ಮಾಡಿ(ತು)ದರು. ಲಾಟಿ ತಿರುಗಿಸುತ್ತಾ ದೇವರು, ಶ್ರೀಮಂತರನ್ನು ಕಾಯುವ ಪುರೋಹಿತಶಾಹಿ ದುಷ್ಟರು ಅಧಿಕಾರದ ಮೇಲೆ ಕಣ್ಣಿಟ್ಟೇ ಸೋನಿಯಾ, ರಾಹುಲ್, ದಿಗ್ವಿಜಯ್‍ಸಿಂಗ್, ಚಿದಂಬರಂ, ಮನಮೋಹನ್‍ಸಿಂಗ್ ಸೇರಿದಂತೆ ಕಾಂಗ್ರೆಸ್, ಅವರ ಅಂಗ ಪಕ್ಷಗಳ ವಿರುದ್ಧ ಹರಿ ಹಾಯ್ದರು. ಇದೇ ಸಮಯದಲ್ಲಿ ಅಣ್ಣಾ, ಕೇಜ್ರಿವಾಲಾಗಳು ಯು.ಪಿ.ಎ. ವಿರುದ್ಧ ತಿರುಗಿ ಬಿದ್ದರು. ಇದೇ ಸಂದರ್ಭ ಕಾಯುತ್ತಿದ್ದ ಬಿ.ಜೆ.ಪಿ. ತನ್ನ ಲಾಭಕೋರ ಕಾರ್ಪೋರೇಟ್ ಉದ್ಯಮಿಗಳನ್ನು ಕೇಜ್ರಿವಾಲಾ, ಕಾಂಗ್ರೆಸ್ ವಿರುದ್ಧ ಛೂಬಿಟ್ಟಿತು. ತನ್ನ ಕೈಗೊಂಬೆ ಮೋದಿಯನ್ನು ಐತಿಹಾಸಿಕ ಪುರುಷ! ಪವಾಡ ಪುರುಷ? ಎಂದೆಲ್ಲಾ ಬಿಂಬಿಸತೊಡಗಿತು.
ಹೀಗೆ ಮೋದಿಗೆ ಹೈಪ್ ನೀಡುವ ಹಿಂದೆ ಶ್ರೀಮಂಥ ಪಟ್ಟಭದ್ರರಾದ ಬಿ.ಜೆ.ಪಿ.ಹಿತೈಸಿ ಉದ್ಯಮಿಪತಿಗಳ ಸ್ವಾರ್ಥವಿತ್ತು. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಕಾಂಗ್ರೆಸ್‍ಗಿಂತ ತಮ್ಮ ಹಿತಾಸಕ್ತಿ ಕಾಪಾಡುವ ಬಿ.ಜೆ.ಪಿ. ಉದ್ಯಮಿ ಸ್ನೇಹಿ ಎನಿಸುತ್ತಲೇ ದೇಶದಾದ್ಯಂತ ಉತ್ಪ್ರೇಕ್ಷಿತ ಭಟ್ಟಂಗಿತನದ ಮೋದಿ ಭಜನೆ ಪ್ರಾರಂಭಿಸಿತು. ಬಿ.ಜೆ.ಪಿ.ಅದರ ಅಂಗಗಳಾದ ಹಿಂದೂ ಸಂಘಟನೆಗಳ ಶಕ್ತಿ-ಷಡ್ಯಂತ್ರಗಳೆಂದರೆ….
ಅವರುಯಾವಾಗಲೂ ‘ಸುಳ್ಳನ್ನೂ ಸತ್ಯ, ಸತ್ಯವನ್ನೂ ಸುಳು’್ಳ ಮಾಡುವುದರಲ್ಲಿ ನಿಸ್ಸಿಮರು. ಬಂಡವಾಳಶಾಹಿ ಪಟ್ಟಭದ್ರರ ಬೂಟುನೆಕ್ಕುವ ಮೋದಿ ರಾಮಾಯಣದ ಶ್ರೀರಾಮನಂತೆ ಮೇಲ್ವರ್ಗ, ಮೇಲ್ಜಾತಿ ಹಿತಾಸಕ್ತಿ ಕಾಪಾಡಬಲ್ಲ ಎನಿಸಿದ್ದೆ ಮೋದಿಪರ ಭಟ್ಟಂಗಿತನ ಪ್ರಾರಂಭವಾಯ್ತು. ಅನ್ನಭಾಗ್ಯ, ಕ್ಷೀರಭಾಗ್ಯ, ನರೆಗಾ ಫಲಾನುಭವಿಗಳು ಕೂಡಾ ಮೋದಿ ಪ್ರೇರಿತ ಬಿ.ಜೆ.ಪಿ. ಅಪಪ್ರಚಾರವನ್ನೇ ಸತ್ಯ ಎಂದು ನಂಬಿದರು. ಹೀಗೆಲ್ಲಾ ಆಗುವಲ್ಲಿ ಕಾಂಗ್ರೆಸ್‍ನ ವಿಫಲತೆ ಕೆಲಸ ಮಾಡಿದೆ. ಬಿ.ಜೆ.ಪಿ. ಸಂಘದ ಮಂಗಗಳು ಕಾಂಗ್ರೆಸ್ ಹೆಸರು ಕೆಡಿಸುತ್ತಿರುವಾಗ ಕಾಂಗ್ರೆಸ್ ಜನರನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡಬೇಕಿತ್ತು. ಆದರೆ, ಕಾಂಗ್ರೆಸ್‍ನವರ ಬಾಯಿ ತೆರೆಯುವುದೇ ಇಲ್ಲ.
‘ಕಳ್ಳನ ಬಾಯಿ ದೊಡ್ಡ’ ಎನ್ನುವಂತೆ ಹಿಂದುತ್ವವಾದಿ ಬಿ.ಜೆ.ಪಿ. ಕಳ್ಳರು ಅರಚುತ್ತಾ ತಮ್ಮ ಠಕ್ಕತನವನ್ನು ಸಾಬೀತು ಮಾಡಿದರು. ಆದರೆ ಜನಸಾಮಾನ್ಯರು ಈ ಭಯಂಕರ ಪ್ರಚಾರದ ಹಿಂದಿನ ಮರ್ಮ ಅರಿಯಲಿಲ್ಲ. ಪಶ್ಚಿಮ ಬಂಗಾಳವನ್ನು ಎಳೆಂಟುಬಾರಿ, ತ್ರಿಪುರಾವನ್ನು ಐದಾರು ಬಾರಿ ಆಳಿದ ಸಜ್ಜನ, ಸಾತ್ವಿಕ ಕಮ್ಯುನಿಷ್ಟ್ ಮುಖಂಡರಿಗೆ ಸಿಗದ ಪ್ರಚಾರ, ಹೈಪ್ ಶ್ರೀಮಂತರ ಭಟ್ಟಂಗಿ, ಅರಚುಮಾರಿ ಮೋದಿಗ್ಯಾಕೆ ಸಿಗುತ್ತೆ ಎಂದು ಯೋಚಿಸಲಿಲ್ಲ. ಗುಜರಾತ್ ಎಲ್ಲಿದೆ, ಹೇಗಿದೆ ಮೋದಿಯನ್ನು ಕುಣಿಸುತ್ತಿರುವ ಜಾಗತೀಕರಣದ ವಿಷ ಬಂಡವಾಳಶಾಹಿತನ ಎಷ್ಟು ಅಪಾಯಕಾರಿ? ಎಂದು ಯೋಚಿಸದ ಜನಸಾಮಾನ್ಯರು ಕಾರ್ಪೊರೇಟ್ ಸೃಷ್ಟಿ ಮೋದಿ ಅಲೆಯ ಮಂಕುಬೂದಿ ಎರಚಿಕೊಂಡರು.
ಈಗ ಶ್ರೀಮಂತ ಭಾರತವನ್ನು ಶ್ರೀಮಂತರು, ಪಟ್ಟಭದ್ರರ ಕಾವಲುಗಾರ ಗುಲಾಮ ಮೋದಿ ಹಿಂದುತ್ವದ ಹೆಸರಿನಲ್ಲಿ ಆಳುತ್ತಾನಂತೆ! ಕರ್ನಾಟಕ, ಗುಜರಾತ್‍ಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಂಘಪರಿವಾರದ ಕೊಳಕು ಕ್ರಿಮಿಗಳು ತಿಂದುಂಡು ದುಂಡಗಾಗಿದ್ದಾರೆ. ಈಗ ರಾಷ್ಟ್ರಮಟ್ಟದಲ್ಲಿ ಈ ದುಷ್ಟರಿಗೆ ಮನ್ನಣೆ. ಕೋಮುವಾದಿ ಹಿಂಸ್ರಮೃಗ ಮೋದಿ ಶ್ರೀಮಂತ ಪಟ್ಟಭದ್ರ ಉದ್ಯಮಿಗಳ ಕೈಗೊಂಬೆ. ಇಂಥವರನ್ನು ಕೋಡಂಗಿ ಮಾಡಲೆಂದೇ ಜಾಗತೀಕರಣದ ಲಾಭಕೋರ ದೊಡ್ಡಣ್ಣಂದಿರು ಬಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಬ್ರಿಟಿಷರ ಅವಧಿಯಲ್ಲಿ ಲಾಭಕೋರರಾಗಿ ಕುಖ್ಯಾತಿಗಳಿಸಿದ ಹಿಂದುತ್ವವಾದಿ ವಿಷ ಜಂತುಗಳಿಗೆ ಈಗ ತಮ್ಮ ವಂಶಸ್ಥ ದೊಡ್ಡಣ್ಣಂದಿರನ್ನು ಖುಷಿಪಡಿಸುವ ತುರಿಕೆ ಪ್ರಾರಂಭವಾಗಬಹುದು.
ಮೋದಿ ಅಲೆಯಲ್ಲಿ ತೇಲಿದ ಭ್ರಮೆಯ ಮಾನಗೆಟ್ಟ ಮತದಾರರಿಗೆ ಈ ದೇಶ, ದೇಶದ ಚರಿತ್ರೆ, ಇತಿಹಾಸ, ಹಿಂದುತ್ವವಾದಿಗಳ ಮಿರ್‍ಸಾದಕ್‍ತನ ಇವೆಲ್ಲಾ ಅರ್ಥವಾಗಿದ್ದರೆ ಮೋದಿಯ ಮುಖವಾಡ ಮುಂದಿಟ್ಟು ಬಿ.ಜೆ.ಪಿ. ಅಧಿಕಾರಕ್ಕೆ ಬರುತ್ತಿರಲಿಲ್ಲ. ಮಾಡಿದ್ದುಣ್ಣೋ ಮಹರಾಯ ಅಕಾಲದಲ್ಲಿ ಕಾಂಗ್ರೆಸ್ ಸೇರಿದಂತೆ ಜಾತ್ಯಾತೀತ ಪಕ್ಷಗಳೆಲ್ಲಾ ತಮ್ಮ ತಪ್ಪಿಗೆ ಬೆಲೆ ತೆತ್ತಿವೆ. ಮತ್ತೆ ಯಾವ ಬೆಲೆ ತೆತ್ತಾದರೂ ಕೋಮುವಾದಿ, ಧರ್ಮಾಂಧ ಬಿ.ಜೆ.ಪಿ.ಗಳನ್ನು ಅಧಿಕಾರದಿಂದ ಕಿತ್ತೆಸೆಯದಿದ್ದರೆ ಭಾರತ ಮತ್ತೆ ತನ್ನ ದಾರಿದ್ರ್ಯ ದ ದಾರಿ ಕಂಡುಕೊಳ್ಳುವಲ್ಲಿ ಎರಡು ಮಾತಿಲ್ಲ.ಮೂರ್ಖಮತದಾರನಿಗೂ ಧಿಕ್ಕಾರ, ಕಮಲಪಡೆಗೂ ಧಿಕ್ಕಾರ.
ಕನ್ನೇಶ್ ಕೋಲಶಿರ್ಸಿ-9740598884 (25-05-14)

ರಾಜ್ಯದಲ್ಲಿ 56 ಕ್ಕೇರಿದ ಸೋಂಕಿತರ ಸಂಖ್ಯೆ, ಭಟ್ಕಳದ ಯುವಕನಲ್ಲಿ ಕೊರೋನಾ ಪತ್ತೆ
ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವಂತೆ ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಳಳದ ವಿದೇಶದಿಂದ ಮರಳಿದ ಯುವಕನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಹೊಸ ಪ್ರಕರಣದೊಂದಿಗೆ ರಾಜ್ಯದಲ್ಲಿ ಕರೋನಾ ಸೋಕಿತರ ಸಂಖ್ಯೆ 56 ಕ್ಕೇರಿದಂತಾಗಿದೆ. ಒಂದುದಿವಸದಲ್ಲಿ ಮೂರು ಹೊಸ ಪ್ರಕರಣದಿಂದಾಗಿ ಗುರುವಾರ 53 ರಷ್ಟಿದ್ದ ಕರೋನಾ ಸೋಕಿತರ ಸಂಖ್ಯೆ ಇಂದು 56 ಕ್ಕೇರಿದೆ. ಭಟ್ಳಳದ ಮುಂಡಳ್ಳಿ ಭಾಗದಲ್ಲಿ ಸುರಕ್ಷಣಾ ಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿಯಮಗಳ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

ಭಾರತ ಲಾಕ್‍ಔಟ್ ಹಿನ್ನೆಲೆಯಲ್ಲಿ ನಿನ್ನೆ 1.70 ಲಕ್ಷ ಕೋಟಿ ಯೋಜನೆಗಳನ್ನು ಪ್ರಕಟಿಸಿದ ಕೇಂದ್ರ ಇಂದು ದೇಶದ ಬ್ಯಾಂಕಿಂಗ್ ಕ್ಷೇತ್ರ ಮೂರು ತಿಂಗಳುಗಳ ವರೆಗೆ ಸಾಲವಸೂಲಾತಿ, ತಿಂಗಳ ಕಂತು ತುಂಬುವಿಕೆಗಳಿಗೆ ವಿನಾಯತಿ ನೀಡಲು ಆರ್.ಬಿ.ಐ. ಮೂಲಕ ಆದೇಶಿಸಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗ್ರಾಮ ಪಂಚಾಯತ್‌ ಗಳಿಗೆ ಖರ್ಗೆ ನಿರ್ಧೇಶನ ಏನು ಗೊತ್ತೆ?

ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ...

ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್‌

ಕನ್ನಡ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್‌ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ,...

ವಿಪರೀತ ಮಳೆ ವಾಸ್ತವ್ಯ & ನಿರ್ಮಾಣ ಹಂತದ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿ

ನಿರ್ಮಾಣ ಹಂತದ ಆಶ್ರಯ ಮನೆ ಮತ್ತು ವಾಸ್ತವ್ಯದ ಕಚ್ಚಾ ಮನೆ ಸೇರಿ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿಯಾಗಿರುವ ದುರ್ಘಟನೆ ಸಿದ್ಧಾಪುರ ತಾಲೂಕು ಕಂಸಲೆಯಿಂದ...

ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!

ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.ಸಿದ್ದಾಪುರ:ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *