ಕರೋನಾ ಮೂರನೇ ಹಂತ-
ದೇಶದಲ್ಲಿ ಸಾವಿರ ಸಮೀಪಿಸಿದ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ಕಳೆದ ಮೂರುದಿವಸಗಳಲ್ಲಿ ಮೂವತ್ತು ಜನರಲ್ಲಿ ಸೋಂಕು ಧೃಡ,
ಉತ್ತರ ಕನ್ನಡದಲ್ಲಿ ಇಂದು ಮೂರು ಹೊಸ ಪ್ರಕರಣಗಳು ಪತ್ತೆ!
ಸರ್ಕಾರ, ಜನರ ಸಾರ್ವಜನಿಕ, ವೈಯಕ್ತಿಕ ಕಾಳಜಿಗಳ ನಡುವೆ ವಿಶ್ವದಲ್ಲಿ ಕರೋನಾ ಸೋಂಕಿತರ ಸಂಖ್ಯೆ, ಕರೋನಾ ಸಾವುಗಳ ಸಂಖ್ಯೆ ಏರುತ್ತಿದೆ.
ಭಾರತದಲ್ಲಿ ಈ ವಾರದ ಕೊನೆಯ ದಿನವಾದ ಇಂದು ಕರೋನಾ ಸೋಂಕಿತರ ಸಂಖ್ಯೆ ಸಾವಿರ ಸಮೀಪಿಸಿದೆ. ಕರ್ನಾಟಕದಲ್ಲಿ ಈವರೆಗೆ ಕರೋನಾ ಸೋಕಿತರ ಸಂಖ್ಯೆ 75 ದಾಟಿದ್ದು ಕಳೆದ ವಾರ 25 ರಷ್ಟಿದ್ದ ಕರೋನಾ ಸೋಂಕಿತರ ಸಂಖ್ಯೆ ಕಳೆದ ನಾಲ್ಕು ದಿವಸಗಳಲ್ಲಿ ಸರಾಸರಿ ಹತ್ತರ ಸಂಖ್ಯೆಯಲ್ಲಿ ವೃದ್ಧಿಯಾಗಿದ್ದು ಮೂರನೇ ಹಂತದಲ್ಲಿ ರಾಜ್ಯದ ಕರೋನಾ ಸೋಂಕಿತರ ಸಂಖ್ಯೆ ನೂರರ ಬಳಿ ಧಾವಿಸಿದ್ದರೆ ಭಾರತದಲ್ಲಿ ಇದರ ನಾಗಾಲೋಟ ಸಾವಿರ ಸಮೀಪಿಸಿದಂತಾಗಿದೆ.
ಸ್ವಯಂ ನಿಯಂತ್ರಣ, ಗೃಹಬಂಧನ, ವ್ಯಾಪಕ ಸುರಕ್ಷತಾ ಕ್ರಮಗಳನ್ನು ಅವಲಂಬಿಸದಿದ್ದರೆ ಈ ಸಂಖ್ಯೆ ಪ್ರತಿವಾರ ನಾಲ್ಕುಪಟ್ಟು ಹೆಚ್ಚುವ ಅಪಾಯವಿದೆ. ವಿಶ್ವದಲ್ಲಿ ಕರೋನಾ ಸೊಂೀಕಿತರು 4ಲಕ್ಷ, ಸಾವುಗಳ ಸಂಖ್ಯೆ 40 ಸಾವಿರ ಅನುಪಾತದಲ್ಲಿರುವುದು ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯ,ದೇಶ,ವಿಶ್ವದಲ್ಲಿ ಕರೋನಾ ಸೋಂಕಿತರು ಮತ್ತು ಸಾವುಗಳ ಸಂಖ್ಯೆ 1:10, ಅಥವಾ 10, 100 ಅನುಪಾತದಲ್ಲಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 7. ಇವರಲ್ಲಿ ಕೆಲವರನ್ನು ನೌಕಾನೆಲೆ, ಆಯ್.ಎನ್.ಎಸ್. ಪತಂಜಲಿ ಆಸ್ಫತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂರುಜನರು ಅಪಾಯದ ಹಂತದಿಂದ ಮುಕ್ತರಾಗಿದ್ದಾರೆ ಎನ್ನಲಾಗಿದೆ.
ಇಂಥ ವಿಕೋಪದ ಸಂದರ್ಭದಲ್ಲಿ ಕೂಡಾ ದೇಶದ ಜನತೆ ಸರ್ಕಾರ, ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿ ಮನೆಯಿಂದ ಹೊರಗಿರುತ್ತಿರುವುದು ಅಪಾಯಕ್ಕೆ ಮುನ್ಸೂಚನೆಯಂತಿದೆ.