

ಕಾರವಾರ,ಮಾ.28-
(ಸಮಾಜಮುಖಿ ನ್ಯೂಸ್)
ವಿನೂತನ ಕೆಲಸಗಳಿಂದ ಹೆಸರುಮಾಡುತ್ತಿರುವ ಉತ್ತರಕನ್ನಡ ಜಿಲ್ಲಾಡಳಿತ ರವಿವಾರದಿಂದ ಪಟ್ಟಣ ವ್ಯಾಪ್ತಿಯಲ್ಲಿ ಪೂರೈಸುತ್ತಿರುವ ಅಗತ್ಯ ವಸ್ತುಗಳ ವಿತರಣೆ ರೀತಿಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವುದಾಗಿ ಪ್ರಕಟಿಸಿದೆ.
ಇಂದು ಕಾರವಾರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲೆಯ ಹಿರಿಯ ಅಧಿಕಾರಿಗಳು ಈ ವಿಷಯ ಪ್ರಕಟಿಸಿದರು.
ಸಾರ್ವಜನಿಕರ ಬೇಡಿಕೆ ಆಧರಿಸಿ, ಅಗತ್ಯ ವಸ್ತುಗಳನ್ನು ಪೂರೈಸುವ ಮಾದರಿಯನ್ನು ಗ್ರಾಮೀಣ ಪ್ರದೇಶದಲ್ಲೂ ವಿಸ್ತರಿಸುತ್ತೇವೆ. ಹೊರದೇಶ, ಹೊರ ಊರುಗಳಿಂದ ಬಂದ ಜನರ ಸಮೀಕ್ಷೆ, ಚಿಕಿತ್ಸೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಮನೆ ಮನೆಗೆ ಭೇಟಿನೀಡಿ ಮಾಹಿತಿ ಸಂಗ್ರಹಣೆ ಮಾಡುವ ಜೊತೆಗೆ ಅವರಿಗೆ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಸೇವೆಯನ್ನೂ ಒದಗಿಸುತ್ತೇವೆ.
ಈ ಕಾರ್ಯಕ್ಕೆ ಸ್ಥಳಿಯ ಆಡಳಿತದ ಅಧಿಕಾರಿಗಳು, ಪಂಚಾಯತ್‍ರಾಜ್ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯನ್ನು ಬಳಸಿಕೊಳ್ಳುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ಕುಮಾರ ಕೆ. ವಿವರಿಸಿದರು .


ಕರೋನಾ ಮೂರನೇ ಹಂತ- ದೇಶದಲ್ಲಿ ಸಾವಿರ ಸಮೀಪಿಸಿದ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ಕಳೆದ ಮೂರುದಿವಸಗಳಲ್ಲಿ ಮೂವತ್ತು ಜನರಲ್ಲಿ ಸೋಂಕು ಧೃಡ,
ಉತ್ತರ ಕನ್ನಡದಲ್ಲಿ ಇಂದು ಮೂರು ಹೊಸ ಪ್ರಕರಣಗಳು ಪತ್ತೆ!
ಸರ್ಕಾರ, ಜನರ ಸಾರ್ವಜನಿಕ, ವೈಯಕ್ತಿಕ ಕಾಳಜಿಗಳ ನಡುವೆ ವಿಶ್ವದಲ್ಲಿ ಕರೋನಾ ಸೋಂಕಿತರ ಸಂಖ್ಯೆ, ಕರೋನಾ ಸಾವುಗಳ ಸಂಖ್ಯೆ ಏರುತ್ತಿದೆ.
