ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !
ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು ಹಸಿ ಸುಳ್ಳೆಂದು !
ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗೂ ಮಿಗಿಲಾದಯಾವುದೆ “ಧರ್ಮ”ವಿಲ್ಲವೆಂದು!
ನಾ ಸುಡುವ ಬೆಂಕಿಯಾಗಿದ್ದರೆಕಲಿಯುಗದ ಮುಸುಡಿಗೆಕಪ್ಪುಮಸಿಯಂತಂಟಿರುವಲಿಂಗ ಭೇದದ ಮುಸುಕಹಾಗೆ ಕಿತ್ತರವಿಬಿಡುತಿದ್ದೆ ಸುಟ್ಟು ಬೂದಿ ಮಾಡಲೆಂದು
ನಾ ಉರಿವ ದೀಪವಾಗಿದ್ದರೆಒಮ್ಮೆಯೂ ಆರದೆಎಲ್ಲರ ಎದೆಯೊಳಗೆ ಪ್ರಕಾಶ ಮಾನವಾಗಿಉರಿದುಬಿಡುತಿದ್ದೆಪ್ರೀತಿಯ ಬೆಳಕ ಶಾಶ್ವತವಾಗಿ ಹಂಚಲೆಂದು
ನಾ ಅಳುವ ಮಗುವಾಗಿದ್ದರೆಬೆಳವಣಿಗೆಯ ದಿಕ್ಕರಿಸಿಜೋರಾಗಿ ಅಳುತ ಖುಷಿಯ ಪಡುತತಾಯ್ಮಡಿಲಲಿ ಬೆಚ್ಚನೆ ಮಲಗಿಬಿಡುತಿದ್ದೆಮಲಿನವಾಗದೆಮಗುವಾಗಿಯೆ ಉಳಿಯಲೆಂದು ಮೊ ದಲು ಮನುಜನಾಗಲೆಂದು
-ಮನುಪುರ
ಜುಗಾರಿಕ್ರಾಸ್ ಮತ್ತು ಕೋರೋನ.
ಜುಗಾರಿಕ್ರಾಸ್ ……ಮೈಮನಗಳನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡು ತನ್ನನ್ನು ತಾನೇ ಓದಿಸಿಕೊಂಡು ಹೋಗುವಂತ ಕಾದಂಬರಿ .ಅದರಲ್ಲೂ ಮಧ್ಯರಾತ್ರಿಯ ನೀರವತೆಯಲ್ಲಿ ಜುಗಾರಿಕ್ರಾಸ್ನ್ ಕೌತುಕದೊಳಗೆ ನುಸುಳುವುದು ನಿಜಕ್ಕೂ ಮೈ ಜುಮ್ಮೆನ್ನಿಸುವ ಅನುಭವ.ಯಾವುದೇ ಪಾತ್ರವನ್ನು ,ಘಟನೆಯನ್ನು,ಸನ್ನಿವೇಶವನ್ನು,ಅತ್ಯಾಕರ್ಷಕ ವಾಗಿ ರೋಚಕವಾಗಿ ನಮ್ಮ ಮನ ಮುಟ್ಟುವಂತೆ , ನಮ್ಮದೇ ಅನುಭವವೇ ಎನ್ನುವಂತೆ ಕಟ್ಟಿಕೊಡುವುದು ಬಹುಶಃ ತೇಜಸ್ವಿಯವರಂತ ಮಹಾನ್ ಚೇತನದಿಂದ ಮಾತ್ರ ಸಾಧ್ಯ ಎನಿಸುತ್ತದೆ.
ಫಾರೆಸ್ಟರ್ ನ ಲಂಚಗುಳಿತನ ಹೂ ಮಾರುವ ಹುಡುಗಿಯ ಸಹಜ ಮುಗ್ಧತೆ , ಸಮಾಜದ ಕ್ರೌರ್ಯ ,ಸುರೇಶ ಮತ್ತು ಗೌರಿಯ ಹುಚ್ಚು ಮನಸ್ಥಿತಿಗಳು ,ಶಾಸ್ತ್ರಿ, ಕುಟ್ಟಿ ,ದೌಲತ್ ರಾಮ್ ನಂತ ಕಳ್ಳರು , ರಾಜಪ್ಪನಂತ ಸ್ನೇಹಿತ , ಕುಂಟರಾಂ ಮತ್ತು ಶೇಷಪ್ಪ ನಂತ ಆಪದ್ಬಾಂದವರು, ಕ್ರಾಂತಿಕಾರಿ ಗಂಗೂಲಿ ಇನ್ನಿತರರ ಜೊತೆ ,ಗುರುರಾಜ ಕವಿಯ ದ್ವಿಮುಖ ಸಂದಾನ ಕಾವ್ಯದೊಳಗೆ ಕಳೆದುಹೋದ ಆ ರತ್ನಮೂಲ ಪದದಂತೆ ನಾವೂ ಸಹ ಜುಗಾರಿಕ್ರಾಸ್ ನ ಮಾಯಾಬಜಾರ್ ನಲ್ಲಿ ಕಳೆದು ಹೋಗಿಬಿಡುತ್ತೇವೆ.
ಗೌರಿ ಮತ್ತು ಸುರೇಶ ಜುಗಾರಿ ಕ್ರಾಸ್ ನ ಕುತೂಹಲಕ್ಕೆ ಸಿಕ್ಕಂತೆ ನಾವು ನೀವುಗಳು ಸಹ ಇಂದು corona ಎಂಬ ಮಹಾಮಾರಿ ಕುತೂಹಲಕ್ಕೆ ಬಲಿಯಾಗುತಿ ದ್ದೇವೆ . ಕುಟ್ಟಿ ದೌಲಟ್ ರಾಮ್ ನಂತೆ ಹೊರದೇಶದಿಂದ ಬಂದವರು ನಮ್ಮನ್ನು ಆ ಸರಪಳಿಯೊಳಗೆ ನಮಗೇ ಅರಿವಿಲ್ಲದಂತೆ ಸಿಲುಕಿಸಿ ಬಿಟ್ಟಿದ್ದಾರೆ. corona ಎಂಬ ಸುಪಾರಿ ಕಿಲ್ಲರ್ ಯಾಮಾರಿಸಿಇಲ್ಲಿ ನಮಗೆ ನೆರವಾಗಲು ಯಾವ ಕುಂಟರಾಮ ಯಾವ ಶೇಷಪ್ಪ ನು ಬರಲಾರ.
ಗೌರಿ ಮತ್ತು ಸುರೇಶ ಚಲಿಸುತ್ತಿರುವ ರೈಲಿನಿಂದ ಸುರಂಗದೊಳಗೆ ನೆಗೆದು ಜೀವ ಉಳಿಸಿ ಕೊಂಡಂತೆ ಇಂದು ನಾವು ಚಲಿಸುತ್ತಿರುವ ಬದುಕಿನಿಂದ ಮನೆಯೊಳಗೆ ನೆಗೆದು ಜೀವ ಉಳಿಸಿ ಕೊಳ್ಳಬೇಕಿದೆ. ಸುರೇಶ ತನ್ನ ಉಳಿವಿಗಾಗಿ ತನ್ನ ಸ್ನೇಹಿತ ರಾಜಪ್ಪನನ್ನು ಅನುಮಾನಿಸುವಂತೆ ಈ corona ದೆಸೆಯಿಂದ ನಾವಿಂದು ನೆಂಟರನ್ನು ಸ್ನೇಹಿತರನ್ನು ಅನುಮಾನಿಸಿ ದೂರ ಉಳಿಯ ಬೇಕಿದೆ .ಹಣ ಐಶಾರಾಮ್ಯದ ಅಮಲಿಂದೆ ಓಡುತಿದ್ದ ನಮಗೆ corona ದಂತ ಕಿಲ್ಲರ್ ಗಳು ಬೆನ್ನತ್ತಿ ಅವುಗಳ ಬಗ್ಗೆ ಇದ್ದ ವ್ಯಾಮೋಹವನ್ನು ಒದ್ದೋಡಿಸಿ ಬಿಟ್ಟಿವೆ . ಗೌರಿ ಮತ್ತು ಸುರೇಶನಂತೆ ಈ ಎಲ್ಲಾ ಗೊಂದಲಗಳಿಂದ ಹೊರಬಂದು ಜೀವ ಉಳಿದರೆ ಸಾಕು ಎನ್ನುವಂತಾಗಿದೆ.
ಸುರೇಶ ಮತ್ತು ಗೌರಿ ತಮಗೆ ತಿಳಿಯದೆ ಮಾದಕ ಪದಾರ್ಥ ಸಾಗಿಸಿದಂತೆ ಇಂದು ಎಷ್ಟೋ ಮಂದಿ ತಮಗೆ ಅರಿವಿಲ್ಲದೆ corona ವೈರಸ್ ಸಾಗಿಸುತ್ತಿದ್ದಾರೆ.ತಿಳಿದೋ ತಿಳಿಯದೆಯೋ ದೇವಮ್ಮ ನ ಗಂಡನಂತೆ , ಕುಂಟಾರಾಮ ನಂತೆ corona ಎಂಬ ಕೆಂಪು ಹರಳ ಮೋಹಕ್ಕೆ ಸಿಲುಕಿ ಕಣ್ಮರೆ ಯಾಗುತಿದ್ದಾರೆ. ಮೇದರಹಳ್ಳಿಯ ಬಿದಿರು ತೆನೆಗಟ್ಟಿ ನಾಶವಾಗಿದ್ದು ಸ್ವಾಭಾವಿಕವಾದರೆ ಇಂದುನಾವು ನಮ್ಮ ಅರಿವು ಗೇಡಿತನದಿಂದ ನಾಶವಾಗುವ ಹಂತ ತಲುಪಿದ್ದೇವೆ .ಬಿದಿರಿನ ಕೆಳಗೆ ಉದುರಿ ಬಿದ್ದಿದ್ದು ರಾಶಿ ರಾಶಿ ತೆನೆಯಷ್ಟೆ ಆದರೆ ಶೇಶಪ್ಪನ ಕನ್ನಡಿಯಲ್ಲೇಕೊ ರಾಶಿ ರಾಶಿ ಹೆಣಗಳು ಕಾಣುತ್ತಿವೆ .ಯಾವುದೋ ವಂಚನೆಯ ವ್ಯೂಹದೊಳಗೆ ಸಿಲುಕಿ ಬಿಟ್ಟಂತೆ ಮನಸು ಕಸಿವಿಸಿ ಗೊಳ್ಳುತ್ತಿದೆ . ನಮ್ಮ ಎಚ್ಚರ ದಲ್ಲಿ ನಾವಿರೋಣ .ಈ ಬದುಕೆಂಬ ಜುಗಾರಿ ಕ್ರಾಸ್ ನಲ್ಲಿ ನಮ್ಮ ಜೀವವೆಂಬ ಏಲಕ್ಕಿಗು ಒಳ್ಳೆಯ ಬೆಲೆ ಸಿಗಲಿ ಹಾಗೂ ಯಾವ ಕುತಂತ್ರವೂ ಇರದೆ ನಮ್ಮ ದುಡಿಮೆ ನಮ್ಮ ಕೈ ಸೇರಲಿ …..ಕ್ಯಾಪ್ಟನ್ ಖುದ್ದುಸನ ಘಾಟಿ ಎಕ್ಸ್ ಪ್ರೆಸ್ ನಮಗಾಗಿ ಕಾದಿರುತ್ತದೆ.
-ಮನು ಪುರ