

ಸಿದ್ದಾಪುರ
ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ತಂಗಾರಮನೆ ಅಡಕೆ ತೋಟದ ಅರಣ್ಯದ ಸಮೀಪ ಕಳೆದ ಹತ್ತು ದಿನದಿಂದ ಅಸ್ವಸ್ಥ ಗೊಂಡು ಓಡಾಡಲಾಗದೇ ನರಳಾಡುತ್ತಿದ್ದ ಕಾಡುಕೋಣ ಶನಿವಾರ ಸಂಜೆ ಸಾವನ್ನಪ್ಪಿದೆ.
ಮೂರು ವರ್ಷದ ಕಾಡುಕೋಣ ಇದಾಗಿದ್ದು ಇದರ ಮುಂದಿನ ಕಾಲು ಹೇಗೋ ಮುರಿದಿದ್ದು ಇದರಿಂದ ಓಡಾಡುವುದಕ್ಕೆ ಆಗದೇ ನರಳಾಡುತ್ತಿತ್ತು. ಸಿದ್ದಾಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಭಾನುವಾರ ಮರಣೋತ್ತರ ಪರೀಕ್ಷೆನಡೆಸಿದರು.
ನಂತರ ಎಸಿಎಫ್ ರಘು ಅವರ ಸಮಕ್ಷಮದಲ್ಲಿ ಅರಣ್ಯ ಇಲಾಖೆಯ ಕಾನೂನಿನಂತೆ ಕಾಡುಕೋಣವನ್ನು ಸುಡಲಾಯಿತು.ಈ ಸಂದರ್ಭದಲ್ಲಿ ಜಾನ್ಮನೆ ಆರ್‍ಎಫ್‍ಒ ಪವಿತ್ರಾ, ಉಪವಲಯ ಅರಣ್ಯಾಧಿಕಾರಿ ಮಹ್ಮದ್ ಅಸ್ಪಕ್ ಹಾಗೂ ಸಿಬ್ಬಂದಿಗಳು, ಸ್ಥಳೀಯರಿದ್ದರು.


ಸಿದ್ದಾಪುರ ತಾಲೂಕಿನ ಭುವನಗಿರಿ ಭುವನೇಶ್ವರಿ ಸನ್ನಿಧಿ ದಯಲ್ಲಿ ದೇವಾಲಯದ ಆಡಳಿತ ಸಮಿತಿಯವರ ತೀರ್ಮಾನದಂತೆ ದೇವಸ್ಥಾನದ ಪ್ರಧಾನ ಅರ್ಚಕ ವೇ. ಶ್ರೀಧರ ಭಟ್ಟ ಮುತ್ತಿಗೆ ಅವರು ಕರೊನಾ ವೈರಸ್ ಮಹಾಮಾರಿ ಎಲ್ಲ ಕಡೆ ಹರಡುತ್ತಿರುವುದರಿಂದ ಅದರ ನಿವಾರಣೆಗಾಗಿ ಹಾಗೂ ಆಯುರಾರೋಗ್ಯ ಭಾಗ್ಯ ಸಂಕಲ್ಪಿಸಿ ಸಪ್ತಶತಿ ಪಾರಾಯಣ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
