

ಶಿಶು ಮತ್ತು ಮಹಿಳೆಯರಿಗೆ ಮನೆಗೇ ಸೌಲಭ್ಯ, ಬಿಸಿ ಊಟದ ಅಕ್ಕಿ ತರಲು ವಿದ್ಯಾರ್ಥಿಗಳೇಕೆ ಶಾಲೆಗೆ ಹೋಗಬೇಕು?
ರಾಜ್ಯ ಮತ್ತು ದೇಶದಲ್ಲಿ ಶಿಸುಗಳು ಮತ್ತು ಮಹಿಳೆಯರಿಗೆ ಆಹಾರ ಪೂರೈಸುವ ಅಂಗನವಾಡಿಗಳ ಅಡುಗೆ ವ್ಯವಸ್ಥೆ ನಿಲ್ಲಿಸಿ ಫಲಾನುಭವಿಗಳ ಮನೆಗೆ ಆಹಾರ ಸಾಮಗ್ರಿ ಒದಿಸುವ ಸರ್ಕಾರಗಳ ಹೊಸ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.
ಬಹಳ ವರ್ಷಗಳಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ಮಕ್ಕಳಿಗೆ,ಮಹಿಳೆಯರಿಗೆ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು ಆದರೆ ಇದೇ ವರ್ಷದಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಕೆ ನಿಲ್ಲಿಸಿ, ಆಹಾರ ಸಾಮಗ್ರಿಗಳನ್ನು ನೇರವಾಗಿ ಮಹಿಳೆಯರು, ಮಕ್ಕಳಿಗೆ ತಲುಪಿಸುವ ವ್ಯವಸ್ಥೆಯನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.
ಅಂಗನವಾಡಿಗಳಲ್ಲಿ ಆಹಾರ ತಯಾರಿಕೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಪೌಷ್ಠಿಕ ಆಹಾರ ನೀಡಿಕೆ ಸರ್ಕಾರದ ಮೂಲಭೂತ ಕರ್ತವ್ಯ ಆದರೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ನೆಗಡಿ ಬಂದಾಗ ಮೂಗನ್ನೇ ಕೊಯ್ದುಕೊಳ್ಳುವ ಅವಿವೇಕದ ಕ್ರಮ ಸರ್ಕಾರಗಳಿಂದ ಆಗುತ್ತಿರುವ ಬಗ್ಗೆ ಕಮ್ಯುನಿಷ್ಟ್ ಪಕ್ಷಗಳ ಕಾರ್ಮಿಕ ಸಂಘಟನೆಗಳು ತೀವೃ ವಿರೋಧ ವ್ಯಕ್ತಪಡಿಸಿವೆ. ಈ ವಿರೋಧದ ನಡುವೆಯೂ ಸರ್ಕಾರ ಮಕ್ಕಳು, ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಿಂದಲೇ ನೇರ ಆಹಾರ ಸಾಮಗ್ರಿ ಒದಿಸುವ ಕಾರ್ಯಕ್ರಮ ಮುಂದುವರಿದಿದೆ.
ಅಕ್ಕಿ ತರಲು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕೆ?
ಕರೋನಾ ಭಯ, ಇಂಡಿಯಾ ಲಾಕ್‍ಔಟ್ ಗಳ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ರಜೆ, ಬಿಸಿಯೂಟದ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಈ ರಜೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರೈಸುತಿದ್ದ ಬಿಸಿಯೂಟದ ಅಕ್ಕಿಯನ್ನು ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸಲು ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಆದರೆ ವಿದ್ಯಾರ್ಥಿಗಳನ್ನು, ಅವರ ಪಾಲಕರನ್ನು ಶಾಲೆಗೆ ಕರೆಸಿ ಅಕ್ಕಿ ನೀಡುವುದರಿಂದ ಸಾಮಾಜಿಕ ಅಂತರ, ಲಾಕ್ ಔಟ್ ಉಲ್ಲಂಗಘನೆಯಾಗುತ್ತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕೆಲವರು ಲಾಕ್‍ಔಟ್ ವೇಳೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆಯಿಸಿ, ಅಕ್ಕಿ ನೀಡುವ ಬದಲು ವಿದ್ಯಾರ್ಥಿಗಳ ಮನೆಗೇ ಅಕ್ಕಿ ಪೂರೈಸಬೇಕು ಎನ್ನುವ ಬೇಡಿಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಭಾಶ್ಚಂದ್ರ ನಾಯ್ಕ ಹೆಗ್ನೂರು ಸರ್ಕಾರ ತಾನೇ ಶರತ್ತು, ನಿಯಮಗಳನ್ನು ವಿಧಿಸಿ, ಅದನ್ನು ಉಲ್ಲಂಘಿಸಲು ಪ್ರೇರೇಪಿಸುತ್ತಿದೆ. ಮಕ್ಕಳಿಗೆ ಶಾಲೆಗೆ ಕರೆಸಿ ಅಕ್ಕಿ ನೀಡುವ ಬದಲು ವಿದ್ಯಾರ್ಥಿಗಳ ಮನೆಗೇ ಅಕ್ಕಿ ಪೂರೈಸುವ ಬಗ್ಗೆ ಅಧಿಕಾರಿಗಳಿಗೆ ನಿರ್ಧೇಶನ ನೀಡಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವಶ್ಯವಿರುವವರಿಗೆ ಅಕ್ಕಿ ವಿತರಿಸದೆ, ಅವಶ್ಯವಿದ್ದವರಿಗೆ ಆಹಾರ ತಯಾರಿಸಿ ಕೊಡದೆ ಸರ್ಕಾರ ಜನವಿರೋಧಿಯಾಗಿ ವರ್ತಿಸುತ್ತಿರುವುದು ಕಾರ್ಮಿಕ, ಮತ್ತು ಎಡಪಕ್ಷಗಳ ಸಂಘಟನೆಗಳನ್ನು ಬಿಟ್ಟು ಉಳಿದವರಿಗೆ ಇದು ಅರ್ಥವಾಗದಿರುವುದು ದುರಂತ ಎನ್ನಲಾಗುತ್ತಿದೆ.


