
ಸಿದ್ದಾಪುರದ
ಶ್ರೇಯಸ್ ಆಸ್ಪತ್ರೆಯ ವೈದ್ಯರಾದ ಡಾ. ಕೆ. ಶ್ರೀಧರ ವೈದ್ಯರ ತಾಯಿ ಫಣಿಯಮ್ಮಾ ಸೀತಾರಾಮ ವೈದ್ಯ (96) ರವರು ಶ್ರೇಯಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು. ಅವರು ಡಾ. ಕೆ. ಶ್ರೀಧರ ವೈದ್ಯರನ್ನು ಹಾಗೂ ಸುಬ್ರಹ್ಮಣ್ಯ ವೈದ್ಯರನ್ನು ಒಳಗೊಂಡು, ಒಟ್ಟೂ ಐದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಟಿ. ಎಮ್.ಎಸ್ ಅಧ್ಯಕ್ಷರಾದ ಆರ್.ಎಮ್.ಹೆಗಡೆ ಬಾಳೆಸರ, ಲೈನ್ಸ್ ಕ್ಲಬ್ ಅಧ್ಯಕ್ಷರಾದ ಸಿ. ಎಸ್. ಗೌಡರ್ ಹೆಗ್ಗೋಡಮನೆ, ತಾಲೂಕಾ ಗುತ್ತಿಗೆದಾರರ ಅಧ್ಯಕ್ಷ ಸತೀಶ ಗೌಡರ್, ಹೆಗ್ಗೋಡಮನೆ, ಲೈನ್ಸ್ ಪ್ರಮುಖರಾದ ಜಿ. ಜಿ. ಹೆಗಡೆ ಬಾಳಗೋಡು ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕರೋನಾ ಪರಿಣಾಮ ಲೂಟಿಗಿಳಿದ ವ್ಯಾಪಾರಿಗಳು
ಕರೋನಾ ಮುನ್ನೆಚ್ಚರಿಕೆ ವಹಿಸದೆ ಕೇಂದ್ರ ಸರ್ಕಾರ ಮಾಡಿಟ್ಟಿರುವ ಲಾಕ್‍ಔಟ್ ನಿಂದಾಗಿ ಕೆಲವೆಡೆ ವ್ಯಾಪಾರಿಗಳು ಹಗಲುದರೋಡೆಗೆ ಇಳಿದಿರುವ ದೂರುಗಳು ಕೇಳಿ ಬರುತ್ತಿವೆ.
ಮನೆಮನೆಗೆ ತರಕಾರಿ,ಆಹಾರ ಸಾಮಗ್ರಿ ಪೂರೈಸುತ್ತಿರುವ ಸರ್ಕಾರಿ ನಿಯಂತ್ರಿತ ವ್ಯವಸ್ಥೆಯ ಲಾಭ ಪಡೆದು ವ್ಯಾಪಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವುದಕ್ಕೆ ಎಲ್ಲೆಡೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸೇರಿದಂತೆ ಕೆಲವೆಡೆ ವ್ಯಾಪಾರಿಗಳು ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚು ಪಡೆದು ತರಕಾರಿ, ಆಹಾರ ಸಾಮಗ್ರಗಳನ್ನು ಕೊಡುತ್ತಿರುವ ಬಗ್ಗೆ ಪತ್ರಕರ್ತರೊಬ್ಬರು ಆಕ್ಷೇಪಿಸಿದ್ದಾರೆ. ಇಂಥದ್ದೇ ವ್ಯಾಪಾರಿಗಳು ಸಿದ್ದಾಪುರದಲ್ಲಿ ಒಂದೊಂದು ಕಟ್ಟು ಬಸಳೆ, ಹರವೆ ಸೊಪ್ಪಿನ ಕಟ್ಟಿಗೆ ತಲಾ ನೂರು, ನೂರಾ ಇಪ್ಪತ್ತು ಪಡೆದಿರುವ ಬಗ್ಗೆ ಪ್ರಚಲಿತ ಆಶ್ರಮದ ನಾಗರಾಜ್ ನಾಯ್ಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
